ಸಾರಾಂಶ
ಸೋಮವಾರ ಸಂಜೆ ಇದೇ ವಿಚಾರಕ್ಕೆ ಇವರು ಆತನನ್ನು ಮಚ್ಚಿನಿಂದ ತಲೆಗೆ ಹೊಡೆದ ಕೊಲೆ ಮಾಡಿದ್ದಾರೆ. ಜಮೀನಿನಲ್ಲಿ ಕೊಲೆ ಮಾಡಿ ಶವವನ್ನು ರಸ್ತೆ ಬದಿಗೆ ಎಳೆದು ತಂದ ಹಾಕಿದ್ದು, ತಡ ರಾತ್ರಿ ಪೊಲೀಸರ ಬಳಿ ಹೋಗಿ ಶರಣಾಗಿ ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾರೆ.
ಚನ್ನಪಟ್ಟಣ: ಹುಲ್ಲು ಕುಯ್ಯುವ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಂಜಿತ್ ಕುಮಾರ್(೨೯) ಕೊಲೆಯಾದ ಯುವಕ. ಈತನಿಗೂ ಈತನ ಚಿಕ್ಕಪ್ಪ ನಾಗರಾಜು, ಮಂಗಳಮ್ಮ ಹಾಗೂ ಅವರ ಮಗ ಸುನೀಲ್ ಎಂಬುವವರಿಗೆ ಜಮೀನಿನಲ್ಲಿ ಹುಲ್ಲು ಕುಯ್ಯುವ ವಿಚಾರಕ್ಕೆ ಜಗಳ ನಡೆದಿದೆ. ಸೋಮವಾರ ಸಂಜೆ ಇದೇ ವಿಚಾರಕ್ಕೆ ಇವರು ಆತನನ್ನು ಮಚ್ಚಿನಿಂದ ತಲೆಗೆ ಹೊಡೆದ ಕೊಲೆ ಮಾಡಿದ್ದಾರೆ. ಜಮೀನಿನಲ್ಲಿ ಕೊಲೆ ಮಾಡಿ ಶವವನ್ನು ರಸ್ತೆ ಬದಿಗೆ ಎಳೆದು ತಂದ ಹಾಕಿದ್ದು, ತಡ ರಾತ್ರಿ ಪೊಲೀಸರ ಬಳಿ ಹೋಗಿ ಶರಣಾಗಿ ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಪೊಲೀಸರ ವಶದಲ್ಲಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರು ಕೊಲೆ ನಡೆದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.