ಅಗ್ನಿ ಅವಘಡ: ಬೈಕ್ ಗ್ಯಾರೇಜ್ ಸಂಪೂರ್ಣ ಭಸ್ಮ

| Published : Jun 20 2024, 01:07 AM IST

ಸಾರಾಂಶ

ಅಥಣಿ: ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೈಕ್ ಗ್ಯಾರೇಜ್‌ವೊಂದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಥಣಿ - ಖಿಳೆಗಾಂವ ರಾಜ್ಯ ಹೆದ್ದಾರಿ ಪಕ್ಕದ ವ್ಯಾಪಾರ ಮಳಿಗೆಯಲ್ಲಿದ್ದ ಸಚಿನ್ ಕೊಡಗ ಎಂಬಾತನ ಬೈಕ್ ಗ್ಯಾರೇಜ್‌ಗೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಗ್ಯಾರೇಜ್‌ನಲ್ಲಿದ್ದ ಮೂರು ಬೈಕ್, ಟೈರ್, ಆಯಿಲ್‌ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.

ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.