ಶ್ರೀ ಕೆಂಕೇರಮ್ಮ, ಬೀದಿಯ ಬಾಣಂತ ಮಾರಮ್ಮ ಗ್ರಾಮ ದೇವತೆಗಳ ಅಗ್ನಿಕೊಂಡೋತ್ಸವ

| Published : Apr 24 2025, 12:05 AM IST

ಶ್ರೀ ಕೆಂಕೇರಮ್ಮ, ಬೀದಿಯ ಬಾಣಂತ ಮಾರಮ್ಮ ಗ್ರಾಮ ದೇವತೆಗಳ ಅಗ್ನಿಕೊಂಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ವಿವಿಧ ವಾದ್ಯಮೇಳಗಳೊಂದಿಗೆ ಆರಂಭವಾಗಿ ಬುಧವಾರ ಬೆಳಗಿನ ಜಾವ ದೇವಾಲಯದ ಪ್ರಧಾನ ಅರ್ಚಕರು ದೇವರ ಕಳಶ ಹೊತ್ತು ಮಹಿಳೆಯರ ತಂಬಿಟ್ಟಿನ ಆರತಿ ಕಳಶದೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕೊಂಡವನ್ನು ಹಾಯ್ದರು.

ಕನಕಪುರ: ನಗರದ ಗ್ರಾಮ ದೇವತೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯ ದೇವರಾದ ಶ್ರೀ ಕೆಂಕೇರಮ್ಮ ಹಾಗೂ ನಗರದ ಮೇಗಳ ಬೀದಿಯ ಬಾಣಂತ ಮಾರಮ್ಮ ಮತ್ತು ಮಳಗಾಳಿನ ಮರಸನಾಡಮ್ಮ ದೇವಿಯ ಅಗ್ನಿಕೊಂಡೋತ್ಸವ ಬುಧವಾರ ಬೆಳಗ್ಗೆ ನಿರ್ವಿಘ್ನವಾಗಿ ನೆರವೇರಿತು. ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ವಿವಿಧ ವಾದ್ಯಮೇಳಗಳೊಂದಿಗೆ ಆರಂಭವಾಗಿ ಬುಧವಾರ ಬೆಳಗಿನ ಜಾವ ದೇವಾಲಯದ ಪ್ರಧಾನ ಅರ್ಚಕರು ದೇವರ ಕಳಶ ಹೊತ್ತು ಮಹಿಳೆಯರ ತಂಬಿಟ್ಟಿನ ಆರತಿ ಕಳಶದೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕೊಂಡವನ್ನು ಹಾಯ್ದರು. ಗುರುವಾರ ರಥೋತ್ಸವ, ಶುಕ್ರವಾರ ಸಂಜೆ ಜಾತ್ರಾ ಮಹೋತ್ಸವ ನಡೆಯಲಿದ್ದು, ನಗರ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.