ಜನರಲ್ಲಿ ಆರ್ಥಿಕ ಸಾಕ್ಷರತೆ, ಉಳಿತಾಯ ಪ್ರಜ್ಞೆ ಬೆಳೆಯಬೇಕು; ಎಂ.ಬಿ.ಹರಿಪ್ರಸಾದ್

| Published : Jul 08 2024, 12:34 AM IST

ಜನರಲ್ಲಿ ಆರ್ಥಿಕ ಸಾಕ್ಷರತೆ, ಉಳಿತಾಯ ಪ್ರಜ್ಞೆ ಬೆಳೆಯಬೇಕು; ಎಂ.ಬಿ.ಹರಿಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಗಳು ಹೆಚ್ಚಾಗುತ್ತಿವೆ. ಆರ್ಥಿಕ ತಜ್ಞರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಹಾಗೆ ಆರ್ಥಿಕ ಪ್ರಗತಿಗೆ ಎಲ್ಲಾ ಮಹಿಳೆಯರು ಉದ್ಯೋಗಸ್ಥರು, ಉದ್ಯಮಿಗಳಾಗಬೇಕು. ಒಂದೇ ವರ್ಗದ ಕೈಯಲ್ಲಿ ಆಸ್ತಿ, ಅಧಿಕಾರ, ಸಂಪತ್ತು ಇದ್ದರೆ ಪ್ರಗತಿ ಅಸಾಧ್ಯ .

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಜನರಲ್ಲಿ ಆರ್ಥಿಕ ಸಾಕ್ಷರತೆ, ಉಳಿತಾಯ ಪ್ರಜ್ಞೆ ಬೆಳೆಯಬೇಕು ಎಂದು ಸುಪ್ರೀಂಕೋರ್ಟ್ ವಕೀಲ ಎಂ.ಬಿ.ಹರಿಪ್ರಸಾದ್ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದ ಮಂಡ್ಯ ತಾಲೂಕು ಶಾಖೆ ಆಯೋಜಿಸಿದ್ದ ಸಹಕಾರ ಇಲಾಖೆಯಿಂದ ಬಂದ ನೂತನ ಯಶಸ್ವಿನಿ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಜಗತ್ತಿನಲ್ಲಿ ಆರೋಗ್ಯ ಮತ್ತು ಆರ್ಥಿಕ ಸಾಕ್ಷರತೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಮಹಿಳೆಯರಲ್ಲಿ ಹಣ ಉಳಿತಾಯದ ಮನೋಭಾವ ಹೆಚ್ಚಾದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.

ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಗಳು ಹೆಚ್ಚಾಗುತ್ತಿವೆ. ಆರ್ಥಿಕ ತಜ್ಞರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಹಾಗೆ ಆರ್ಥಿಕ ಪ್ರಗತಿಗೆ ಎಲ್ಲಾ ಮಹಿಳೆಯರು ಉದ್ಯೋಗಸ್ಥರು, ಉದ್ಯಮಿಗಳಾಗಬೇಕು. ಒಂದೇ ವರ್ಗದ ಕೈಯಲ್ಲಿ ಆಸ್ತಿ, ಅಧಿಕಾರ, ಸಂಪತ್ತು ಇದ್ದರೆ ಪ್ರಗತಿ ಅಸಾಧ್ಯ ಎಂದು ಎಚ್ಚರಿಸಿದ್ದರು.

ಎವಿಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಸಣ್ಣ ಸಣ್ಣ ಶೋಷಿತ ಸಮುದಾಯಗಳು ಆರ್ಥಿಕ ಪ್ರಜ್ಞೆ ಹೆಚ್ಚಿಸಿಕೊಳ್ಳಬೇಕು. ಸಹಕಾರ ಸಂಘಗಳಲ್ಲಿ ಉಳಿತಾಯ ಮಾಡುವ ಮನೋಭಾವ ಹೆಚ್ಚಾಗಬೇಕು ಎಂದರು.

ಸಹಕಾರ ಇಲಾಖೆ ತಂದಿರುವ ಯಶಸ್ವಿನಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ದುಬಾರಿ ಚಿಕಿತ್ಸೆಗೆ ಕಾರ್ಡ್ ಅನುಕೂಲಕ್ಕೆ ಬರುತ್ತದೆ. ಆರ್ಥಿಕ ನೆರವು ನೀಡುತ್ತವೆ, ಸ್ತ್ರೀ ಶಕ್ತಿ ಸಂಘಗಳು, ಮಹಿಳಾ ಗುಂಪುಗಳು ಒಗ್ಗೂಡಿ ಎವಿಎಸ್ ಎಸ್ ಶಾಖೆಗಳಲ್ಲಿ ಸದಸ್ಯತ್ವ ಪಡೆದು ಯಶಸ್ವಿನಿ ಯೋಜನೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದ ರಾಜ್ಯ ನಿರ್ದೇಶಕ ಸಂಪತ್, ತಾಲೂಕು ಶಾಖೆ ನಿರ್ವಾಹಣ ಮಂಡಳಿ ಗುರುಶಂಕರ್, ಜಯಶಂಕರ್, ನಿರ್ದೇಶಕರಾದ ನಾರಾಯಣಸ್ವಾಮಿ, ಕುಮಾರ್ ಮತ್ತಿತರರಿದ್ದರು.