ಸಾರಾಂಶ
ನಮ್ಮ ಪಿಕೆಪಿಎಸ್ ರೈತಾಪಿ ವರ್ಗದವರಿಗೆ ಆರ್ಥಿಕ ಸಬಲತೆ ಒದಗಿಸುವುದರ ಜೊತೆಗೆ ಪ್ರಸಕ್ತ ಸಾಲಿನಲ್ಲಿ ₹26.04 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಾಲೂಕಿನ ಜಾಲಿಹಾಳ ಪಿಕೆಪಿಎಸ್ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ನಮ್ಮ ಪಿಕೆಪಿಎಸ್ ರೈತಾಪಿ ವರ್ಗದವರಿಗೆ ಆರ್ಥಿಕ ಸಬಲತೆ ಒದಗಿಸುವುದರ ಜೊತೆಗೆ ಪ್ರಸಕ್ತ ಸಾಲಿನಲ್ಲಿ ₹26.04 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಾಲೂಕಿನ ಜಾಲಿಹಾಳ ಪಿಕೆಪಿಎಸ್ ಅಧ್ಯಕ್ಷ ಸಿದ್ಧನಗೌಡ ಪಾಟೀಲ ಹೇಳಿದರು.ಅವರು ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಜರುಗಿದ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಿಂದ ಪಡೆದಿರುವ ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರು ಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ನಿರ್ದೇಶಕ ಟಿ.ಎ.ಕೆರೂರ ಲಾಭ ವಿಂಗಡನೆ, ವಿ.ಆರ್.ಪಾಟೀಲ ಲೆಕ್ಕ ಪರಿಶೋಧಕರ ನೇಮಕಾತಿ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಗಂಗಾಧರ ಮೂಲಿಮನಿ ಹಿಂದಿನ ಸಭೆಯ ಠರಾವು, ಮೌನೇಶ ಬಡಿಗೇರ ಸ್ವಾಗತಿಸಿದರು. ಚೆನ್ನಪ್ಪ ಹಿರೇಮನಿ ನಿರೂಪಿಸಿದರು. ರೂಪಾ ಕಂಠೀಮಠ ವಂದಿಸಿದರು.ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಬಸವರಾಜ ಗೋಗೇರಿ, ಬಸವರಾಜ ಗೆದಗೇರಿ, ಶೇಖರಪ್ಪ ಕೋಟೆನ್ನವರ, ಬಸಪ್ಪ ದಳವಾಯಿ, ಲಕ್ಷ್ಮೀ ಜಾಲಗಾರ, ಮಮತಾಜಬೇಗಂ ದೊಡಮನಿ, ನಾಗಪ್ಪ ಹಿರೇಮನಿ, ಯಲ್ಲಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.