ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ಸಮೀಪದ ಚೆಯ್ಯಂಡಾಣೆ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ವರ್ಷದ ಪ್ರಥಮ ಮಳೆ ಸುರಿಯಿತು.

ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ಸಮೀಪದ ಚೆಯ್ಯಂಡಾಣೆ ಭಾಗದಲ್ಲಿ ಅಲ್ಪ

ಪ್ರಮಾಣದಲ್ಲಿ ವರ್ಷದ ಪ್ರಥಮ ಮಳೆ ಸುರಿಯಿತು.

ಚೆಯ್ಯಂಡಾಣೆ ವ್ಯಾಪ್ತಿಯ ಕಬ್ಬೆ ಭಾಗಕ್ಕೆ 40 ಸೆಂಟ್ ಮಳೆಯಾಗಿದ್ದರೆ, ಪಟ್ಟಣ ವ್ಯಾಪ್ತಿಯಲ್ಲಿ 20 ಸೆಂಟ್ಸ್ ಮಳೆಯಾಗಿದೆ. ಸುರಿದ ಮಳೆಯಿಂದ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಈ ದಿನಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಹನಿ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಭತ್ತದ ಬೆಳೆ ಕೊಯ್ಲು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಫಿ ಕೊಯ್ಲು ಇದೀಗ ಭರದಿಂದ ಸಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಹರವಿ ಒಣಗಿಸಲಾಗುತ್ತಿದೆ. ನಾಪೋಕ್ಳು ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಮೀಪದ ಗ್ರಾಮಗಳಲ್ಲಿ ಅಲ್ಲಲ್ಲಿ ಹನಿ ಮಳೆಯಾಯಿತು.

-------------------------------

ವಿರಾಜಪೇಟೆ: ‘ದೈವಜ್ಞ ದರ್ಶನ’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ವಿರಾಜಪೇಟೆವಿರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ಜರುಗಿತು.

ಬೆಳಗ್ಗೆ ಮಹಿಳೆಯರು ಪೂರ್ಣ ಕುಂಭದೊಂದಿಗೆ ಶ್ರೀ ಕ್ಷೇತ್ರ ಕರ್ಕಿ ಮಠದ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾ ಸ್ವಾಮಿ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಅವರನ್ನು ಸ್ವಾಗತಿಸಿ, ನಂತರ ಅಲಂಕೃತ ರಥದಲ್ಲಿ ನಿಸರ್ಗ ಲೇಔಟ್‌ನಲ್ಲಿರುವ ದೈವಜ್ಞ ಮಂಟಪದವರೆಗೆ ಮೆರವಣಿಗೆ ನಡೆಸಿದರು.ದೈವಜ್ಞ ಬ್ರಾಹ್ಮಣ ಶ್ರೀ ಮಠದ ಟ್ರಸ್ಟಿ ಬೆಂಗಳೂರಿನ ಗಣಪತಿ ಶೇಟ್, ಕರ್ಕಿ ಮಠದ ಪ್ರಧಾನ ಪುರೋಹಿತರಾದ ಯೋಗೀಶ್ ಭಟ್, ದಕ್ಷಿಣ ಕೊಡಗು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿರಾಜಪೇಟೆಯ ಮಾತ ಜುವೆಲ್ಲರಿ ಮಾಲೀಕ ಉಲ್ಲಾಸ್ ಶೇಟ್, ಸ್ಥಾಪಕ ಅಧ್ಯಕ್ಷ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜುವೆಲ್ಸ್ ಮಾಲೀಕ ಎಂ.ಜಿ. ಮೋಹನ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಬಾಲಕೃಷ್ಣ (ಬಾಲು) ಉಪಸ್ಥಿತರಿದ್ದರು.

ಉಭಯ ಶ್ರೀಗಳನ್ನು ನಗರದ ಆಂಜನೇಯ ದೇವಸ್ಥಾನದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಕಾರು, ಬೈಕ್ ರ‍್ಯಾಲಿ ಹಾಗೂ ಮಂಗಳವಾದ್ಯ, ಭಜನಾ ನೃತ್ಯ, ಟ್ಯಾಬ್ಲೋಗಳ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಸಭಾಂಗಣದವರೆಗೆ ಬರಮಾಡಿಕೊಳ್ಳಲಾಯಿತು.ದೈವಜ್ಞ ಬ್ರಾಹ್ಮಣ ಶ್ರೀಮಠದ ಟ್ರಸ್ಟಿಗಳಾದ ಬೆಂಗಳೂರಿನ ಗಣಪತಿ ಶೇಟ್, ಗದಗಿನ ಅರುಣ್ ವರ್ಣೆಕರ ಅವರನ್ನು ಸನ್ಮಾನಿಸಲಾಯಿತು.

ದೈವಜ್ಞ ಸಮಾಜದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಶ್ರೀ ದೈವಜ್ಞ ಕುಲ ಗುರುಗಳಿಗೆ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಿದರು.ಸಮಾಜದ ಉಪಾಧ್ಯಕ್ಷ ನಾರಾಯಣ, ಖಜಾಂಚಿ ಆರ್. ರಾಜೇಶ್ ಶೇಟ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ವೆಂಟೇಶ್, ಸೌಮ್ಯ ನಾಗೇಶ್ ಮತ್ತಿತರ ಗಣ್ಯರು ಸಂಘದ ಪದಾಧಿಕಾರಿಗಳು ಇದ್ದರು.