ಕೃಷಿಗೆ ತೊಡಗುವ ಮುನ್ನ ಆರ್ಥಿಕ ಲೆಕ್ಕಾಚಾರ ಅಗತ್ಯ: ಶಿವಕುಮಾರ ಮಗದ

| Published : Jul 15 2025, 11:46 PM IST

ಸಾರಾಂಶ

ದ.ಕ ಮೀನುಗಾರಿಕಾ ಇಲಾಖೆ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಶ್ರೀರಾಜ್ ಮತ್ಸ್ಯ ಫಾರ್ಮ್ ಪಣಪಿಲ ಸಹಯೋಗದಲ್ಲಿ ಪಣಪಿಲ ಕೊಟ್ಟಾರಿಬೆಟ್ಟುವಿನಲ್ಲಿ ಮೀನು ಕೃಷಿಕರ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಹೃದ್ರೋಗ ತಡೆಯಲು ಹಾಗೂ ಬುದ್ಧಿಮತ್ತೆಗೆ ಮೀನು ಸಹಕಾರಿ. ಉತ್ತಮ ಪೌಷ್ಟಿಕಾಂಶವಿರುವ ಮೀನಿಗೆ ಕರಾವಳಿ ಮಾತ್ರವಲ್ಲ ಬೇರೆ ಪ್ರದೇಶಗಳಲ್ಲೂ ಬೇಡಿಕೆ ಹೆಚ್ಚಿದೆ. ಮೀನು ಮಾತ್ರವಲ್ಲ ಯಾವುದೇ ಕೃಷಿ ಮಾಡುವ ಮೊದಲು ಆರ್ಥಿಕ ಲೆಕ್ಕಾಚಾರ ಮಾಡುವುದರಿಂದ ಉತ್ತಮ ಕೃಷಿಕರಾಗಲು ಸಾಧ್ಯ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಹೇಳಿದ್ದಾರೆ.ದ.ಕ ಮೀನುಗಾರಿಕಾ ಇಲಾಖೆ, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಶ್ರೀರಾಜ್ ಮತ್ಸ್ಯ ಫಾರ್ಮ್ ಪಣಪಿಲ ಸಹಯೋಗದಲ್ಲಿ ಪಣಪಿಲ ಕೊಟ್ಟಾರಿಬೆಟ್ಟುವಿನಲ್ಲಿ ಮೀನು ಕೃಷಿಕರ ದಿನಾಚರಣೆಯ ಪ್ರಯುಕ್ತ ಎರಡು ದಿನಗಳ ಮತ್ಸ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಲಕೃಷಿ ತಜ್ಞ ಹೊನ್ನಾ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿದರು.ದರೆಗುಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅಧ್ಯಕ್ಷತೆ ವಹಿಸಿದರು. ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ವೈ ಎನ್ ಲಿಂಗನಗೌಡ, ದರೆಗುಡ್ಡೆ ಗ್ರಾಪಂ ಸದಸ್ಯರಾದ ಮುನಿರಾಜ ಹೆಗ್ಡೆ, ತುಳಸಿ ಮೂಲ್ಯ, ಉದ್ಯಮಿ ಹೇಮಾ ಕೆ.ಕೆ ಪೂಜಾರಿ, ಕೃಷಿಕರಾದ ಹರಿಯಪ್ಪ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಅಳಿಯೂರು ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಮತ್ತಿತರರಿದ್ದರು.ರಾಜೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು. ಪ್ರಭ ರಾಜೇಂದ್ರ ಕೋಟ್ಯಾನ್ ವಂದಿಸಿದರು.