ಸಾರಾಂಶ
ವಿಜಯಪುರ ನಗರದ ಆಶ್ರಮ ರಸ್ತೆಯ ಲೆಡೀಸ್ ಹಾಸ್ಟೆಲ್ ಬಳಿಯ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿ ಮನೆಯೊಳಗೆ ಬೆಂಕಿ ಆವರಿಸಿ ಅಡುಗೆ ಮನೆ ಹೊತ್ತಿ ಉರಿದ ಘಟನೆ ಜರುಗಿದ್ದು, ಮನೆಯವರು ಮನೆಯಿಂದ ಹೊರಗೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದು, ಅದೃಷ್ಟವಶಾತ್ ದುರಂತ ಸ್ವಲ್ಪದರಲ್ಲೇ ತಪ್ಪಿದೆ.
ವಿಜಯಪುರ: ನಗರದ ಆಶ್ರಮ ರಸ್ತೆಯ ಲೆಡೀಸ್ ಹಾಸ್ಟೆಲ್ ಬಳಿಯ ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಲೀಕ್ ಆಗಿ ಮನೆಯೊಳಗೆ ಬೆಂಕಿ ಆವರಿಸಿ ಅಡುಗೆ ಮನೆ ಹೊತ್ತಿ ಉರಿದ ಘಟನೆ ಜರುಗಿದ್ದು, ಮನೆಯವರು ಮನೆಯಿಂದ ಹೊರಗೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದು, ಅದೃಷ್ಟವಶಾತ್ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಸ್ಥಳೀಯರಾದ ಬಿ.ಎಸ್.ಬಿರಾದಾರ ಎಂಬುವರ ಮನೆಯಲ್ಲಿ ಅಡುಗೆ ಸಿಲೆಂಡರ್‌ನಲ್ಲಿನ ಗ್ಯಾಸ್ ಲೀಕ್ ಆಗಿ ಏಕಾಏಕಿ ಬೆಂಕಿ ಆವರಿಸಿಕೊಂಡಿದೆ. ತಕ್ಷಣ ಕುಟುಂಬದವರು ಹೊರಗೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ವಿಷಯ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಆದರ್ಶನಗರ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.
;Resize=(128,128))