ಗ್ರಾಮಗಳಲ್ಲಿ ಮಧ್ಯರಾತ್ರಿಯೇ ಧ್ವಜಾರೋಹಣ

| Published : Aug 16 2024, 12:53 AM IST

ಸಾರಾಂಶ

ದೇವರಹಿಪ್ಪರಗಿ: ಮತಕ್ಷೇತ್ರದ ಮುಳಸಾವಳಗಿ, ಜಾಲವಾದ, ಕಲಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿಯೇ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಾಲವಾದ ಗ್ರಾಮದ ಗಜಾನನ ವೃತ್ತದ ಹತ್ತಿರ ಮಧ್ಯರಾತ್ರಿ 12 ಗ೦ಟೆಗೆ 78ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಗ್ರಾಮದ ಸುರೇಶ ಮಣೂರ ಧ್ವಜಾರೋಹಣ ಕಾರ್ಯಕ್ರಮ ನಡೆಸಿದರು.

ದೇವರಹಿಪ್ಪರಗಿ: ಮತಕ್ಷೇತ್ರದ ಮುಳಸಾವಳಗಿ, ಜಾಲವಾದ, ಕಲಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿಯೇ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಾಲವಾದ ಗ್ರಾಮದ ಗಜಾನನ ವೃತ್ತದ ಹತ್ತಿರ ಮಧ್ಯರಾತ್ರಿ 12 ಗ೦ಟೆಗೆ 78ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಗ್ರಾಮದ ಸುರೇಶ ಮಣೂರ ಧ್ವಜಾರೋಹಣ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ನಿವೃತ್ತ ಎ‌ಎಸ್‌ಐ ಬಿ.ಸಿ.ದುಮಗೊಂಡ, ಸಿದ್ರಾಮ ಗುಂಡಗಿ, ಬೋಗೇಶ ಜನಗೊಂಡ, ಸಂಗಮೇಶ ಜನಗೊಂಡ, ಉಮೇಶ, ಲಕ್ಷ್ಮಿಕಾಂತ, ಅಜಿತ, ಮಹಾಂತೇಶ, ಶಿವು, ಶ್ರೀನಾಥ, ಚಂದ್ರು, ರಂಜಿತ್, ಶ್ರೀಶೈಲ, ಮಲ್ಲು, ಮಹೇಶ, ರಾಕೇಶ, ರಾಹುಲ್ ಸೇರಿದಂತೆ ಗ್ರಾಮದ ಅನೇಕ ಯುವಕರು, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.ದೇವರಹಿಪ್ಪರಗಿ ತಾಲ್ಲೂಕಿನ ಭಾವೈಕ್ಯತೆಯ ಗ್ರಾಮವಾದ ಮುಳಸಾವಳಗಿಯ ಶ್ರೀ ಶ್ರೀಶೈಲ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ಮತಕ್ಷೇತ್ರದ ಕಲಕೇರಿ ಗ್ರಾಮದ ಮುಖ್ಯ ಬಜಾರ ಆವರಣದಲ್ಲಿ ಮಧ್ಯರಾತ್ರಿ 12 ಗಂಟೆಗೆ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.