ಸಾರಾಂಶ
ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಕೈಕಾಡು ಗ್ರಾಮದಲ್ಲಿ ಬತ್ತ ಹಾಗೂ ಹುಲ್ಲು ಉರಿದು ನಷ್ಟ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಆಕಸ್ಮಿಕವಾಗಿ ಬೆಂಕಿ ತಗಲಿ ಬತ್ತ ಹಾಗೂ ಹುಲ್ಲು ಉರಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದಿದೆ.ಯಂತ್ರದ ಸಹಾಯದಿಂದ ಭಾನುವಾರ ಸಂಜೆ ಗ್ರಾಮದ ನಿವೃತ್ತ ಮಾಜಿ ಸೈನಿಕ ಕುಲ್ಲಚೆಟ್ಟಿ ನಾಣಯ್ಯ (ತಮ್ಮಣಿ) ಎಂಬವರ ಮನೆಯಂಗಳದಲ್ಲಿ ಕಾರ್ಮಿಕರು ಬತ್ತ ಒಕ್ಕಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಅಪಾರ ಪ್ರಮಾಣದ ಬತ್ತ ಮತ್ತು ಹುಲ್ಲು ನಷ್ಟ ಸಂಭವಿಸಿದೆ.
ಜೊತೆಗೆ ಶೆಡ್ ನಲ್ಲಿದ್ದ ಕಾರು ಸಹ ಬೆಂಕಿಯಿಂದ ಹಾನಿಗೊಳಗಾಗಿದೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ,ಬೆಂಕಿಯನ್ನು ನಂದಿಸಿ ಇನ್ನೂ ಹೆಚ್ಚಿನ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿ ಸಹಕರಿಸಿದರು.