ಸಾರಾಂಶ
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ. ಎ. ಗೋಪಾಲಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೆನ್ನೈನ ಎಸ್‌ಆರ್‌ಎಂ ಯೂನಿವರ್ಸಿಟಿ ಪ್ರಥಮ ಸ್ಥಾನ ಪಡೆಯುವ ಮೂಲಕ ಒಂದು ಲಕ್ಷ ರು. ಜೊತೆಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕೇರಳದ ಬಿಎಂಸಿ ಪಡೆದು ೭೫ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು. ತೃತೀಯ ಚೆನ್ನೈನ ಇಂಕಂಟ್ಯಾಕ್ಸ್ ಸ್ಥಾನವನ್ನು ಪಡೆದು ೫೦ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ. ಎ. ಗೋಪಾಲಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಚೆನ್ನೈನ ಎಸ್‌ಆರ್‌ಎಂ ಯೂನಿವರ್ಸಿಟಿ ಪ್ರಥಮ ಸ್ಥಾನ ಪಡೆಯುವ ಮೂಲಕ ಒಂದು ಲಕ್ಷ ರು. ಜೊತೆಗೆ ಟ್ರೋಫಿ ಮುಡಿಗೇರಿಸಿಕೊಂಡಿತು.ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಘಟ್ಟದಲ್ಲಿ ರೋಚಕತೆ ಪಡೆದು ಕುತೂಹಲ ಮೂಡಿಸಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಎದೆಬಡಿತ ಜೋರಾಗುವಂತೆ ಮಾಡಿತು.
ದ್ವಿತೀಯ ಸ್ಥಾನವನ್ನು ಕೇರಳದ ಬಿಎಂಸಿ ಪಡೆದು ೭೫ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು. ತೃತೀಯ ಚೆನ್ನೈನ ಇಂಕಂಟ್ಯಾಕ್ಸ್ ಸ್ಥಾನವನ್ನು ಪಡೆದು ೫೦ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು, ನಾಲ್ಕನೇ ಸ್ಥಾನ ಕೇರಳ ಪೊಲೀಸ್ ಪಡೆದು ೨೫ ಸಾವಿರ ನಗದು ಜೊತೆಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಚೆನ್ನೈನ ಐಸಿಎಫ್ ೫೦ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನವನ್ನು ಚೆನ್ನೈನ ಎಸ್‌ಆರ್‌ಎಂ ೪೦ ಸಾವಿರ ನಗದು ಜೊತೆಗೆ ಟ್ರೋಫಿ ಪಡೆಯಿತು, ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ೩೦ ಸಾವಿರ ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು. ಕರ್ನಾಟಕ ವಾಲಿಬಾಲ್ ತಂಡ ೨೦ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು.
ವಿಜೇತರಿಗೆ ಎಂ. ಎ. ಗೋಪಾಲಸ್ವಾಮಿ, ಪಿ. ಎ. ಮಂಜಣ್ಣ, ಜಗದೀಶ್, ಮೂರ್ತಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಟ್ರೋಫಿ ನೀಡಿದರು.