ಹಂತ ಹಂತವಾಗಿ ಕೆರೆಗನ್ನು ಭರ್ತಿ ಮಾಡಿ

| Published : Jul 15 2024, 01:51 AM IST

ಸಾರಾಂಶ

ಪ್ರಸಕ್ತ ವರ್ಷ ಕಳಸಕೊಪ್ಪ ಕೆರೆ ಸೇರಿ ಬಾದಾಮಿ ತಾಲೂಕಿನ ವಿವಿಧ ೭ ಕೆರೆಗೆ ನೀರು ತುಂಬಲು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ.ಪಾಟೀಲ ಜಾಕ್ವೇಲ್ ಪಂಪ್ ಹೌಸ್ನಲ್ಲಿ ಮೋಟಾರ್ ಪಂಪ್ನ ಬಟನ್ ಒತ್ತಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಪ್ರಸಕ್ತ ವರ್ಷ ಕಳಸಕೊಪ್ಪ ಕೆರೆ ಸೇರಿ ಬಾದಾಮಿ ತಾಲೂಕಿನ ವಿವಿಧ ೭ ಕೆರೆಗೆ ನೀರು ತುಂಬಲು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ.ಪಾಟೀಲ ಜಾಕ್ವೇಲ್ ಪಂಪ್‌ ಹೌಸ್‌ನಲ್ಲಿ ಮೋಟಾರ್ ಪಂಪ್‌ನ ಬಟನ್‌ ಒತ್ತಿ ಚಾಲನೆ ನೀಡಿದರು.

ಬಾಗಲಕೋಟೆ ತಾಲೂಕಿನ ೬ ಹಳ್ಳಿಗಳ ೧೧೪೩ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ ಹಾಗೂ ಬಾದಾಮಿ ತಾಲೂಕಿನ ಅನವಾಲ ಕೆರೆ, ಕೈನಕಟ್ಟಿ ಕೆರೆ, ಸಾಗನೂರ ಕೆರೆ, ಮಾಳಗಿ ಕೆರೆ, ಕೆರೂರ ಕೆರೆ, ಜಮ್ಮನಕಟ್ಟಿ ಕೆರೆ, ಕಟಗೇರಿ ಕೆರೆ, ವಿವಿಧ ೭ ಕೆರೆಗಳಿಗೆ ನೀರು ತುಂಬಿಸಲು ಹಿರೇಶೆಲ್ಲಿಕೇರಿ ಬಳಿ ಇರುವ ದಕ್ಷಿಣ ಹೇರಕಲ್ ಏತ ನಿರಾವರಿಯ ಜಾಕ್ವೇಲ್ ಪಂಪ್ ಹೌಸ್‌ನಲ್ಲಿ ಪೂಜೆ ಸಲ್ಲಿಸಿ ಬಟನ್ ಒತ್ತಿ ಕೆರೆಗಳಿಗೆ ನೀರು ತುಂಬಲು ಚಾಲನೆ ನೀಡಿದರು.

ಒಟ್ಟು ೯ ಮೋಟಾರ್‌ನಲ್ಲಿ ಸದ್ಯಕ್ಕೆ ಮೂರು ಮೋಟಾರಗಳನ್ನು ಚಾಲೂ ಮಾಡಿ ಕೆರೆಗೆ ನೀರು ಹರಿಸಲಾಗುತ್ತಿದೆ. ಹಂತ ಹಂತವಾಗಿ ಉಳಿದ ಮೋಟಾರ್‌ಗಳನ್ನು ಕೂಡಾ ಚಾಲು ಮಾಡಿ ಎಲ್ಲ ಕೆರೆಗಳು ಶೀಘ್ರ ಭರ್ತಿಯಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರಲ್ಲಿ ಸಂತಸ:

ಪ್ರಸಕ್ತ ವರ್ಷ ಮುಂಗಾರು ಮಳೆಗಳು ಕೂಡಾ ಸಕಾಲದಲ್ಲಿ ಆಗಿದ್ದು, ಬೆಳಗಾವಿ ಭಾಗದಲ್ಲಿ ಉತ್ತಮ ಮಳೆ ಸುರಿದು ಘಟಪ್ರಭಾ ನದಿಯಲ್ಲೀ ನೀರಿನ ಹರಿವು ಕೂಡಾ ಉತ್ತಮವಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರಿನ ಒಳವು ಹೆಚ್ಚಾಗಿದೆ. ಆಲಮಟ್ಟಿಯ ಹಿನ್ನೀರು ಕೂಡಾ ಆವರಿಸಿ ಜ್ವಾಲ್ ಪಂಪ್‌ಹೌಸ್‌ ಬಳಿ ನೀರಿ ಆವರಿಸಿದೆ. ಶಾಸಕರ ಸೂಚನೆಯಂತೆ ರೈತರ ಅನುಕೂಲಕ್ಕಾಗಿ ಮುಂಚಿತವಾಗಿ ಕೆರೆಗಳಿಗೆ ನೀರು ತುಂಬಿಸಲು ಚಾಲನೆ ನೀಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸುರಾಜ ಸಂಶಿ, ಕಾಂಗ್ರೆಸ್ ಯುವ ಮುಖಂಡ ನಾರಾಯಣ ಹಾದಿಮನಿ, ತಾಪಂ ಮಾಜಿ ಉಪಾಧ್ಯಕ್ಷ ಸಂಗಣ್ಣ ಮುಧೋಳ, ಸಲೀಂ ಶೇಕ್, ಜಿಪಂ ಮಾಜಿ ಸದಸ್ಯ ಪಾಂಡು ಪೊಲೀಸ್, ಬಂದೇನವಾಜ್ ಸೌದಾಗಾರ, ಕೆಬಿಜೆಎನೆಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಾಂತ ಲಮಾಣಿ, ಸಹಾಯಕ ಅಭಿಯಂತರ ನವೀನ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ ನಾಯಕ, ಸಹಾಯಕ ಅಭಿಯಂತರ ಎಸ್.ಎಸ್.ಹೊಸೂರು ಇನ್ನಿತರರು ಇದ್ದರು.