₹2 ಕೋಟಿ ರುಪಾಯಿ ಮೌಲ್ಯದ ಪಟಾಕಿ ವಶಕ್ಕೆ

| Published : Oct 13 2023, 12:15 AM IST

ಸಾರಾಂಶ

ಕೊಪ್ಪಳ ನಗರ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲಾದ್ಯಂತ ವಿವಿಧ ಠಾಣಾಗಳ ವ್ಯಾಪ್ತಿಯ 13 ಸ್ಥಳಗಳಲ್ಲಿ ದಾಳಿ ಮಾಡಿರುವ ಪೊಲೀಸರು ಮತ್ತು ಅಧಿಕಾರಿಗಳು ₹2.39 ಕೋಟಿ ಮೌಲ್ಯದ 7642 ಕೆಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ: ನಗರ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲಾದ್ಯಂತ ವಿವಿಧ ಠಾಣಾಗಳ ವ್ಯಾಪ್ತಿಯ 13 ಸ್ಥಳಗಳಲ್ಲಿ ದಾಳಿ ಮಾಡಿರುವ ಪೊಲೀಸರು ಮತ್ತು ಅಧಿಕಾರಿಗಳು ₹2.39 ಕೋಟಿ ಮೌಲ್ಯದ 7642 ಕೆಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.ನಾಲ್ಕಾರು ತಂಡಗಳು ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ವೇಳೆಯಲ್ಲಿ ಪಟಾಕಿಗಳು ಪತ್ತೆಯಾಗಿವೆ. ಇರಕಲ್‌ಗಡ, ಕಿಡದಾಳ ಬಳಿ ಗೋಡಾನ್, ಗಂಗಾವತಿ, ಹನುಮಸಾಗರದ ವಿವಿಧೆಡೆ ಸೇರಿದಂತೆ ಸುಮಾರು 13 ಕಡೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಗಂಗಾವತಿಯ ನಗರ ಠಾಣೆಯ 16 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ.