ಹೆರೂರು ಗ್ರಾಮದ ಸಮುದಾಯ ಭವನದಲ್ಲಿ ಹಣಕಾಸಿನ ಆರ್ಥಿಕ ಸಪ್ತಾಹ ಕಾರ್ಯಕ್ರಮ ನಡೆಯಿತು. ಎಫ್‌. ಎಲ್‌. ಸಿ. ಅಧಿಕಾರಿ ನಬಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮನೆಯ ಗೃಹಿಣಿಯರು ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ತಿಂಗಳಿಗೆ ಇಂತಿಷ್ಟು ಖಾತೆಯಲ್ಲಿ ಸಂಗ್ರಹಿಸಿಡುವುದರಿಂದ ತುರ್ತು ಸಂದರ್ಭ ಹಣ ಉಪಯೋಗಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿದಾಗ ವಿಮೆಯಿಂದ ಚಿಕಿತ್ಸೆ ಪಡೆಯಬಹುದು ಎಂದು ಎಫ್.ಎಲ್.ಸಿ ಅಧಿಕಾರಿ ನಬಿ ಹೇಳಿದರು.

ಲೀಡ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಅವಾರ್ಡ್ ಸಂಸ್ಥೆ ವತಿಯಿಂದ ಹೆರೂರು ಗ್ರಾಮದ ಸಮುದಾಯ ಭವನದಲ್ಲಿ ಹಣಕಾಸಿನ ಆರ್ಥಿಕ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರು ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುವುದರಿಂದ ಸರ್ಕಾರದ ಎಲ್ಲ ಯೋಜನೆ ಸಾಲ ಸೌಲಭ್ಯಗಳನ್ನು ಬ್ಯಾಂಕ್‌ಗಳ ಮೂಲಕ ಪಡೆಯಬಹುದು. ಭವಿಷ್ಯದ ಭದ್ರತೆಗೆ ಮಾಸಿಕ ಆದಾಯದಲ್ಲಿ ಒಂದಷ್ಟು ಹಣ ಉಳಿಸಿ ಆರ್‌ಡಿ, ಇತರೆ ಕಟ್ಟುವುದರಿಂದ ಮಕ್ಕಳ ಶಿಕ್ಷಣ, ಮದುವೆ ಇನ್ನಿತರ ಸಂದರ್ಭ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಆರ್ಥಿಕ ಸಮಾಲೋಚಕರಾದ ಹರೀಶ್ ಸಿ ಜಿ ಇತರರು ಉಪಸ್ಥಿತರಿದ್ದರು.