ಪಂಚ ಗ್ಯಾರಂಟಿಯಿಂದ ಆರ್ಥಿಕವಾಗಿ ಸಬಲೀಕರಣ: ಶಿವಾನಂದಸ್ವಾಮಿ

| Published : Jul 17 2025, 12:34 AM IST

ಪಂಚ ಗ್ಯಾರಂಟಿಯಿಂದ ಆರ್ಥಿಕವಾಗಿ ಸಬಲೀಕರಣ: ಶಿವಾನಂದಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾ ರ ಕಳೆದ ಎರಡು ವರ್ಷಗಳಿಂದ ₹1800 ಕೋಟಿ ರು.ಗಳನ್ನು ವ್ಯಯಿಸುವ ಮೂಲಕ ಜನರನ್ನು ಆರ್ಥಿಕವಾಗಿ ಸಬಲರಾಗಿಸಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾ ರ ಕಳೆದ ಎರಡು ವರ್ಷಗಳಿಂದ ₹1800 ಕೋಟಿ ರು.ಗಳನ್ನು ವ್ಯಯಿಸುವ ಮೂಲಕ ಜನರನ್ನು ಆರ್ಥಿಕವಾಗಿ ಸಬಲರಾಗಿಸಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ₹1800 ಕೋಟಿ ರು.ಗಳು ಜನಸಾಮಾನ್ಯರೊಂದಿಗೆ ಓಡಾಡಿರುವುದರಿಂದ ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಉಂಟಾಗುವ ಜೊತೆಗೆ ಅಭಿವೃದ್ಧಿಯ ಒಂದು ಭಾಗವಾಗಿದೆ. ಇದರಿಂದ ಬಹುತೇಕ ಕುಟುಂಬ ಗಳು ಆರ್ಥಿಕ ಹೊರೆ ಇಳಿಸಿಕೊಂಡು ನೆಮ್ಮದಿ ಜೀವನಕ್ಕೆ ರಾಜ್ಯ ಸರ್ಕಾರ ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಗೃಹಲಕ್ಷ್ಮೀ ಯೋಜನೆ ಜಾರಿಗೊಂಡು 24 ತಿಂಗಳು ಕಳೆದಿದ್ದು, ಈ ಪೈಕಿ 21 ತಿಂಗಳ ಕಂತುಗಳು ಮಧ್ಯವರ್ತಿಗಳ ಹಾವಳಿ ಗಳಿಲ್ಲದೇ ನೇರವಾಗಿ ಖಾತೆಗೆ ಜಮೆಯಾಗಿದೆ. ಇನ್ನುಳಿದ ಕಂತುಗಳು ಹಂತ ಹಂತಗಳ ಲ್ಲಿ ಜಮೆಗೊಳ್ಳಲಿದೆ ಎಂದ ಅವರು, ಮಹಿಳೆಯರು ಈ ಯೋಜನೆಯಿಂದ ಗೃಹೋಪಯೋಗಿ ವಸ್ತು ಖರೀದಿ ಮತ್ತು ಹೈನುಗಾರಿಕೆಗೆ ವಿನಿಯೋಗಿಸಿಕೊಂಡಿದ್ದಾರೆ ಎಂದರು.

ಶಕ್ತಿ ಯೋಜನೆಯಲ್ಲಿ ಶೃಂಗೇರಿ ಘಟಕ ಆರಂಭಗೊಂಡ ನಂತರ ಮಲೆನಾಡಿನ ಸಾರಿಗೆ ವ್ಯವಸ್ಥೆ ಸುಸ್ಥಿತಿಗೆ ಬರಲಿದೆ. ಅಲ್ಲಿಯ ವರೆಗೆ ಚಿಕ್ಕಮಗಳೂರು ಘಟಕದಿಂದಲೇ ಸಣ್ಣಪುಟ್ಟ ಲೋಪದೋಷಗಳು ಕಂಡುಬಂದಲ್ಲಿ ಪರಿಹರಿಸಲು ಮುಂದಾಗಲಿದೆ. ಒಟ್ಟಾರೆ ಎರಡು ವರ್ಷಗಳಲ್ಲಿ ಶಕ್ತಿ ಯೋಜನೆಯಡಿ 84 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಯುವ ನಿಧಿ ಯೋಜನೆಯಡಿ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ₹8 ಕೋಟಿ ರು.ಗೂ ಅಧಿಕ ಮೊತ್ತದ ಹಣ ಪಡೆದುಕೊಂಡಿದ್ದಾರೆ. ಜೊತೆಗೆ ತರಬೇತಿ ಒದಗಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯ ಶಿಬಿರ, ಸಂವಾದ ನಡೆಸುವ ಮೂಲಕ ಉದ್ಯೋಗ ಲಭಿಸುವವರೆಗೆ ಆರ್ಥಿಕ ಶಕ್ತಿ ತುಂಬುತ್ತಿದೆ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಿಂದ ಪಡಿತರದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ಸಂದಾಯಿಸಿತ್ತು. ಇದೀಗ ಸಂಪೂರ್ಣ 10 ಕೆಜಿ ವಿತರಿಸುತ್ತಿದೆ. ಮಲೆನಾಡು ಪ್ರದೇಶ ಹೊರತಾಗಿ ಬಯಲುಸೀಮೆ ಗೆ ಅಕ್ಕಿ ಜೊತೆಗೆ ರಾಗಿ ವಿತರಿಸುತ್ತಿದೆ. ಮುಂದೆ ಬೇಳೆ ಕಾಳು, ಅಡುಗೆ ಎಣ್ಣೆ ಹಾಗೂ ಇಂದಿರಾ ಕಿಟ್ ಒದಗಿಸುವ ಆಲೋಚನೆಯಿದ್ದು, ಜಿಲ್ಲೆಯಲ್ಲಿ 8 ಲಕ್ಷ ಮಂದಿ ಅನ್ನಭಾಗ್ಯದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಗೃಹಜ್ಯೋತಿ ಯೋಜನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಜಿಲ್ಲೆಯಲ್ಲಿ ಸಂಪೂರ್ಣ ಉಚಿತ ವಿದ್ಯುತ್‌ನ್ನು ಪಡೆದು ಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಆಶಯವು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಈಡೇರಿದೆ ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಗೌರವ್‌ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಯೋಜನೆಗಳು ಜನತೆಗೆ ಮುಟ್ಟಿಸುವ ಅಧಿಕಾರಿ ಗಳು ಕಾಳಜಿ ವಹಿಸಬೇಕು. ಅಲ್ಲಲ್ಲಿ ಲೋಪದೋಷ ಕಂಡುಬಂದಲ್ಲಿ ಶೀಘ್ರದಲ್ಲೇ ಬಗೆಹರಿಸುವ ಅಥವಾ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಪರಿಹಾರ ಕಂಡುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಇದೇ ವೇಳೆ ಯುವನಿಧಿ ಯೋಜನೆ ನೋಂದಾಯಿಸುವ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಂಕರ್‌ ಕೊರವರ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಎಸ್.ಕೃಷ್ಣೇಗೌಡ, ಸಮೀವುಲ್ಲಾ ಷರೀಫ್, ಹೇಮಾವತಿ, ಬಿ.ಜಿ.ಚಂದ್ರಮೌಳಿ, ಸದಸ್ಯರಾದ ಎಂ.ಮಲ್ಲೇಶ್, ಜೇಮ್ಸ್ ಡಿಸೋಜಾ, ಜಯ ರಾಮೇಗೌಡ, ಚಂದ್ರಪ್ಪ ಹಾಗೂ ವಿವಿಧ ತಾಲ್ಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. 16 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅವರ ಅಧ್ಯಕ್ಷತೆಯಲ್ಲಿ

ಬುಧವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆ ನಡೆಯಿತು.

------------------------