ಆರ್ಥಿಕ ಬೆಳವಣಿಗೆಗೆ ಶಿಸ್ತು, ಪ್ರಾಮಾಣಿಕತೆ ಅಗತ್ಯ: ದರ್ಶನಾಪೂರ

| Published : May 02 2024, 12:16 AM IST

ಸಾರಾಂಶ

ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಬ್ಯಾಂಕುಗಳಂತಹ ಸಣ್ಣ-ಸಣ್ಣ ಬ್ಯಾಂಕುಗಳ ಕೊಡುಗೆ ಅಪಾರ. ಜನರ ಪ್ರೀತಿ, ವಿಶ್ವಾಸ, ಸಹಕಾರ ಉಳಿಸಿಕೊಂಡಾಗ ಮಾತ್ರ ಸಹಕಾರ ಸಂಘಗಳು ಎತ್ತರಕ್ಕೆ ಬೆಳೆಯಲು ಸಾಧ್ಯ.

ಕನ್ನಡಪ್ರಭ ವಾರ್ತೆ ಶಹಾಪುರ

ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಬ್ಯಾಂಕುಗಳಂತಹ ಸಣ್ಣ-ಸಣ್ಣ ಬ್ಯಾಂಕುಗಳ ಕೊಡುಗೆ ಅಪಾರ. ಜನರ ಪ್ರೀತಿ, ವಿಶ್ವಾಸ, ಸಹಕಾರ ಉಳಿಸಿಕೊಂಡಾಗ ಮಾತ್ರ ಸಹಕಾರ ಸಂಘಗಳು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.

ನಗರದ ಸಿ.ಬಿ. ಕಮಾನ್ ಹತ್ತಿರ ಮಣಿಕಂಠ ಆರ್ಕೇಡ್ ನಲ್ಲಿ ಬುಧವಾರ ನಡೆದ ನೂತನ ಸಿಂಧು ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಿಂಧು ಸಹಕಾರಿ ಬ್ಯಾಂಕ್ ನಗರದ ಮತ್ತು ತಾಲೂಕಿನ ಜನತೆಗೆ ಸಹಕಾರಿಯಾಗಿ ಬೆಳೆಯಲಿ. ಸಮರ್ಪಕವಾಗಿ ಸಾಲ ವಿತರಣೆ ಮಾಡುವ ಮೂಲಕ ಉದ್ಯಮಿಗಳಿಗೆ, ಸ್ವಾವಲಂಬಿಯಾಗಿ, ಬದುಕು ಕಟ್ಟಿಕೊಳ್ಳುವವರಿಗೆ ಆರ್ಥಿಕವಾಗಿ ಸಹಕಾರ ನೀಡುವ ಮೂಲಕ ಜನತೆಯ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಲಿ. ಬ್ಯಾಂಕು ಸಹ ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಜಶೇಖರ ಬಿ. ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ಆರ್ಕೇಡ್ ಮಾಲೀಕ ಗುರು ಮಣಿಕಂಠ, ಉದ್ಯಮಿ ರಾಜು ಆನೇಗುಂದಿ, ಡಾ. ಭೀಮರಡ್ಡಿ, ಡಾ. ಮಂಜುನಾಥ ಸ್ವಾಮಿ, ಬಸವರಾಜ ಮಣಿಕಂಠ, ನಿರ್ದೇಶಕರಾದ ಅಮರೇಶ ಹಟ್ಟಿ, ವಿಜಯಕುಮಾರ ಛಾಜೇಡ್, ಆನಂದ ಜೈನ್, ಆನಂದಕುಮಾರ ಕೊಂಡ, ದುರ್ಗಪ್ಪ ಕಟ್ಟಾಲಿ, ವಿಶ್ವನಾಥರಡ್ಡಿ ದರ್ಶನಾಪೂರ, ಬಸವರಾಜ ಹೇರುಂಡಿ ಸೇರಿದಂತೆ ಇತರರಿದ್ದರು.