ಸಾರಾಂಶ
ಕನಕಗಿರಿಯಲ್ಲಿ ಆ್ಯಂಬುಲೆನ್ಸ್ ಕುರಿತು ‘ಹೆರಿಗೆಗೆ ಹೋಗುವ ಗರ್ಭಿಣಿಯರಿಗೆ ಖಾಸಗಿ ವಾಹನ ಗತಿ’ ಎಂಬ ಶೀರ್ಷಿಕೆಯಡಿ ಡಿ.೨೦ರಂದು ಕನ್ನಡಪ್ರಭ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ೧೦೮ ವ್ಯವಸ್ಥಾಪಕ ಪ್ರಭಾಕರ ಎಚ್ಚೆತ್ತುಕೊಂಡಿದ್ದು, ವರದಿ ಪ್ರಕಟಗೊಂಡ ಎರಡೇ ದಿನದಲ್ಲಿ ಕುಕನೂರು ತಾಲೂಕಿನಿಂದ ತುರ್ತು ಸಂದರ್ಭದ ರೋಗಿಗಳಿಗೆ ಅನುಕೂಲವಾಗಲು ೧೦೮ ವಾಹನ ನಿಯೋಜಿಸಿದ್ದಾರೆ.
ಕನಕಗಿರಿ: ೨೨ ಗ್ರಾಮಗಳ ರೋಗಿಗಳಿಗೆ ನೆರವಾಗಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಆ್ಯಂಬುಲೆನ್ಸ್ ಸಮಸ್ಯೆಗೆ ಕೊನೆಗೂ ಆರೋಗ್ಯ ಇಲಾಖೆಗೆ ಸ್ಪಂದಿಸಿದೆ. ಎರಡೇ ದಿನದಲ್ಲಿ ಆ್ಯಂಬುಲೆನ್ಸ್ ನಿಯೋಜಿಸಿದೆ.
ಎರಡು ತಿಂಗಳಿಂದಲೂ ೧೦೮ ತುರ್ತು ವಾಹನ ಇಲ್ಲದೇ ರೋಗಿಗಳು ಪರದಾಡಿದ್ದಲ್ಲದೆ, ಖಾಸಗಿ ವಾಹನಗಳ ಮೂಲಕ ಆಸ್ಪತ್ರೆ ತಲುಪಿ ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಹುಲಿಹೈದರ್ ನಿವಾಸಿ ಅಂಬಿಕಾ ಎಂಬವರ ಹೆರಿಗೆಗೆ ಆ್ಯಂಬುಲೆನ್ಸ್ ಸಮಸ್ಯೆಯಿಂದಾಗಿ ಟಂ ಟಂ ವಾಹನದಲ್ಲಿ ಬಂದು ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಮಾಡಿಸಿಕೊಂಡಿದ್ದರು. ಇದಕ್ಕೆ ಸ್ಥಳೀಯರು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಕನಕಗಿರಿಯಲ್ಲಿ ಆ್ಯಂಬುಲೆನ್ಸ್ ಕುರಿತು ‘ಹೆರಿಗೆಗೆ ಹೋಗುವ ಗರ್ಭಿಣಿಯರಿಗೆ ಖಾಸಗಿ ವಾಹನ ಗತಿ’ ಎಂಬ ಶೀರ್ಷಿಕೆಯಡಿ ಡಿ.೨೦ರಂದು ಕನ್ನಡಪ್ರಭ ವಿಸ್ತೃತ ವರದಿ ಪ್ರಕಟಿಸಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ೧೦೮ ವ್ಯವಸ್ಥಾಪಕ ಪ್ರಭಾಕರ ಎಚ್ಚೆತ್ತುಕೊಂಡಿದ್ದು, ವರದಿ ಪ್ರಕಟಗೊಂಡ ಎರಡೇ ದಿನದಲ್ಲಿ ಕುಕನೂರು ತಾಲೂಕಿನಿಂದ ತುರ್ತು ಸಂದರ್ಭದ ರೋಗಿಗಳಿಗೆ ಅನುಕೂಲವಾಗಲು ೧೦೮ ವಾಹನ ನಿಯೋಜಿಸಿದ್ದಾರೆ.ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ೧೦೮ ವಾಹನ ನಿಯೋಜಿಸಿದ್ದು, ಎಂದಿನಂತೆ ರೋಗಿಗಳ ಸೇವೆ ಆರಂಭವಾಗಿದೆ ಎಂದು ವೈದ್ಯಾಧಿಕಾರಿ ಕನಕಗಿರಿ ಸತೀಶ ಜೀರ‍್ಹಾಳ ಹೇಳಿದರು.ಡಿಎಚ್‌ಒ ಮೇಲೆ ಸಚಿವ ಕೆಂಡಾಮಂಡಲ: ಎರಡು ತಿಂಗಳಿಂದ ಆ್ಯಂಬುಲೆನ್ಸ್ ಸಮಸ್ಯೆ ಸರಿಪಡಿಸಲಾಗದಿದ್ದರೆ ಹೇಗೆ? ರೋಗಿಗಳ ಪರಿಸ್ಥಿತಿ ಏನಾಗಬೇಡ? ಜನರ ಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಿಎಚ್‌ಒ ಲಿಂಗರಾಜ ಅವರಿಗೆ ಸಚಿವ ಶಿವರಾಜ ತಂಗಡಗಿ ತರಾಟೆಗೆ ತೆಗೆದುಕೊಂಡರು.