ಇಡೀ ದೇಶಕ್ಕೆ ರೇಷ್ಮೆ ಕೊಟ್ಟಿರುವಂತಹ ಬಯಲು ಸೀಮೆಯ ಕೋಲಾರ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಿರುವ ಜೊತೆಗೆ ಖಾಸಗಿ ಚಾಕಿ ಸಾಕಾಣಿಕೆ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಿ ಪ್ರತಿ ತಾಲೂಕಿಗೊಂದು ಸರ್ಕಾರಿ ಜಾಕಿ ಕೇಂದ್ರಗಳನ್ನು ತೆರೆದು ಸಬ್ಸಿಡಿ ಧರದಲ್ಲಿ ರೈತರಿಗೆ ರೇಷ್ಮೆ ಹುಳ ವಿತರಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಜಿಲ್ಲಾ ಉಸ್ತುವಾರಿ ಹಾಗೂ ರೇಷ್ಮೆ ಸಚಿವರನ್ನು ಒತ್ತಾಯಿಸಿದರು.ಇಡೀ ದೇಶಕ್ಕೆ ರೇಷ್ಮೆ ಕೊಟ್ಟಿರುವಂತಹ ಬಯಲು ಸೀಮೆಯ ಕೋಲಾರ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಲಕ್ಷಾಂತರ ರೈತರ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿರುವ ರೇಷ್ಮೆ ಉದ್ಯಮ ದಿನೇ ದಿನೇ ನಶಿಸಿ ಹೋಗುತ್ತಿದೆ.ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಕಟ್ಟಕಡೆಯ ರೇಷ್ಮೆ ಬೆಳೆಗಾರರಿಗೆ ತಲುಪಿಸಬೇಕಾದಂತಹ ಇಲಾಖೆಯಲ್ಲಿ 214 ಹುದ್ದೆಗಳಿಗೆ ಕೇವಲ 42 ಜನ ಮಾತ್ರ ಕೆಲಸ ನಿರ್ವಹಿಸಿ, ಒತ್ತಡದ ಜೊತೆಗೆ ಸಿಬ್ಬಂದಿ ಇಲ್ಲದೆ ಅನಾಥವಾಗಿ ಸರ್ಕಾರದ ಯೋಜನೆಗಳು ರೈತರಿಗೆ ಸಿಗದೆ ಮತ್ತೆ ವಾಪಸ್ಸು ಹೋಗುವ ಪರಿಸ್ತಿತಿ ಇದ್ದರೂ ರೇಷ್ಮೆ ಬೆಳೆಗಾರರನ್ನು ನಿರ್ಲಕ್ಷೆ ಮಾಡುತ್ತಿದ್ದಾರೆಂದು ಆರೋಪಿಸಿದರು.ಪತ್ರಿಕಾ ಹೇಳಿಕೆ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ವಕ್ಕಲೇರಿ ಹನುಮಯ್ಯ, ಗಿರೀಶ್, ರಾಜು, ಚಂದ್ರಪ್ಪ, ಧರ್ಮ, ಮುಂತಾದವರು ಇದ್ದರು.