ಯಕ್ಷಧ್ರುವ ಫೌಂಡೇಶನ್‌ನಿಂದ ಗಣೇಶ್‌ ಕೊಲಕಾಡಿಗೆ ಧನ ಸಹಾಯ

| Published : Dec 05 2024, 12:31 AM IST

ಯಕ್ಷಧ್ರುವ ಫೌಂಡೇಶನ್‌ನಿಂದ ಗಣೇಶ್‌ ಕೊಲಕಾಡಿಗೆ ಧನ ಸಹಾಯ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶ್‌ ಕೊಲಕಾಡಿಯವರಿಗೆ ಫೌಂಡೇಶನ್ ವತಿಯಿಂದ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಸಹಕಾರ ನೀಡಿದ್ದು ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು ಚಿಕಿತ್ಸಾ ವೆಚ್ಚಕ್ಕಾಗಿ 1000 ರುಪಾಯಿ ಯಕ್ಷಧ್ರುವ ಫೌಂಡೇಶನ್ ನೀಡುತ್ತಿದೆ ಎಂದು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಯಕ್ಷಗಾನದ ಅಪ್ರತಿಮ ವಿದ್ವಾಂಸ, ಪ್ರಸಂಗಕರ್ತ, ಛಂದೋ ಬ್ರಹ್ಮ ಗಣೇಶ್ ಕೊಲಕಾಡಿಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಕೇಂದ್ರ ಸಮಿತಿಯ ಪದಾಧಿಕಾರಿಗಳು ಕೊಲಕಾಡಿಯವರ ಮನೆಗೆ ಭೇಟಿ ಫೌಂಡೇಶನ್ ವತಿಯಿಂದ 50,000 ರು. ಧನಸಹಾಯ ನೀಡಿದರು.

ಗಣೇಶ್‌ ಕೊಲಕಾಡಿಯವರಿಗೆ ಫೌಂಡೇಶನ್ ವತಿಯಿಂದ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಸಹಕಾರ ನೀಡಿದ್ದು ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು ಚಿಕಿತ್ಸಾ ವೆಚ್ಚಕ್ಕಾಗಿ 1000 ರುಪಾಯಿ ಯಕ್ಷಧ್ರುವ ಫೌಂಡೇಶನ್ ನೀಡುತ್ತಿದೆ ಎಂದು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಈ ಸಂದರ್ಭ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ , ಕದ್ರಿ ನವನೀತ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ , ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ್ ಕುಮಾರ್ ಮೊಯ್ಲೊಟ್ಟು ಉಪಸ್ಥಿತರಿದ್ದರು.