ಸಮಸ್ಯೆ ಬಗ್ಗೆ ಕಟ್ಟಕಡೆ ವ್ಯಕ್ತಿಯೂ ಪ್ರಶ್ನಿಸಬೇಕು

| Published : Dec 25 2024, 01:32 AM IST

ಸಮಸ್ಯೆ ಬಗ್ಗೆ ಕಟ್ಟಕಡೆ ವ್ಯಕ್ತಿಯೂ ಪ್ರಶ್ನಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಗ್ರಾಮೀಣ ಭಾಗದ ಹಳ್ಳಿಗಳ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನಿಸುವ ಹಕ್ಕು ಮತ್ತು ಅವಕಾಶ ದೊರಕುವಂತೆ ಮಾಡುವುದೇ ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಯಂಕಂಚಿ ಗ್ರಾಮ ಪಂಚಾಯತಿ ಆವರಣದಲ್ಲಿ ಯಂಕಂಚಿ ಮತ್ತು ಖೈನೂರು ಗ್ರಾಮಗಳ ಜನಸ್ಪಂದನ ಸಭೆಯ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂದಗಿ: ಗ್ರಾಮೀಣ ಭಾಗದ ಹಳ್ಳಿಗಳ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನಿಸುವ ಹಕ್ಕು ಮತ್ತು ಅವಕಾಶ ದೊರಕುವಂತೆ ಮಾಡುವುದೇ ಜನಸ್ಪಂದನ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಯಂಕಂಚಿ ಗ್ರಾಮ ಪಂಚಾಯತಿ ಆವರಣದಲ್ಲಿ ಯಂಕಂಚಿ ಮತ್ತು ಖೈನೂರು ಗ್ರಾಮಗಳ ಜನಸ್ಪಂದನ ಸಭೆಯ ನಡೆಸಲಾಯಿತು.

ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನೀರು-ನೈರ್ಮಲ್ಯ, ವಿದ್ಯುತ್, ಆರೋಗ್ಯ ಹಾಗೂ ರಸ್ತೆಗಳ ದುರಸ್ತಿಯಂತಹ ವಿಷಯಗಳ ಕುರಿತು ಚರ್ಚೆ ಮತ್ತು ಸಂವಾದಗಳು ನಡೆದವು.ಈ ವೇಳೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು 18 ತಿಂಗಳಾಗಿದೆ ಅಷ್ಟ್ರಲ್ಲಿಯೇ ಸಾಧ್ಯವಾದಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇನ್ನುಳಿದ ಅವಧಿಯಲ್ಲಿ ಸಾಕಷ್ಟು ಅನುದಾನವನ್ನು ತಂದು ತಾಲೂಕಿನ ಪ್ರತಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯ ಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶೌಚಾಲಯದ ಸಮಸ್ಯೆ ಸಾಕಷ್ಟಿದ್ದು ಬಯಲು ಶೌಚಾಲಯ ನಿರ್ಮಿಸುವಂತೆ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸರ್ಕಾರಿ ಗೈಡ್ ಲೈನ್ ಪ್ರಕಾರ ಬಯಲು ಶೌಚಾಲಯ ನಿರ್ಮಿಸಲು ಅವಕಾಶವಿಲ್ಲ. ಮುಂದಿನ ದಿನಮಾನಗಳಲ್ಲಿ ಪ್ರತಿ ವಾರ್ಡಿಗೆ ಶೌಚಾಲಯದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಗ್ರಾಮದಲ್ಲಿ ಡ್ರೈನೇಜ್ ಮೇಲೆ ಸ್ಲ್ಯಾಬ್ ಹಾಕದೇ ಇರುವುದರಿಂದ ಕನೆಕ್ಟಿಂಗ್ ರೋಡಿನಿಂದ ಮುಖ್ಯ ರಸ್ತೆಗೆ ಹೋಗುವ ರಸ್ತೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರ ದೂರಿಗೆ ಉತ್ತರಿಸಿದ ಶಾಸಕರು, ಪಿಡಿಒ ಶೀಘ್ರವಾಗಿ ಸ್ಲಾಬ್ ಹಾಕಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಸಾಕಷ್ಟು ದೂರುಗಳು ಬಂದಾಗ ಉತ್ತರಿಸಿದ ಆರೋಗ್ಯ ಅಧಿಕಾರಿ ಸ್ಥಳ ಹಾಗೂ ಸಿಬ್ಬಂದಿಯ ಕೊರತೆ ಇರುವುದರಿಂದ ಎರಡು ಎಕರೆ ಜಮೀನು ಮಂಜೂರು ಮಾಡಿಸಿ ಕಟ್ಟಡದ ವ್ಯವಸ್ಥೆ ಹಾಗೂ ಸಿಬ್ಬಂದಿಯ ವ್ಯವಸ್ಥೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಶಾಸಕರು ಸ್ಥಳದ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಹೊಲಗಳಿಗೆ ಹೋಗುವ ರಸ್ತೆಗಳ ಸಮಸ್ಯೆ ಕುರಿತು ರೈತರಿಂದ ಸಾಕಷ್ಟು ದೂರುಗಳು ಬಂದಿದ್ದು ಅವುಗಳ ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ 25 ವಿಕಲಚೇತನರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.ಗ್ರಾಪಂ ಅಧ್ಯಕ್ಷ ಬಸವರಾಜ್ ಅಳ್ಳಗಿ, ತಾಪಂ ಮುಖ್ಯಾಧಿಕಾರಿ ರಾಮು ಅಗ್ನಿ, ಬಿಇಒ ಮಹಾಂತೇಶ ಯಡ್ರಾಮಿ, ಉಪಾಧ್ಯಕ್ಷೆ ಗುರುಬಾಯಿ ದೊಡ್ಡಮನಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಾನಂದ ಕೊಟಾರಗಸ್ತಿ, ಜಿ.ಆರ್.ಪಾಟೀಲ್ ಸೇರದಂತೆ ಗ್ರಾಪಂ ಸದಸ್ಯರು, ಊರಿನ ಮುಖಂಡರು,ಅಧಿಕಾರಿಗಳು ಇದ್ದರು.