ನ್ಯಾಯ ಸಿಗೋವರೆಗೂ ಹೋರಾಟ: ಶಿವಲಿಂಗ ಟಿರಕಿ

| Published : Oct 09 2025, 02:01 AM IST

ಸಾರಾಂಶ

ನೇಕಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಮತ್ತು ನೇಕಾರ ಸಮ್ಮಾನ ಯೋಜನೆ ಸೌಲಭ್ಯಕ್ಕೆ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಹೇಳಿಕೆ ನೀಡಿದ ಕೆಲವು ಸ್ವಯಂಘೋಷಿತ ನೇಕಾರ ನಾಯಕರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇದುವರೆಗಿನ ಹೋರಾಟಗಳಲ್ಲಿ ರಾಜ್ಯ ನೇಕಾರ ಸೇವಾ ಸಂಘ ನಮ್ಮದೇ ಬಸ್ ಚಾರ್ಜ್ ಹಾಕಿ, ಬುತ್ತಿ ಕಟ್ಟಿಕೊಂಡು ಹುಬ್ಬಳ್ಳಿ, ಬೆಂಗಳೂರು, ದೆಹಲಿಗಳವರೆಗೆ ಪ್ರತಿಭಟನಾ ಹೋರಾಟ ನಡೆಸಿದ್ದೇವೆ. ಅವುಗಳಲ್ಲಿ ಭಾಗಿಯಾದ ಎಲ್ಲ ನೇಕಾರರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬುಧವಾರ ಬನಹಟ್ಟಿಯ ಶ್ರೀಕಾಡಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನೇಕಾರರೊಡನೆ ಸಭೆ ನಡೆಸಿ ಸ್ಪಷ್ಟನೆ ನೀಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ಹಿಂದೆ ತೇರದಾಳ ಶಾಸಕ ಸಿದ್ದು ಸವದಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಮಾಡಿದ್ದ ನೂರಾರು ಕೋಟಿ ಮೊತ್ತದ ಅವ್ಯವಹಾರ ಖಂಡಿಸಿ, ಸರ್ಕಾರ ತನಿಖೆ ನಡೆಸಲು ಆಗ್ರಹಿಸಿ ಹೋರಾಟದ ಪರಿಣಾಮ ಶಾಸಕ ಸವದಿ ಸ್ವಯಂಘೋಷಿತ ನಾಯಕರ ಬಳಸಿಕೊಂಡು ಸಂಘ ಮತ್ತು ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತ ನ್ಯಾಯಯುತ ಹೋರಾಟ ಹತ್ತಿಕ್ಕಲು ಸಂಚು ನಡೆಸುತ್ತಿದ್ದಾರೆಂದು ಆರೋಪಿಸಿದ ಟಿರಕಿ ನೇಕಾರ ಹಿತಾಸಕ್ತಿ ಕಾಯಲು ಮತ್ತು ನೇಕಾರಿಕೆ ಉದ್ಯಮ ಉಳಿಸಲು ಸಂಘ ನಿರಂತರ ಹೋರಾಟಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು. ರಾಜೇಂದ್ರ ಮಿರ್ಜಿ, ಸಂಗಪ್ಪ ಉದಗಟ್ಟಿ, ಹೊಳೆಬಸಪ್ಪ ಚಿಂಚಖಂಡಿ, ಗಂಗಪ್ಪ ಒಂಟಗೋಡಿ, ರಾಜು ನಡುವಿನಮನಿ, ರಮೆಶ ಸೊರಗಾಂವಿ, ಲಕ್ಕಪ್ಪ ಪವಾರ್, ಮಲ್ಲಯ್ಯ ಮಠಪತಿ ಸೇರಿದಂತೆ ನೂರಾರು ನೇಕಾರರು ಉಪಸ್ಥಿತರಿದ್ದರು.