ಕಂಡಕಂಡಲ್ಲಿ ಕಸ ಎಸೆದರೆ ದಂಡ

| Published : May 22 2024, 12:55 AM IST

ಸಾರಾಂಶ

ಸೂಲಿಬೆಲೆ: ಇಲ್ಲಿನ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರ ತಿಳಿವಳಿಕೆ ಪತ್ರ ಹಂಚಿದ್ದು ಗ್ರಾಮ ನೈರ್ಮಲ್ಯದ ಹಿತದೃಷ್ಟಿಯಿಂದ ಇದನ್ನು ಚಾಚೂತಪ್ಪದೆ ಪಾಲಿಸಬೇಕು, ಇಲ್ಲವಾದಲ್ಲಿ ದಂಡ ಕಟ್ಟಬೇಕಿರುವುದು ಗ್ಯಾರಂಟಿ ಎಂಬ ಸೂಚನೆ ನೀಡಲಾಗಿದೆ.

ಸೂಲಿಬೆಲೆ: ಇಲ್ಲಿನ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರ ತಿಳಿವಳಿಕೆ ಪತ್ರ ಹಂಚಿದ್ದು ಗ್ರಾಮ ನೈರ್ಮಲ್ಯದ ಹಿತದೃಷ್ಟಿಯಿಂದ ಇದನ್ನು ಚಾಚೂತಪ್ಪದೆ ಪಾಲಿಸಬೇಕು, ಇಲ್ಲವಾದಲ್ಲಿ ದಂಡ ಕಟ್ಟಬೇಕಿರುವುದು ಗ್ಯಾರಂಟಿ ಎಂಬ ಸೂಚನೆ ನೀಡಲಾಗಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಪ್ರಾವಿಜನ್ ಸ್ಟೋರ್, ಬೇಕರಿ, ಹಣ್ಣು ವ್ಯಾಪಾರ, ಹಾರ್ಡ್‌ವೇರ್, ಎಲೆಕ್ಟ್ರಿಕಲ್, ಎಲೆ ವ್ಯಾಪಾರ, ಹೋಟಲ್, ಟೀ, ಕಾಫಿ, ತರಕಾರಿ ಅಂಗಡಿಗಳು, ಕೋಳಿ ಮಾಂಸದ ಅಂಗಡಿ ವ್ಯಾಪಾರಸ್ಥರಿಗೆ ಈ ರೀತಿ ತಿಳಿವಳಿಕೆ ಕೊಟ್ಟು, ತಮ್ಮತಮ್ಮ ಅಂಗಡಿಗಳಲ್ಲಿ ಸಂಗ್ರಹವಾಗುವ ಕಸವನ್ನು ಗ್ರಾಮ ಪಂಚಾಯತಿ ಕಸದ ಗಾಡಿಗೆ ನೀಡುವಂತೆ ಸೂಚಿಸಲಾಗಿದೆ.

ನಿಯಮ ಉಲ್ಲಂಘಿಸಿ ಆಸ್ಪತ್ರೆ, ಶಾಲೆ ಮುಂಭಾಗ, ಮುಖ್ಯರಸ್ತೆಗಳ ಅಕ್ಕಪಕ್ಕ, ಸಾರ್ವಜನಿಕರು ಒಡಾಟದ ಸ್ಥಳಗಳಲ್ಲಿ ಕಸ ಹಾಕುತ್ತಿದ್ದು ಇದರಿಂದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವ ಅವಕಾಶಗಳಿವೆ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆದೇಶ ಹೊರಡಿಸಿ ಸೂಚಿಸಲಾಗಿದೆ.

ಪ್ರತಿನಿತ್ಯ ಗ್ರಾಮ ಪಂಚಾಯತಿ ಸ್ವಚ್ಛತಾ ವಾಹಿನಿಗಳು ಕಸ ಸಂಗ್ರಹ ಮಾಡುತ್ತಿದ್ದು ಒಣ ಕಸ ಮತ್ತು ಹಸಿ ಕಸವನ್ನು ವಿಂಗಡಿಸಲು ಅನುಕೂಲ ಮಾಡಲಾಗುತ್ತದೆ. ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವಂತಹ ಬೀದಿಯಲ್ಲಿ ಕಸ ಚೆಲ್ಲಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಗ್ರಾಮ ಪಂಚಾಯತಿ ಗಮನಕ್ಕೆ ತರಬಹುದಾಗಿದೆ.

ಕೋಟ್..........

ಸ್ಥಳೀಯ ವೈದ್ಯಾಧಿಕಾರಿಗಳು ಪಂಚಾಯತಿಗೆ ಪದೇಪದೇ ಆರೋಗ್ಯ ದೃಷ್ಟಿಯಿಂದ ಸೂಚನೆ ನೀಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ನಿಯಮ ಪಾಲಿಸದ ಅಂಗಡಿ ಮಾಲೀಕರಿಗೆ 5 ಸಾವಿರದಿಂದ 10 ಸಾವಿರದವರೆಗೆ ದಂಢ ವಿಧಿಸಲಾಗುವುದು.

-ಮಂಜುನಾಥ್, ಪಿಡಿಒ, ಸೂಲಿಬೆಲೆ ಗ್ರಾಪಂಕೋಟ್‌........

ಪದೇಪದೇ ಕಸವನ್ನು ರಸ್ತೆಯ ಇಕ್ಕೆಲಗಳಲ್ಲಿ ಬಿಸಾಡಿದರೆ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಕರ್ನಾಟಕ ಗ್ರಾಮ ಸ್ವರಾಜ್ 1993ರ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು.

-ಚಂದ್ರಪ್ಪ, ಕಾರ್ಯದರ್ಶಿ, ಸೂಲಿಬೆಲೆ ಗ್ರಾಪಂಕೋಟ್‌......

ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಧ್ಯೇಯದೊಂದಿಗೆ ಈ ಸಾರ್ವಜನಿಕರ ತಿಳಿವಳಿಕೆ ಪತ್ರ ಹೊರಡಿಸಲಾಗಿದೆ. ಗ್ರಾಮ ನೈರ್ಮಲ್ಯ ನಮ್ಮ ಜವಾಬ್ದಾರಿ ಎಂಬ ಅರಿವು ಸ್ವಯಂಪ್ರೇರಿತವಾಗಿ ಮೂಡಬೇಕು.

-ಜನಾರ್ಧನರೆಡ್ಡಿ, ಅಧ್ಯಕ್ಷರು, ಸೂಲಿಬೆಲೆ ಗ್ರಾಪಂ

ಚಿತ್ರ; ೧೭ ಸೂಲಿಬೆಲೆ ೧ ಜೆಪಿಜೆ ನಲ್ಲಿದೆಚಿತ್ರ; ೧೭ ಸೂಲಿಬೆಲೆ ೨ ಜೆಪಿಜೆ ನಲ್ಲಿದೆಚಿತ್ರ; ೧೭ ಸೂಲಿಬೆಲೆ ೩ ಜೆಪಿಜೆ ನಲ್ಲಿದೆ