ಪಟ್ಟಣದ ಸರ್ವೋದಯ ಗ್ರಾಮವಿಕಾಸ ಸೌಹಾರ್ದ ಸಹಕಾರಿಯ ವತಿಯಿಂದ ಸರ್ಕಾರಿ ನೌಕರರ ಭವನದ ಆವಾರದಲ್ಲಿ ಎಟಿಎಂ ಕಾರ್ಯಾರಂಭಗೊಂಡಿತು.
ಸರ್ಕಾರಿ ನೌಕರರ ಭವನದ ಆವಾರದಲ್ಲಿ ಎಟಿಎಂ ಕಾರ್ಯಾರಂಭ
ಕನ್ನಡಪ್ರಭ ವಾರ್ತೆ ಯಲ್ಲಾಪುರಪಟ್ಟಣದ ಸರ್ವೋದಯ ಗ್ರಾಮವಿಕಾಸ ಸೌಹಾರ್ದ ಸಹಕಾರಿಯ ವತಿಯಿಂದ ಸರ್ಕಾರಿ ನೌಕರರ ಭವನದ ಆವಾರದಲ್ಲಿ ಎಟಿಎಂ ಕಾರ್ಯಾರಂಭಗೊಂಡಿತು.
ಉದ್ಘಾಟನೆ ನೆರವೇರಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಹಕಾರಿ ಸಂಘಗಳು ಆರಂಭಗೊಂಡ ನಂತರ ಹಣಕಾಸಿನ ವ್ಯವಹಾರಗಳು ಸರಳಗೊಂಡಿವೆ. ಬಡವರ, ಕಾರ್ಮಿಕರ ಬದುಕಿಗೆ ಆರ್ಥಿಕವಾದ ಬಲ ದೊರೆತಿದೆ. ಸಹಕಾರಿ ಸಂಘಗಳ ಮೂಲಕ ಅನೇಕ ಜನೋಪಯೋಗಿ ಕಾರ್ಯಗಳನ್ನು ಮಾಡಲು ಅವಕಾಶವಿದ್ದು, ಆ ನಿಟ್ಟಿನಲ್ಲಿ ಸಂಘಗಳು ಮುನ್ನಡೆಯಬೇಕು ಎಂದರು.ಯುಕೆ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರಿಂದ ಹಣ ಪಡೆದು, ಜನರಿಗೆ ನೀಡಿ ಎಲ್ಲರನ್ನು ಆರ್ಥಿಕ ಸದೃಢರನ್ನಾಗಿಸುವುದು ಸಹಕಾರಿ ಸಂಘಗಳ ಉದ್ದೇಶ. ಸರ್ಕಾರದ ಬಜೆಟ್ ನಷ್ಟೇ ಹಣಕಾಸಿನ ವ್ಯವಹಾರ ಸಹಕಾರಿ ಕ್ಷೇತ್ರದಲ್ಲೂ ನಡೆಯುತ್ತದೆ. ದೊಡ್ಡ ಬ್ಯಾಂಕ್ ಗಳು ಕೇವಲ ಶ್ರೀಮಂತರಿಗೆ ಎಂಬ ಭಾವನೆ ಇದೆ. ಆದರೆ ಸಹಕಾರಿ ಸಂಘಗಳಲ್ಲಿ ಬೇಧವಿಲ್ಲದೇ ಜನಸಾಮಾನ್ಯರನ್ನೂ ಪ್ರೀತಿಯಿಂದ ಕಾಣುತ್ತಾರೆ ಎಂದರು.
ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಯಲ್ಲಾಪುರ ಶಾಖಾ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ, ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಗ್ರಾಮವಿಕಾಸ ಸೌಹಾರ್ದ ಸಹಕಾರಿಯ ಅಧ್ಯಕ್ಷ ಘನಶ್ಯಾಮ ಜೋಶಿ ಮಾತನಾಡಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಪ್ರಮುಖರಾದ ಪ್ರಸನ್ನ ಭಟ್ಟ, ಗಣಪತಿ ಕುಂಟೆಮನೆ, ಮುಖ್ಯ ಕಾರ್ಯನಿರ್ವಾಹಕ ನಾಗೇಂದ್ರ ನಾಯ್ಕ ಇತರರಿದ್ದರು. ಸಂಘದ ನಿರ್ದೇಶಕ ಬಾಲಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶ್ರೀಧರ ಅಣಲಗಾರ ಸ್ವಾಗತಿಸಿ, ನಿರ್ವಹಿಸಿದರು.