ಅಗ್ನಿ ಶಾಮಕ ಪ್ರಾತ್ಯಕ್ಷಿಕೆ, ಜೀವನ ಕೌಶಲ್ಯ ಕಾರ್ಯಾಗಾರ

| Published : Apr 18 2025, 12:33 AM IST

ಅಗ್ನಿ ಶಾಮಕ ಪ್ರಾತ್ಯಕ್ಷಿಕೆ, ಜೀವನ ಕೌಶಲ್ಯ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ರಿಯ ಸರಕಾರಿ ಪ್ರಥಮ ರರ್ಜೆ ಕಾಲೇಜು ಎನ್‌ಎಸ್ ಎಸ್ ಘಟಕ ಹಾಗೂ ಕಾರ್ಕಳ ಅಗ್ನಿ ಶಾಮಕ ದಳ ವತಿಯಿಂದ ಪ್ರಾತ್ಯಕ್ಷಿಕೆ ಹಾಗೂ ಜೀವನ ಕೌಶಲ್ಯ ಕಾರ್ಯಾಗಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಬೆಂಕಿ, ಅಪಾಯಕಾರಿ ವಸ್ತುಗಳು, ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಇತರ ವಿಪತ್ತುಗಳನ್ನು ಒಳಗೊಂಡ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ಜವಾಬ್ದಾರಿ ಅಗ್ನಿಶಾಮಕ ದಳದ ಮೇಲಿದೆ ಎಂದು ಕಾರ್ಕಳ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನೀಸ್ ಹೇಳಿದರು.

ಅವರು ಹೆಬ್ರಿಯ ಸರಕಾರಿ ಪ್ರಥಮ ರರ್ಜೆ ಕಾಲೇಜು ಎನ್‌ಎಸ್ ಎಸ್ ಘಟಕ ಹಾಗೂ ಕಾರ್ಕಳ ಅಗ್ನಿ ಶಾಮಕ ದಳ ವತಿಯಿಂದ ನಡೆದ ಪ್ರಾತ್ಯಕ್ಷಿಕೆ ಹಾಗೂ ಜೀವನ ಕೌಶಲ್ಯ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.

ಕೆಲಸವು ಸವಾಲಿನದ್ದಾಗಿದ್ದರೂ, ಅದು ಪ್ರತಿಫಲದಾಯಕವೂ ಆಗಿದೆ, ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಅವಕಾಶವನ್ನು ಒದಗಿಸುತ್ತದೆಎಂದರು.

ಕಾಲೇಜು ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್ ಮಾತನಾಡಿ ಜೀವವನ್ನು ಪಣಕ್ಕಿಟ್ಟು ದೇಹದ ಹಂಗು ತೊರೆದು ಅಗ್ನಿ ಅವಘಡಗಳನ್ನು ತಡೆಯುವ ಅಗ್ನಿಶಾಮಕ ದಳದ ಕೊಡುಗೆ ಅಪಾರವಾಗಿದೆ. ಹಿರಿಯ

ಸಂಸ್ಕರಣಾಗಾರಗಳು, ಪೆಟ್ರೋಕೆಮಿಕಲ್ ಸ್ಥಾವರಗಳು, ವಿದ್ಯುತ್ ಸ್ಥಾವರಗಳು, ಪ್ರಕ್ರಿಯೆ ಟರ್ಮಿನಲ್‌ಗಳು ಮತ್ತು ಬೆಂಕಿಯ ಸಾಧ್ಯತೆ ಹೆಚ್ಚಿರುವ ಇತರ ಅನೇಕ ಸ್ಥಳಗಳಲ್ಲಿ ಅಗ್ನಿಶಾಮಕ ದಳ ನಿತ್ಯ ಸಕ್ರಿಯ ವಾಗಿರುತ್ತವೆ ಎಂದರು.

ಸಭೆಯಲ್ಲಿ ಸಹ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಸಿಅಗ್ನಿಶಾಮಕ ಸಿಬ್ಬಂದಿ, ಉಪನ್ಯಾಸಕರು ಉಪಸ್ಥಿತರಿದ್ದರು.

ಕನ್ನಡ ಸಹ ಪ್ರಾದ್ಯಾಪಕ ಡಾ.ಪ್ರವೀಣ್ ಕುಮಾರ್ ಸ್ವಾಗತಿಸಿದರು. ಐ.ಕ್ಯು.ಎ.ಸಿ. ಸಂಚಾಲಕ ಡಾ.ಗಣೇಶ ಎಸ್,ಧನ್ಯವಾದ ವಿತ್ತರು . ಬಳಿಕ ಅಗ್ನಿಶಾಮಕ ದಳ ವತಿಯಿಂದ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡಗಳನ್ನು ತಪ್ಪಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು.