ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ಆರು ಮಂದಿಗೆ ಟಿಕೆಟ್ ನೀಡಿದೆ.
ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಲಿಂಗೇಗೌಡ, ರಾಜ್ಯದ ಎಲ್ಲ 28 ಕ್ಷೇತ್ರಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಮೊದಲ ಹಂತದಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಕ್ಷೇತ್ರಗಳಿಗೆಹತ್ತಾರು ಆಕಾಂಕ್ಷಿಗಳು ಶುಲ್ಕ ಸಮೇತ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆಹಾಜರಾಗಿದ್ದರು.
ರಾಜ್ಯ ಕಾರ್ಯಕಾರಿ ಸಮಿತಿಯ ಐದು ಜನರ ಪ್ಯಾನೆಲ್ ಸಂದರ್ಶನ ನಡೆಸಿ ತನ್ನ ಅಭಿಪ್ರಾಯವನ್ನುತಿಳಿಸಿದ ಬಳಿಕ ರಾಜ್ಯಸಮಿತಿಯು ವಿಸ್ತೃತವಾಗಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಉಳಿದ ಲೋಕಸಭಾ ಕ್ಷೇತ್ರಗಳಿಗೆ ಆಯ್ಕೆ ಪ್ರಕ್ರಿಯೆ ಮುಂದುವರೆದಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಲಾಗುವುದು. ಪಕ್ಷದಿಂದ ಸ್ಪರ್ಧಿಸಲು ಬಯಸುವ ಆಸಕ್ತರು ಮೊ.ಸಂ.83107 77040ಗೆ ಸಂಪರ್ಕಿಸಬೇಕು ಎಂದು ತಿಳಿಸಿದರು. ಕಾರ್ಯದರ್ಶಿಗಳಾದ ಎಲ್.ಜೀವನ್, ನಂದಾ ರೆಡ್ಡಿ ಉಪಸ್ಥಿತರಿದ್ದರು.
ಎಲ್ಲಿಂದ, ಯಾರ್ಯಾರು?
ಬೆಳಗಾವಿ- ಬಿ.ಜಿ.ಕುಂಬಾರ, ಧಾರವಾಡ-ನಾಗರಾಜ್ ಕರೆಣ್ಣವರ್, ಕಲಬುರಗಿ- ವಿಜಯ್ ಜಾಧವ್, ದಾವಣಗೆರೆ- ರುದ್ರೇಶ್ ಕೆ.ಎಚ್., ಬೆಂಗಳೂರು ದಕ್ಷಿಣದಿಂದ ರಘುಪತಿ ಭಟ್ ಹಾಗೂ ಮೈಸೂರಿನಿಂದ ಮಾ.ಸ.ಪ್ರವೀಣ್.
19 ಕ್ಷೇತ್ರಕ್ಕೆ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದಲೂ ಅಭ್ಯರ್ಥಿ ಪಟ್ಟಿ ಪ್ರಕಟ
ಬೆಂಗಳೂರು: ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಲೋಕಸಭಾ ಚುನಾವಣೆಗೆ ರಾಜ್ಯದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, 19 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಈ ಬಾರಿ ಒಟ್ಟು 19 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧಿಗಳ ವಿವರ: ಬೆಳಗಾವಿ- ಲಕ್ಷ್ಮಣ ಜಡಗಣ್ಣನವರ್, ಬಾಗಲಕೋಟೆ- ಎಚ್.ಟಿ.ಮಲ್ಲಿಕಾರ್ಜುನ, ವಿಜಯಪುರ- ನಾಗಜ್ಯೋತಿ, ಕಲಬುರಗಿ- ಎಸ್.ಎಂ.ಶರ್ಮ, ರಾಯಚೂರು- ರಾಮಲಿಂಗಪ್ಪ, ಕೊಪ್ಪಳ- ಶರಣು ಗಡ್ಡಿ, ಬಳ್ಳಾರಿ- ಎ.ದೇವದಾಸ್, ಹಾವೇರಿ- ಗಂಗಾಧರ ಬಡಿಗೇರ, ಧಾರವಾಡ- ಶರಣಬಸವ ಗೋನವಾರ, ಉತ್ತರ ಕನ್ನಡ- ಗಣಪತಿ ವಿ. ಹೆಗಡೆ,
ದಾವಣಗೆರೆ- ತಿಪ್ಪೇಸ್ವಾಮಿ, ಚಿತ್ರದುರ್ಗ- ಎನ್.ಕಲಾವತಿ, ತುಮಕೂರು- ಎಸ್.ಎನ್.ಸ್ವಾಮಿ, ಮೈಸೂರು- ಟಿ.ಆರ್.ಸುನೀಲ್, ಚಾಮರಾಜನಗರ- ಸುಮಾ ಎಸ್, ಬೆಂಗಳೂರು ಗ್ರಾಮಾಂತರ- ಹೇಮಾವತಿ ಕೆ, ಬೆಂಗಳೂರು ಉತ್ತರ- ನಿರ್ಮಲ ಎಚ್. ಎಲ್, ಬೆಂಗಳೂರು ಕೇಂದ್ರ- ಶಿವಪ್ರಕಾಶ್ ಎಚ್.ಪಿ, ಚಿಕ್ಕಬಳ್ಳಾಪುರ- ಷಣ್ಮುಗಂ.