ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯು ಉನ್ನತ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇದೀಗ ಕೊನೆಯ ಹಂತದ ಹಾಡ್ಜ್ ಕಿನ್ಸ್ ಲಿಂಫೋಮಾ (Hodgkin''''s Lymphoma) ರೋಗದಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಯೊಬ್ಬರಿಗೆ ಆಟೋಲೋಗಸ್‌ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಷನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್‌ ಡಾ. ಶಹನವಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯು ಉನ್ನತ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇದೀಗ ಕೊನೆಯ ಹಂತದ ಹಾಡ್ಜ್ ಕಿನ್ಸ್ ಲಿಂಫೋಮಾ (Hodgkin''''''''s Lymphoma) ರೋಗದಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಯೊಬ್ಬರಿಗೆ ಆಟೋಲೋಗಸ್‌ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಷನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್‌ ಡಾ. ಶಹನವಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆಯ ವೈದ್ಯಕೀಯ ಆಂಕಾಲಜಿ ವಿಭಾಗದ ತಜ್ಞರಾದ ಡಾ. ಗುರುಪ್ರಸಾದ್ ಭಟ್ ಈ ಬಗ್ಗೆ ವಿವರಿಸುತ್ತಾ, ಕಳೆದ ವರ್ಷ, ಕೊನೆಯ ಹಂತದ ಹಾಡ್ಜ್ ಕಿನ್ಸ್ ಲಿಂಫೋಮಾ (Hodgkin''''''''s Lymphoma) ರೋಗದಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಯೊಬ್ಬರಿಗೆ ಮೊದಲಿಗೆ ಕೀಮೋಥೆರಪಿಯ ಆರು ಹಂತದಲ್ಲಿ ಚಿಕಿತ್ಸೆಯನ್ನು ನೀಡಲಾಯಿತು. ಆದರೆ, ಕ್ಯಾನ್ಸರ್ ಹೆಚ್ಚಾಯಿತು, ಹತೋಟಿಗೆ ಬರಲಿಲ್ಲ. ಆಗ ಕಿಮೊತೆರಪಿ ನಿಲ್ಲಿಸಿ, ಹೊಸ ಚಿಕಿತ್ಸೆಗಳಾದ ಟಾರ್ಗೆಟೆಡ್ ಥೆರಪಿ (BrentuximabVedotin) ಮತ್ತು ಇಮ್ಯುನೊ ಥೆರಪಿಯನ್ನು ನೀಡಲಾಯಿತು. ಟ್ರಾನ್ಸ್ ಪ್ಯಾಂಟ್ ಮುನ್ನ ಮಾಡಿದ PET ಸ್ಕ್ಯಾನನಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ನಂತರ ಕುಟುಂಬದ ಸದಸ್ಯರಿಗೆ ಸೂಕ್ತ ಸಮಾಲೋಚನೆ ನೀಡಿದ ಬಳಿಕ, ಕಣಚೂರು ಆಸ್ಪತ್ರೆಯಲ್ಲಿ ಆಟೋಲೋಗಸ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಷನ್ (ಸ್ವಂತ ಕಾಂಡ ಕೋಶಕಸಿ ) ಅವರ ಮಾಡಲು ನಿರ್ಧರಿಸಲಾಯಿತು ಎಂದರು.ಆಸ್ಪತ್ರೆಗೆ ದಾಖಲಾದ ನಂತರ, ಸ್ಟೆಮ್ಮೆಳ ಉತ್ಪಾದನೆಯನ್ನು ಹೆಚ್ಚಿಸಲು ಗೋಥ್ ಫ್ಯಾಕ್ಟರ್ ಸ್ಟಿಮ್ಯುಲೇಷನ್ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಬಳಿಕ ‌ ಅಫೆರೆಸಿಸ್ (Apheresis) ವಿಧಾನದ ಮೂಲಕ ಸ್ಪೆಮ್ಮೆಗಳನ್ನು ಸಂಗ್ರಹಿಸಲಾಯಿತು. ಅಗತ್ಯ ಪ್ರಮಾಣದ ಸೈಮ್ಮೆಳನ್ನು ಸಂಗ್ರಹಿಸಿ ಕ್ರಯೋಪಿಸರ್ವೇಶನ್ (ಅತಿ ಕಡಿಮೆ ತಾಪಮಾನದಲ್ಲಿ ಸಂರಕ್ಷಣೆ) ಮಾಡಿದೆವು. ಇದನಂತರ ರೋಗಿಗೆ ಹೈಡೋಸೇಜ್ BEAM ಕೀಮೋಥೆರಪಿ ನೀಡಲಾಯಿತು.

ಚಿಕಿತ್ಸೆಯ ಹತ್ತನೇ ದಿನದಂದು ಯಾವುದೇ ತೊಡಕುಗಳಿಲ್ಲದೆ ರಕ್ತಕಣಗಳ ಮರು ಉತ್ಪಾದನೆ ಮತ್ತು ಬೆಳವಣಿಗೆ (Engraftment) ಯಶಸ್ವಿಯಾಗಿ ನಡೆಯಿತು. ಇದ ನಂತರ ರೋಗಿಯ ಆರೋಗ್ಯ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು ಎಂದರು.

ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಎಸ್. ಮೊನಿಸ್ ಅವರು ಮಾತನಾಡಿ, ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹಾಜಿ ಯು . ಕೆ. ಮೋನು ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರ ಸಹಕಾರದೊಂದಿಗೆ ಹಾಗೂ ಡೀನ್ ಡಾ. ಶಾನವಾಜ್ ಮಣಿಪ್ಪಾಡಿ, ವೈದ್ಯಕೀಯ ಅಧೀಕ್ಷಕರಾದ ಡಾ. ಅಂಜನ್ ಕುಮಾರ್ ಎನ್., ಶುಶೂಷಾ ಅಧೀಕ್ಷಕರಾದ ಐರಿನ್ ಸಲ್ಮಾನ್ಯಾ ಅವರ ನೇತೃತ್ವದಲ್ಲಿ ಈ ಸಾಧನೆ ಸಾಧ್ಯವಾಯಿತು.

ಇದಲ್ಲದೆ, ನೆಫ್ರಾಲಜಿವಿಭಾಗ, ತುರ್ತುಚಿಕಿತ್ಸಾ ವಿಭಾಗ, ಮೈಕ್ರೋಬಯಾಲಜಿ ವಿಭಾಗ, ಶುಶ್ರೂಷಾ ಸಿಬ್ಬಂದಿ ಹಾಗೂ ಸಿ ಎಸ್ ಎಸ್ ಡಿ (CSSD) ವಿಭಾಗದ ಸಿಬ್ಬಂದಿ ಸಕ್ರಿಯವಾಗಿ ಕೈಜೋಡಿಸಿ, ರೋಗಿಗೆ ಹಗಲು-ರಾತ್ರಿ ನಿರಂತರ ಆರೈಕೆಯನ್ನು ಒದಗಿಸುವ ಮೂಲಕ ಈ ಮಹತ್ವದ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಮಂಡಳಿ ಸದಸ್ಯರಾದ ಡಾ. ವೆಂಕಟರಾಯ ಪ್ರಭು, ಕಣಚೂರು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್ ಎ.ಎನ್. ಕಣಚೂರು ಆಸ್ಪತ್ರೆ ಶಸ್ತ್ರಚಿಕಿತ್ಸಾ ಆಂಕಾಲಜಿಸ್ಟ್‌ ಡಾ. ರವಿವರ್ಮ ಉಪಸ್ಥಿತರಿದ್ದರು.