ಈಶ್ವರಪ್ಪ ವಿರುದ್ಧ ದಾಖಲಾದ ಎಫ್.ಐ.ಆರ್. ಕೈ ಬಿಡಿ

| Published : Nov 17 2024, 01:15 AM IST

ಸಾರಾಂಶ

ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ದಾಖಲಿಸಿರುವ ಎಫ್.ಐ.ಆರ್. ಕೈಬಿಡುವಂತೆ ಆಗಹಿಸಿ ರಾಷ್ಟ್ರಭಕ್ತ ಬಳಗದ ಸದಸ್ಯರು ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ದಾಖಲಿಸಿರುವ ಎಫ್.ಐ.ಆರ್. ಕೈಬಿಡುವಂತೆ ಆಗಹಿಸಿ ರಾಷ್ಟ್ರಭಕ್ತ ಬಳಗದ ಸದಸ್ಯರು ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದರು.

ಈಶ್ವರಪ್ಪನವರು ಪತಿಕಾಗೋಷ್ಠಿಯಲ್ಲಿ ವಿವಾದಿತ ಹೇಳಿಕೆ ನೀಡಿದ್ದರೆಂದು ಜಯನಗರ ಪೊಲೀಸರು ಸ್ವಯಂ ಪೇರಿತವಾಗಿ ಸುಮೋಟೋ ಕೇಸು ದಾಖಲಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪನವರು ಹಿಂದುತ್ವದ ಪರವಾಗಿ ಹಿಂದುಗಳ ರಕ್ಷಣೆಗಾಗಿ ಮಾತನಾಡುತ್ತ, ರಾಜ್ಯದಲ್ಲಿ ವಕ್ಫ್ ಬೋರ್ಡ್ ಬಡ ರೈತರ ಜಮೀನು, ಹಿಂದು ಮಠ ಮಂದಿರಗಳ ಆಸ್ತಿ, ಸರ್ಕಾರಿ ಶಾಲೆಗಳ ಜಾಗಕ್ಕೆ ವಕ್ಫ್ ಬೋರ್ಡ್ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸರ್ಕಾರದ ಈ ಅಚಾತುರ್ಯಗಳು ಮತ್ತು ಹಿಂದೂ ವಿರೋಧಿ ನೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಹುಸಂಖ್ಯಾತರಾದ ಹಿಂದುಗಳ ರಕ್ಷಣೆ ಮತ್ತು ಆಸ್ತಿ ಉಳಿಸಲು ಸಮಸ್ತ ಹಿಂದೂ ಸಮಾಜ ಮತ್ತು ಸಾಧು ಸಂತರು ಒಟ್ಟಾಗಿ ಹೋರಾಟಕ್ಕೆ ಇಳಿದರೆ ಅನಾಹುತವಾಗಬಹುದು ಎಂದು ಎಚ್ಚರಿಕೆ ನುಡಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು ಅಷ್ಟೇ ಎಂದು ಪ್ರತಿಭಟನಾಕಾರರು ತಿಳಿಸಿದರು.ವಿಚಲಿತಗೊಂಡಿರುವ ಕಾಂಗ್ರೆಸ್ ಸರ್ಕಾರ ಈಶ್ವರಪ್ಪನವರ ವಿರುದ್ಧ ದುರುದ್ದೇಶದಿಂದ ಜಯನಗರ ಠಾಣಾ ಪೊಲೀಸರ ಮೇಲೆ ಒತ್ತಡ ಹೇರಿ ದೂರು ದಾಖಲಿಸಿದ್ದಾರೆ. ಪೊಲೀಸರು ವಾಲ್ಮೀಕಿ ಹಗರಣವಾದಾಗ ಯಾಕೆ ಸುಮೋಟೋ ದೂರು ದಾಖಲಿಸಿಲ್ಲ. ಇದೊಂದು ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರದ ಮಾನಸಿಕ ಧೋರಣೆ. ಕೆ.ಎಸ್. ಈಶ್ವರಪ್ಪನವರ ವಿರುದ್ಧದ ಕೇಸನ್ನು ವಾಪಾಸ್ಸು ಪಡೆಯದಿದ್ದರೆ ರಾಷ್ಟ್ರಭಕ್ತರ ಬಳಗ ರಾಜ್ಯಾದಾದ್ಯಂತ ಹೋರಾಟ ಮಾಡಲಿದೆ. ಮುಂದಿನ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ರಾಷ್ಟ್ರಭಕ್ತರ ಬಳಗದ ಪಮುಖರಾದ ಕೆ.ಈ. ಕಾಂತೇಶ್, ಇ.ವಿಶ್ವಾಸ್, ಎಂ. ಶಂಕರ್, ಮಹಾಲಿಂಗಶಾಸ್ತ್ರಿ, ಶಂಕರ್‌ಗನ್ನಿ, ಕುಬೇರಪ್ಪ, ಸೀತಾಲಕ್ಷ್ಮೀ, ಮೋಹನ್ ಜಾಧವ್, ಶಿವಾಜಿ, ಸಂತೋಷ್, ಬಾಲು, ಮಹೇಶ್, ಅನಿತಾ, ರಾಜು ಮತ್ತಿತರರಿದ್ದರು.