ಪಂಚಗ್ಯಾರಂಟಿ ಬೆಳಕು ಹೆಚ್ಚಿಸಿದ ಗೃಹಜ್ಯೋತಿ!

| Published : May 20 2025, 01:11 AM IST

ಪಂಚಗ್ಯಾರಂಟಿ ಬೆಳಕು ಹೆಚ್ಚಿಸಿದ ಗೃಹಜ್ಯೋತಿ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಚೆಸ್ಕಾಂ ಹೆಸರಿನ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಈ ಗ್ರಾಹಕರ ವಿದ್ಯುತ್ ಬಿಲ್ಲನ್ನು ಭರಿಸುತ್ತಿದೆ. ಒಂದೇ ಹಂತದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಲ್ ಪಾವತಿ ಆಗುತ್ತಿರುವುದರಿಂದ ಅವುಗಳ ಆರ್ಥಿಕ ಶಕ್ತಿಯನ್ನು ಇದು ಹೆಚ್ಚಿಸಿದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಪೈಕಿ ಗೃಹಜ್ಯೋತಿ ಇತರ ಗ್ಯಾರಂಟಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿದ್ದು, ಗ್ರಾಮೀಣರಂತೆ ನಗರ ಪ್ರದೇಶದಲ್ಲೂ ಮನೆ ಮನೆಗಳ ಮಾಲೀಕರ ಜತೆಗೆ ಬಾಡಿಗೆದಾರರು ಯೋಜನೆಯ ಫಲಾನುಭವಿಗಳಾಗಿರುವುದು ವಿಶೇಷ. ಯೋಜನೆಯಡಿ ರಾಜ್ಯ ಸರ್ಕಾರ ಹೆಸ್ಕಾಂಗೆ ಮಾರ್ಚ್‌ ವರೆಗೆ ₹2660.84 ಕೋಟಿ ಪಾವತಿಸಿದೆ!

2023ರ ಮೇ ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚಗ್ಯಾರಂಟಿಗಳು ಜಾರಿಗೆ ಬಂದಿದ್ದು, ಈ ಪೈಕಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ಗೃಹಜ್ಯೋತಿ ಯೋಜನೆ 2023ರ ಜುಲೈ ತಿಂಗಳಿನಿಂದ ಜಾರಿಗೆ ಬಂದಿದೆ.

ಗ್ರಾಮೀಣ, ನಗರ ಪ್ರದೇಶದಲ್ಲಿ ಒಂದು ಯೂನಿಟ್‌ಗೆ ಈಗ ₹5.80 ಇದ್ದು, ಕನಿಷ್ಠ 100 ಯೂನಿಟ್‌ ನಿಗದಿಯಾದವರಿಗೆ ನಿಗದಿತ ಮಾಸಿಕ ಶುಲ್ಕ ₹145 ಸೇರಿ ₹700 ಹಾಗೂ 200 ಯೂನಿಟ್‌ ನಿಗದಿಯಾದವರಿಗೆ ₹1400 ವರೆಗೂ ಉಳಿತಾಯವಾಗುತ್ತಿದೆ. ಹುಬ್ಬಳ್ಳಿ ಮಹಾನಗರದಲ್ಲಿ 230,000 ಕುಟುಂಬಗಳು ಗೃಹಜ್ಯೋತಿ ಯೋಜನೆ ಲಾಭವನ್ನು ಪಡೆದುಕೊಂಡಿವೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.

ಬೆಸ್ಕಾಂ, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಚೆಸ್ಕಾಂ ಹೆಸರಿನ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಈ ಗ್ರಾಹಕರ ವಿದ್ಯುತ್ ಬಿಲ್ಲನ್ನು ಭರಿಸುತ್ತಿದೆ. ಒಂದೇ ಹಂತದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಿಲ್ ಪಾವತಿ ಆಗುತ್ತಿರುವುದರಿಂದ ಅವುಗಳ ಆರ್ಥಿಕ ಶಕ್ತಿಯನ್ನು ಇದು ಹೆಚ್ಚಿಸಿದೆ.

ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಪೂರೈಸುತ್ತಿದ್ದು, ಎರಡು ವರ್ಷದ ಅವಧಿಯಲ್ಲಿ ಕಂಪನಿಗೆ 2023ರ ಆಗಸ್ಟ್‌ನಿಂದ 2024ರ ಮಾರ್ಚ್‌ ವರೆಗೆ ಸರ್ಕಾರದಿಂದ ಹೆಸ್ಕಾಂಗೆ ಸಹಾಯಧನ ಮೊತ್ತ ₹1092.91 ಕೋಟಿ ಹಾಗೂ 2024ರ ಏಪ್ರಿಲ್‌ದಿಂದ 2025ರ ಏಪ್ರಿಲ್‌ವರೆಗೆ ₹1567.93 ಕೋಟಿ ಪಾವತಿಸಿದೆ.

ಯೋಜನೆ ಅನುಷ್ಠಾನ ಮಾಡುವಾಗ ಫಲಾನುಭವಿಗಳ ಹಿಂದಿನ ವರ್ಷದ ವಾರ್ಷಿಕ ವಿದ್ಯುತ್ ಉಪಯೋಗಿಸುವ ಬಿಲ್ ಆಧರಿಸಿ ಅದರ ಮೇಲೆ ಶೇ. 10 ಹೆಚ್ಚುವರಿ ಯೂನಿಟ್‌ಗಳನ್ನು ಸರ್ಕಾರ ನಿಗದಿಗೊಳಿಸಿದೆ. ಹೀಗಾಗಿ ಎಲ್ಲರಿಗೂ ಯೋಜನೆಯಂತೆ ಗರಿಷ್ಠ 200 ಯೂನಿಟ್ ಬಳಕೆಗೆ ಅವಕಾಶ ದೊರೆತಿಲ್ಲ.

2023 ಜುಲೈನಿಂದ ಗೃಹಜ್ಯೋತಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. 2025 ಮೇ ತಿಂಗಳ ಸೇರಿಕೊಂಡು ಇದುವರೆಗೂ ಫಲಾನುಭವಿಗಳು 23 ತಿಂಗಳು ಉಚಿತ ವಿದ್ಯುತ್ ಪಡೆದಿದ್ದಾರೆ. ಯೋಜನೆಯಡಿ ಇದುವರೆಗೆ ಗ್ರಾಹಕರಿಗೆ ₹23 ಸಾವಿರಕ್ಕೂ ಅಧಿಕ ರುಪಾಯಿ ಉಳಿತಾಯವಾಗಿದೆ.

ಪ್ರತಿ ತಿಂಗಳು ಬಿಲ್ ಬರುತ್ತದೆ. ಆದರೆ ಅದರಲ್ಲಿ ಬಳಕೆಯ ವಿವರಗಳ ಜತೆಗೆ ಶೂನ್ಯ ಬಿಲ್ ತೋರಿಸುತ್ತಾರೆ. ಆಯಾ ಕುಟುಂಬಕ್ಕೆ ನಿಗದಿಯಾದ ಯೂನಿಟ್ ದಾಟಿದ್ದರೆ ಅದಕ್ಕೆ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಕಟ್ಟುತ್ತಿದ್ದಾರೆ.

2023ರಿಂದ 24ರ ಮಾರ್ಚ್‌ವರೆಗಿನ ಆರ್ಥಿಕ ವರ್ಷದಲ್ಲಿ ಯೋಜನೆಯಡಿ ಬಾಗಲಕೋಟೆ-405208, ಬೆಳಗಾವಿ-960729, ಧಾರವಾಡ-472085, ಗದಗ-262065, ಹಾವೇರಿ-379905, ಉತ್ತರ ಕನ್ನಡ-368791, ವಿಜಯಪುರ-421739, ಒಟ್ಟು 3270522 ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಂಡಿದ್ದು, ₹994.37 ಕೋಟಿ ವೆಚ್ಚದ ವಿದ್ಯುತ್‌ ಪ್ರಯೋಜನ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿಯಂಥ ಯೋಜನೆಗಳು ಫಲಾನುಭವಿಗಳಿಗೆ ಆರ್ಥಿಕವಾಗಿ ಬಹಳ ಅನುಕೂಲವಾಗಿದೆ. ಅದರಲ್ಲೂ ಹುಬ್ಬಳ್ಳಿಯಂಥ ಮಹಾನಗರದಲ್ಲಿ ಒಂದು ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ಪಂಚ ಗ್ಯಾರಂಟಿ ಯೋಜನೆಗಳು ತಗ್ಗಿಸಿವೆ ಎಂದು ಹುಬ್ಬಳ್ಳಿ ಶಹರದ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಬ್ದುಲ್‌ ರಶೀದ್ ಭೋಲಾ ಭಾಯಿ ಹೇಳಿದರು. 2024ರ ಏಪ್ರಿಲ್‌ದಿಂದ 25ರ ಮಾರ್ಚ್‌ ವರೆಗೆ

ಜಿಲ್ಲೆಗಳುಫಲಾನುಭವಿಗಳು ವೆಚ್ಚ (ಕೋಟಿ)

ಬಾಗಲಕೋಟೆ418203 ₹186.47

ಬೆಳಗಾವಿ995090₹480.87

ಧಾರವಾಡ494540₹268.89

ಗದಗ269920₹120.51

ಹಾವೇರಿ391031₹170.12

ಉತ್ತರ ಕನ್ನಡ383326 ₹212.36

ವಿಜಯಪುರ435984₹206.51

ಒಟ್ಟು ಫಲಾನುಭವಿಗಳು 3388094 ₹1645.72