ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಚೆನ್ನಬಸು ಬಿರಾದಾರ ಎಂಬುವವರ ತೋಟದಲ್ಲಿರುವ ಶೆಡ್‌ಗೆ ಬೆಂಕಿ ಹೊತ್ತಿಕೊಂಡು 3 ಕುರಿಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಚೆನ್ನಬಸು ಬಿರಾದಾರ ಎಂಬುವವರ ತೋಟದಲ್ಲಿರುವ ಶೆಡ್‌ಗೆ ಬೆಂಕಿ ಹೊತ್ತಿಕೊಂಡು 3 ಕುರಿಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಸಾಧ್ಯತೆ ಇದೆ ಹೇಳಲಾಗಿದ್ದು, ಮನೆಯಲ್ಲಿರಿಸಿದ್ದ ಗೋಧಿ, ಜೋಳ, ಶೇಂಗಾ, ಬೀಜ ಹಾಗೂ 3 ಕುರಿಗಳು ಹಾಗೂ ₹75 ಸಾವಿರ ನಗದು, 2 ತೊಲ ಬಂಗಾರ, ಬೆಳ್ಳಿ ಆಭರಣ ಭಸ್ಮಗೊಂಡಿವೆ. ಸುದ್ಧಿ ತಿಳಿದ ತಕ್ಷಣ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಂದಿಸಿದರು. ಸಿಂದಗಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಎಸ್.ಐ.ಮೋರೆ ಭೇಟಿ ನೀಡಿ ಪರಿಶೀಲಿಸಿದರು.