ದಾಬಸ್‍ಪೇಟೆ: ಸೋಂಪುರ ಹೋಬಳಿಯ ವೀರಸಾಗರ ಗ್ರಾಮದ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಅರಣ್ಯ ಬೆಂಕಿಗೆ ಭಸ್ಮವಾಗಿದೆ. ಈ ಅರಣ್ಯ ಪ್ರದೇಶಕ್ಕೆ ಪದೇಪದೆ ಬೆಂಕಿ ಬೀಳುತ್ತಿರುವುದು ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ತಡೆಯಲು ರಸ್ತೆ ಪಕ್ಕ ಹಾಗೂ ಹೊಸದಾಗಿ ಗಿಡ ನೆಟ್ಟಿರುವ ಬಳಿ ಫೈರ್ ಲೈನ್ ಮಾಡಿ ಬೆಂಕಿ ಅರಣ್ಯಕ್ಕೆ ತಾಗದಂತೆ ಮಾಡಲಾಗುತ್ತದೆ. ಆದರೆ ಇಲ್ಲಿ ಅಧಿಕಾರಿಗಳು ಓಡಾಡುವ ಜಾಗವನ್ನು ಹೊರತುಪಡಿಸಿ ಇನ್ನುಳಿದ ಜಾಗದಲ್ಲಿ ಫೈರ್ ಲೈನ್ ಮಾಡದೇ ಇರುವುದರಿಂದಲೇ ಬೆಂಕಿ ಬಿದ್ದು ಅರಣ್ಯ ಪ್ರದೇಶ ನಾಶವಾಗುತ್ತಿದೆ.

ಅರಣ್ಯದೊಳಗೆ ಕರಡಿ, ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ವಾಸಿಸುವ ಕಾರಣ ಯಾರೊಬ್ಬರೂ ಓಡಾಡುವುದಿಲ್ಲ, ಬೆಂಕಿ ಬಿದ್ದರೆ ರಸ್ತೆ ಪಕ್ಕದಿಂದ ಹೋಗಬೇಕು. ಆದರೆ ಅರಣ್ಯದ ಮಧ್ಯ ಭಾಗದಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದೆ. ಅರಣ್ಯ ಇಲಾಖೆಯವರೇ ಹೊಸದಾಗಿ ಸಸಿಗಳನ್ನು ನೆಡಲು ಟೆಂಡರ್ ಕರೆಯಲು ಈ ರೀತಿ ಅರಣ್ಯ ನಾಶ ಮಾಡುತ್ತಾರೆಂದು ವೀರಸಾಗರ ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯಾಧಿಕಾರಿಗಳ ನಿರ್ಲಕ್ಷಯ: ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಆಶ್ರಯ ಪಡೆಯಲು ಎರಡು ಕೊಠಡಿಗಳನ್ನು ನಿರ್ಮಿಸಿದ್ದು ಆ ಕೊಠಡಿಗಳ ಪಕ್ಕದಲ್ಲೇ ಹಗಲಲ್ಲೂ ಬೆಂಕಿ ಬಿದ್ದರೂ ಆರಿಸಲು ಅರಣ್ಯಾಧಿಕಾರಿಗಳು ಮುಂದಾಗುತ್ತಿಲ್ಲ. ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆಂದು ಪರಿಸರ ಪ್ರೇಮಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೋಟ್.................


ಅರಣ್ಯದಲ್ಲಿ ಅನೇಕ ವನ್ಯಜೀವಿಗಳು ಆಶ್ರಯ ಪಡೆದಿದ್ದು ಅರಣ್ಯಕ್ಕೆ ಬೆಂಕಿ ಬಿದ್ದಿರುವ ಕಾರಣ ಕಾಡಂಚಿನ ಗ್ರಾಮಗಳಿಗೆ ಬರಲು ಪ್ರಾರಂಭಿಸಿವೆ. ಅರಣ್ಯ ಇಲಾಖೆ ನೇಮಿಸಿರುವ ವಾಚರ್‌ಗಳು ಇದ್ದರೂ ಏನು ಪ್ರಯೋಜನವಿಲ್ಲ. ಆದ್ದರಿಂದ ಇವರ ವಿರುದ್ದ ಕ್ರಮ ಕೈಗೊಂಡು ಅರಣ್ಯ ರಕ್ಷಣೆ ಮಾಡಿ ಪರಿಸರ ಸಂರಕ್ಷಿಸಬೇಕು.

-ಮಂಜುನಾಥ್, ಪರಿಸರ ಪ್ರೇಮಿ, ವೀರಸಾಗರ

ಪೋಟೋ 10 * 11 : ವೀರಸಾಗರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮರಗಳಿಗೆ ಬೆಂಕಿ ಹತ್ತಿರುವುದು.