ಸಾರಾಂಶ
-ಬೆಂಕಿ ಹೆಚ್ಚಾದಂತೆ ಅಪಾಯವೂ ಹೆಚ್ಚು, ಜಾಣ್ಮೆಯಿಂದ ನಿಯಂತ್ರಣ ಸಾಧ್ಯ : ನಿಜಗುಣ
-----ಚಳ್ಳಕೆರೆ ಕನ್ನಡಪ್ರಭ ವಾರ್ತೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಅಗ್ನಿ ಆಕಸ್ಮಿಕ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಪಡೆಯ ಲಿಟಲ್ ಪ್ಲವರ್ ಇಂಗ್ಲಿಷ್ ಮಿಡಿಯಾಂ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡ ತಡೆಯುವ ಬಗ್ಗೆ ಪ್ರಾತ್ಯಕ್ಷತೆ ನಡೆಸಿದರು.ಅಗ್ನಿಶಾಮಕ ಪಡೆ ಅಧಿಕಾರಿ ನಿಜಗುಣ ಮತ್ತು ತಂಡ ಬೆಂಕಿ ಬಿದ್ದ ಸಂದರ್ಭದಲ್ಲಿ ಹಲವಾರು ರೀತಿಯ ಮುಂಜಾಗ್ರತಾ ಕ್ರಮವಹಿಸಬೇಕಿದೆ. ಬೆಂಕಿಯ ಜ್ವಾಲೆಗಳು ವ್ಯಾಪಿಸುವ ವೇಳೆ ಸುತ್ತಮುತ್ತಲ ವಸ್ತುಗಳನ್ನು ತೆರವುಗೊಳಿಸಬೇಕಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ನಮ್ಮಲ್ಲಿರುವ ನೀರನ್ನು ನಿರಂತರವಾಗಿ ಅಗ್ನಿ ಸುಡುವ ಜಾಗದಲ್ಲಿ ಹಾಕಬೇಕಿದೆ. ಅಗ್ನಿಶಾಮಕ ಪಡೆ ದಿನದ ೨೪ ಗಂಟೆಗಳ ಕಾಲ ಕೇಂದ್ರದಲ್ಲಿ ಸಿದ್ದವಿರಲಿದೆ. ಇಂತಹ ಸಂದರ್ಭದಲ್ಲಿ ಕೂಡಲೇ ಅಗ್ನಿಶಾಮಕ ಪಡೆಗೆ ದೂರವಾಣಿ ಕರೆ ಮಾಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ಸಹ ಆಸಕ್ತಿಯಿಂದ ಪ್ರಾತ್ಯಕ್ಷತೆಯನ್ನು ವೀಕ್ಷಿಸಿದರು. ಸುಡುವ ಬೆಂಕಿಯ ಸುತ್ತಮುತ್ತಲು ಎಚ್ಚರಿಕೆಯಿಂದ ರಕ್ಷಣಾ ಕವಚದೊಂದಿಗೆ ಓಡಾಡುವಂತೆ ಸಲಹೆ ನೀಡಲಾಯಿತು.
ಮುಖ್ಯೋಪಾಧ್ಯಾಯಿನಿ ಮಮತ ಮಾತನಾಡಿ, ಮಕ್ಕಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಪಡೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಬೆಂಕಿ ನಂದಿಸುವ, ನಿಯಂತ್ರಿಸುವ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ಧಾರೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪ್ರಾತ್ಯಕ್ಷತೆಯ ಕಾರ್ಯವನ್ನು ಮನನ ಮಾಡಿಕೊಂಡಿದ್ಧಾರೆ. ಬೆಂಕಿ ದುರಂತದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಬೆಂಕಿ ನಿಯಂತ್ರಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ. ಇಂತಹ ಪ್ರಾತ್ಯಕ್ಷತೆಯಿಂದ ವಿದ್ಯಾರ್ಥಿಗಳ ಬೌದ್ದಿಕ ಮಟ್ಟ ಹೆಚ್ಚುತ್ತದೆ ಎಂದರು.ಆಡಳಿತ ಮಂಡಳಿಯ ನಟರಾಜ, ಸಂತೋಷ್, ರೇಖಾ, ತಿಪ್ಪೇಸ್ವಾಮಿ, ಮಂಜುನಾಥರೆಡ್ಡಿ, ನಟರಾಜ್, ಮುಖ್ಯ ಶಿಕ್ಷಕ ಎನ್.ಮಂಜುನಾಥ, ಶಿಕ್ಷಕರಾದ ತಿಪ್ಪೇಸ್ವಾಮಿ, ಅಭಿಲಾಶ್, ಜಯಪ್ರಕಾಶ್, ಮಹಂತೇಶ್, ಹನುಮಂತರಾಯ, ಮಹಾಲಕ್ಷ್ಮಿ, ಭಾರತಿ, ಹೀನಾ, ಗೌತಮಿ, ಕಮಲ, ರಾಧ, ಶಾರದ ಭಾಗವಹಿಸಿದ್ದರು.
------ಪೋಟೋ: ೨೭ಸಿಎಲ್‌ಕೆ೨
ಚಳ್ಳಕೆರೆ ನಗರದ ಲಿಟಲ್‌ಪ್ಲವರ್ ಇಂಗ್ಲಿಷ್ ಮಿಡಿಯಾಂ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡಗಳ ಬಗ್ಗೆ ಪ್ರಾತ್ಯಕ್ಷತೆ ತೋರಿಸಲಾಯಿತು.