ಸಾರಾಂಶ
ಜಿಲ್ಲಾ ಕಾರಾಗೃಹದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಪಘಾತ ಅಥವಾ ತುರ್ತು ಸಂದರ್ಭದಲ್ಲಿರುವ ವ್ಯಕ್ತಿಗಳಿಗೆ ಮೊದಲಿಗೆ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಪ್ರಾಣಾಪಾಯದಿಂದ ಕಾಪಾಡಲು ಮುಂದಾಗಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕೆ.ಸುಂದರೇಗೌಡ ಹೇಳಿದರು.ಜಿಲ್ಲಾ ಕಾರಾಗೃಹದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯ ಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಅಪಘಾತದಲ್ಲಿ ಮೊದಲಿಗೆ ರಕ್ತ ಹೆಚ್ಚು ಸೋರಿಕೆ ಜಾಗದಲ್ಲಿ ಬಟ್ಟೆ ಅಥವಾ ಇತರೆ ವಸ್ತ್ರಗಳಿಂದ ಬಿಗಿಯಾಗಿ ಕಟ್ಟುವ ಮೂಲಕ ರಕ್ತ ಸೋರಿಕೆ ಕಡಿಮೆಮಾಡಿ, ತದನಂತರ ಆಸ್ಪತ್ರೆಗೆ ಕರೆದೊಯ್ದುರೆ ವ್ಯಕ್ತಿ ಪ್ರಾಣ ಕಾಪಾಡಲು ಸಾಧ್ಯ ಎಂದು ತಿಳಿಸಿದರು.ಓರ್ವ ವ್ಯಕ್ತಿ ಆಹಾರ, ನೀರಿಲ್ಲದೇ ಹಲವಾರು ದಿನಗಳು ಬದುಕಬಲ್ಲ. ಅಪಘಾತ ವೇಳೆ ಹೆಚ್ಚು ರಕ್ತ ಸೋರಿಕೆಯಾದಲ್ಲಿ ಪ್ರಾಣ ಉಳಿಸಲು ಅಸಾಧ್ಯ. ಮಾನವ ಶರೀರದಲ್ಲಿ ಕೇವಲ 5 ಲೀಟರ್‌ನಷ್ಟು ಮಾತ್ರ ರಕ್ತ ಹೊಂದಿದ್ದು ಅಪಘಾತದ ವೇಳೆಯಲ್ಲಿ ರಕ್ತದ ಮಹತ್ವ ತಿಳಿದಿರುವುದು ಬಹುಮುಖ್ಯ ಎಂದರು.ಪ್ರಪಂಚದಲ್ಲಿ ಸರಿಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಸಾವನ್ನಪ್ಪುವ ವರದಿಗಳಿವೆ, ಈ ಪೈಕಿ ಶೇ.30 ಮಂದಿ ಪ್ರಥಮ ಚಿಕಿತ್ಸೆ ದೊರೆಯದೇ ಸಾವಪ್ಪುತ್ತಿರುವುದು ದುರ್ದೈವ. ಹೀಗಾಗಿ ಜನತೆಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪ್ರಥಮ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದರು.ಗ್ರಾಮೀಣ ಪ್ರದೇಶದಲ್ಲಿ ಅಪಘಾತ ಅಥವಾ ಹೃದಯಘಾತಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡುವುದೇ ಅರಿವಿರುವುದಿಲ್ಲ. ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ರಕ್ಷಿಸುವ ಸಂಖ್ಯೆ ವಿರಳವಾಗಿದೆ. ಈ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿವಹಿಸುವುದು ಸೂಕ್ತ. ಹಾಗಾಗಿ ವಿದ್ಯಾವಂತರು ಚಿಕಿತ್ಸೆ ಬಗ್ಗೆ ಪ್ರಚಾರ ಪಡಿಸುವುದು ಅಗತ್ಯವಿದೆ ಎಂದು ತಿಳಿಸಿದರು.ರೆಡ್‌ಕ್ರಾಸ್ ಅಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ, ಯುದ್ಧದಲ್ಲಿ ನಡೆದ ಸಾವಿರಾರು ಸೈನಿಕರ ಸಾವು ನೋವುಗಳನ್ನು ಮನಗಂಡು ಹೆನ್ಸಿ ಡೋನೋಟ್ ಎಂಬುವವರು ಪ್ರಥಮ ಚಿಕಿತ್ಸೆ ಪ್ರಯೋಗಿಸಿ ಪ್ರಾಣರಕ್ಷಣೆಗೆ ಮುಂದಾಗಿದ್ದರು. ಅಂದಿನಿಂದ ವಿಶ್ವಾದ್ಯಂತ ಪ್ರಥಮ ಚಿಕಿತ್ಸೆ ಪ್ರಚಲಿತಕ್ಕೆ ಬಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ರಸೂಲ್‌ಖಾನ್, ನಿರ್ದೇಶಕ ವಿಲಿಯಂ ಪೆರೇರಾ, ವಿನಾಯಕ, ಕಾರಾಗೃಹ ಅಧೀಕ್ಷಕ ಐ.ಜಿ.ಕುಕನೂರು, ಸಹಾಯಕ ಜೈಲರ್‌ಗಳಾದ ದಯಾನಂದ್ ಬೊಂಗಾಳೆ, ಲಕ್ಕೇಗೌಡ, ಶಿಕ್ಷಕ ರಾಜಕುಮಾರ್, ಆಶಾ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 21 ಕೆಸಿಕೆಎಂ 4
ಜಿಲ್ಲಾ ಕಾರಾಗೃಹದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯ ಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ರೆಡ್‌ಕ್ರಾಸ್ ಸಂಸ್ಥೆ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕೆ.ಸುಂದರೇಗೌಡ ಮಾಹಿತಿ ನೀಡಿದರು.