ಸಾರಾಂಶ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆ ಎಂಎಸ್‌ಸಿ ಅಗ್ರಿಕಲ್ಚರ್ ಪ್ಲಾಂಟ್ ಬಯೋ ಕೆಮಿಸ್ಟ್ರಿ ವಿಷಯದಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ವಿದ್ಯಾರ್ಥಿನಿ ಕಾವ್ಯಾ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಭದ್ರಾವತಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆ ಎಂಎಸ್‌ಸಿ ಅಗ್ರಿಕಲ್ಚರ್ ಪ್ಲಾಂಟ್ ಬಯೋ ಕೆಮಿಸ್ಟ್ರಿ ವಿಷಯದಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ವಿದ್ಯಾರ್ಥಿನಿ ಕಾವ್ಯಾ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನವದೆಹಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ.ಸಂಜಯ್ ಕುಮಾರ್ ಮತ್ತು ಕುಲಪತಿ ಡಾ.ಪಿ.ಎಲ್ ಪಾಟೀಲ್ ಸೇರಿ ಇನ್ನಿತರ ಗಣ್ಯರು ವಿಶ್ವವಿದ್ಯಾಲಯದ ೩೭ನೇ ಘಟಿಕೋತ್ಸವದಲ್ಲಿ ಕಾವ್ಯರಿಗೆ ಪದವಿ ಮತ್ತು ಪದಕ ಪ್ರದಾನ ಮಾಡಿದರು.
ಕಾವ್ಯಾ ನಗರದ ಗೋವಿಂದ್ ರಾವ್ ರನ್ನೋರೆ ಹಾಗೂ ಲತಾ ಜಾಧವ್ ದಂಪತಿ ಪುತ್ರಿಯಾಗಿದ್ದು, ಉತ್ತಮ ಸಾಧನೆ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಸೇವಾ ಸಂಘ ಸೇರಿ ವಿವಿದ ಸಂಘ-ಸಂಸ್ಥೆಗಳು ಅಭಿನಂದಿಸಿವೆ.