ಐದು ಹಸು, ಒಂದು ಕರು, ಕೊಬ್ಬರಿ ಆಕಸ್ಮಿಕ ಬೆಂಕಿಗಾಹುತಿ

| Published : Feb 24 2025, 12:32 AM IST

ಸಾರಾಂಶ

ಆಕಸ್ಮಿಕ ಬೆಂಕಿ ಅವಘಡದಿಂದ ಐದು ಹಸು ಹಾಗೂ ಒಂದು ಕರು ಹಾಗೂ ₹15,000 ಕೊಬ್ಬರಿ, ₹10,000 ತೆಂಗಿನ ಕಾಯಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಹೆಂಜಗೊಂಡನಹಳ್ಳಿ ತೋಟದ ಮನೆಯಲ್ಲಿ ನಡೆದಿದೆ.

ಅರಸೀಕೆರೆ: ಆಕಸ್ಮಿಕ ಬೆಂಕಿ ಅವಘಡದಿಂದ ಐದು ಹಸು ಹಾಗೂ ಒಂದು ಕರು ಹಾಗೂ ₹15,000 ಕೊಬ್ಬರಿ, ₹10,000 ತೆಂಗಿನ ಕಾಯಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಹೆಂಜಗೊಂಡನಹಳ್ಳಿ ತೋಟದ ಮನೆಯಲ್ಲಿ ನಡೆದಿದೆ.

ಶಿವಣ್ಣ ಎಂಬುವರು ತೋಟದಲ್ಲಿ ರಾತ್ರಿ 8 ಗಂಟೆಯಲ್ಲಿ ಹಾಲು ಕರೆದು ಬೀಗ ಹಾಕಿಕೊಂಡು ಬಂದ ನಂತರ ಹೋಗಿ ಬೆಳಗ್ಗೆ ಬಂದು ನೋಡಿದಾಗ ಐದು ಹಸುಗಳು ಹಾಗೂ ಒಂದು ಕರು, ಕೊ ಬ್ಬರಿ, ತೆಂಗಿನ ಕಾಯಿ ಸುಟ್ಟು ಕರುಕಲಾಗಿದೆ. ಸ್ಥಳಕ್ಕೆ ಶಾಸಕ ಕೆ,ಎಂ ಶಿವಲಿಂಗೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತನಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಅಗ್ನಿಶಾಮಕದಳ, ಪಶುಸಂಗೋಪನಾ ಇಲಾಖೆ ವೈದ್ಯರು, ಪೋಲೀಸ್ ಇಲಾಖೆ ಕಂದಾಯ ಇಲಾಖೆ ಅಧಿಕಾರಿ ಹಾಗೂ ಗ್ರಾಮಸ್ಥರು ಇದ್ದರು.