ಲೋಕಸಭೆ ಮತದಾನದಲ್ಲಾದ ವ್ಯತ್ಯಾಸಗಳಿಗೆ ಕಾರಣ ಹುಡುಕಿ

| Published : Jun 12 2024, 12:31 AM IST

ಲೋಕಸಭೆ ಮತದಾನದಲ್ಲಾದ ವ್ಯತ್ಯಾಸಗಳಿಗೆ ಕಾರಣ ಹುಡುಕಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಹೋದಾಗ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಪಕ್ಷ ಹೆಚ್ಚು ಲೀಡ್‌ ಗಳಿಕೆ ವಿಷಯದಲ್ಲಿ ಮತದಾನದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಂತಹ ಕಡೆ ಹಿನ್ನಡೆಗೆ ಕಾರಣ ಏನೆಂಬುದನ್ನು ಗುರುತಿಸಿ, ಸರಿಪಡಿಸುವ ಕೆಲಸ ಮಾಡುವಂತೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಸೂಚಿಸಿದ್ಧಾರೆ.

- ಗೃಹ ಕಚೇರಿ ಸಭೆಯಲ್ಲಿ ಕಾಂಗ್ರೆಸ್ ಬ್ಲಾಕ್‌ ಅಧ್ಯಕ್ಷರಿಗೆ ಸಂಸದೆ ಡಾ.ಪ್ರಭಾ ತಾಕೀತು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ಹೋದಾಗ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಪಕ್ಷ ಹೆಚ್ಚು ಲೀಡ್‌ ಗಳಿಕೆ ವಿಷಯದಲ್ಲಿ ಮತದಾನದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಂತಹ ಕಡೆ ಹಿನ್ನಡೆಗೆ ಕಾರಣ ಏನೆಂಬುದನ್ನು ಗುರುತಿಸಿ, ಸರಿಪಡಿಸುವ ಕೆಲಸ ಮಾಡುವಂತೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಸೂಚಿಸಿದರು.

ನಗರದ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಸೋಮವಾರ ಪಕ್ಷದ ಬ್ಲಾಕ್ ಅಧ್ಯಕ್ಷರು, ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳ ಯೋಜನೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಕೆಲಸಗಳ ಮಾಡುತ್ತಿರುವುದಕ್ಕೆ ಜನರಿಂದ ಚುನಾವಣೆ ಪ್ರಚಾರದ ವೇಳೆ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಮತದಾನದ ವೇಳೆ ವ್ಯತ್ಯಾಸವಾದ ಬಗ್ಗೆ ಸ್ವತಃ ಎಐಸಿಸಿ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಇಂತಹ ಬೆಳವಣಿಗೆ ಆಗದಂತೆ ಜಿಲ್ಲೆ, ಕ್ಷೇತ್ರಾದ್ಯಂತ ನೀವೆಲ್ಲಗೂ ಗಮನಹರಿಸುವಂತೆ ಸೂಚನೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಪಿ.ಸಿ. ಗೋವಿಂದಸ್ವಾಮಿ, ಹದಡಿ ಜಿ.ಸಿ. ನಿಂಗಪ್ಪ, ದಕ್ಷಿಣ ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಬಸವಾಪಟ್ಟಣ ಬಿ.ಜಿ.ನಾಗರಾಜ, ಕಮ್ಮತ್ತಹಳ್ಳಿ ಮಂಜುನಾಥ, ಎಂ.ಜಿ.ಅಂಜಿನಪ್ಪ, ಹರಿಹರ ಅಧ್ಯಕ್ಷ ಶ್ರೀನಿವಾಸ ನಂದಿಗಾವಿ, ಬಿ.ಕೆ.ಪರಶುರಾಮ, ಕುಬೇರಪ್ಪ, ಎಂ.ವಿ.ಅಂಜಿನಪ್ಪ, ಎಲ್.ಬಿ.ಹನುಮಂತಪ್ಪ, ಜಬೀವುಲ್ಲಾ, ಶ್ರೀನಿವಾಸ, ಹಬೀದ್ ಅಲಿ, ಶಂಷೇರ್ ಅಹಮ್ಮದ್ ಇತರರು ಇದ್ದರು.

- - - -11ಕೆಡಿವಿಜಿ11, 12:

ದಾವಣಗೆರೆಯ ಗೃಹ ಕಚೇರಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಸಭೆ ನಡೆಸಿ, ಚುನಾವಣೆ ವಿಷಯ ಕುರಿತು ಚರ್ಚೆ ನಡೆಸಿದರು. ಪಕ್ಷ ಸಂಘಟನೆ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.