ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ: 6 ಜನರಿಗೆ ಗಾಯ

| Published : Jul 23 2025, 01:58 AM IST

ಸಾರಾಂಶ

ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಆವರಿಸಿ 6 ಜನರ ಗಾಯಗೊಂಡ ಘಟನೆ ಸಮೀಪದ ಲಿಂಗಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಆವರಿಸಿ 6 ಜನರ ಗಾಯಗೊಂಡ ಘಟನೆ ಸಮೀಪದ ಲಿಂಗಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಪುಂಡಲೀಕ ಸಂಗಪ್ಪ ಹರಗಣ್ಣವರ ಅವರ ಮನೆಯ ಸಿಲಿಂಡರ್‌ ಗ್ಯಾಸ್‌ ಸೋರಿಕೆ ಆಗಿದ್ದು, ಇದು ತಿಳಿದ ಕೂಡಲೇ ಮನೆಯವರು, ಅಕ್ಕಪಕ್ಕದ ಐದಾರು ಜನರು ದೇವರ ಮುಂದಿನ ದೀಪ ಆರಿಸಲು ಹೋದಾಗ ಸಿಲಿಂಡರ್‌ಗೆ ಬೆಂಕಿ ತಗುಲಿ ಮನೆ ತುಂಬ ಆವರಿಸಿದೆ. ಇದರಿಂದ ಆರು ಜನರಿಗೆ ಸುಟ್ಟ ಗಾಯಗಳಾಗಿವೆ.

ಮನೆಯ ಮಾಲೀಕ ತಿಪ್ಪಣ್ಣ ರಂಗಪ್ಪ ಮುಚಖಂಡಿ, ರಾಮಚಂದ್ರಪ್ಪ ಸಂಗಪ್ಪ ಸಂಗಮದ, ಸುನೀಲ ಪರಶುರಾಮ ವಡ್ಡರ, ಸುನಂದಾ ರಾಮಚಂದ್ರ ಸಂಗಮದ, ಕನಕಪ್ಪ ಮಲ್ಲಪ್ಪ ಕೋಟಿ, ಸಂಗಪ್ಪ ಸಕ್ರಪ್ಪ ಕೋಟಿ ಅವರಿಗೆ ಕೈಕಾಲು ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕುಮಾರೇಶ್ವರ ಆಸ್ಪತ್ರೆ, ಕೆರೂಡಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗ್ಯಾಸ್‌ನಿಂದ ಬೆಂಕಿ ಹೊತ್ತಿಕೊಂಡು ಅಡುಗೆ ಮನೆಯಲ್ಲಿದ್ದ ಅಡುಗೆ ಸಾಮಾನು ಮತ್ತು ಬಾಗಿಲು ಸುಟ್ಟಿವೆ. ಸ್ಥಳಕ್ಕೆ ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಭೇಟಿ ನೀಡಿ, ಪರೀಶೀಲಿಸಿದ್ದು, ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.