ಆಸಂಗಿ ಬ್ಯಾರೇಜ್ ಭರ್ತಿ

| Published : Jun 09 2024, 01:32 AM IST

ಸಾರಾಂಶ

ಗುಳೇದಗುಡ್ಡ ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಸಮೀಪದ ಆಸಂಗಿ ಬ್ಯಾರೇಜ್‌ ಭರ್ತಿಯಾಗಿ ತುಂಬಿ ಹರಿಯುತ್ತಿದೆ.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು, ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಸಮೀಪದ ಆಸಂಗಿ ಬ್ಯಾರೇಜ್‌ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಗುಳೇದಗುಡ್ಡ ಮಾರ್ಗವಾಗಿ ನಿಂಬಲಗುಂದಿ, ಐಹೊಳೆ ಸ್ಥಳಗಳಿಗೆ ಹೋಗಲು ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿಗೆ ನೀರು ಹರಿದು ಬರುತ್ತಿದ್ದು, ಇದರಿಂದ ಆಸಂಗಿ ಬ್ಯಾರೇಜ್‌ ನಲ್ಲೂ ನೀರಿನ ಅರಿವು ಹೆಚ್ಚಳವಾಗಿ ಬ್ಯಾರೇಜ್ ಸಂಪೂರ್ಣವಾಗಿ ತುಂಬಿ ನೀರು ಮೇಲೆ ರಭಸವಾಗಿ ಹರಿಯುತ್ತಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಮೂಲಗಳಿಗೆ ಜೀವಕಳೆ ಬಂದಿದ್ದು, ಗುಳೇದಗುಡ್ಡದ ಹಿರೇ ಹಳ್ಳದ ದಿಡಗಿನ ಜಲಪಾತ, ಹಾನಾಪೂರ ಎಸ್.ಪಿ. ಗ್ರಾಮದ ಹಾಲಹಂಡೆ ಜಲಪಾತ, ಹುಲ್ಲಿಕೇರಿ ಎಸ್.ಪಿ ಗ್ರಾಮದ ಹತ್ತಿರದ ಅವ್ವಕ್ಕನ ಕೊಳ್ಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.