ಸಾರಾಂಶ
ಬಾಳೆಹೊನ್ನೂರು, ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ-ಮಹಲ್ಗೋಡು ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ದಿಢೀರ್ ಪ್ರವಾಹ ಉಂಟಾಗಿ ಬಾಳೆಹೊನ್ನೂರು-ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಎರಡು ಗಂಟೆಗೂ ಅಧಿಕ ಕಾಲ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತ । ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋದ ಮೂರು ಹಸುಗಳುಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ-ಮಹಲ್ಗೋಡು ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ದಿಢೀರ್ ಪ್ರವಾಹ ಉಂಟಾಗಿ ಬಾಳೆಹೊನ್ನೂರು-ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನೀರು ಉಕ್ಕಿ ಹರಿದು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ತೆರಳುವ ಮಾರ್ಗದ ಮಹಲ್ಗೋಡು ಸುತ್ತಮುತ್ತ ಹರಿಯುವ ಕಿರು ಹಳ್ಳಗಳಾದ ದೊಡ್ಡಕಟ್ಟು, ಸಣ್ಣಕಲ್ಲುಗಂಡಿ, ದೊಡ್ಡಕಲ್ಲುಗಂಡಿ, ಗೊರಸನಗದ್ದೆ, ಮಹಲ್‌ಗೋಡು ಎಸ್ಟೇಟ್ ಹಳ್ಳ, ನೇಮನಹಳ್ಳಿ, ಬಹಿಷ್ಕಾರ್, ಹೊನ್ನವಳ್ಳಿ, ಕಬ್ಬಿನಮಣ್ಣು ಕಿರು ಹಳ್ಳಗಳಲ್ಲಿನ ನೀರು ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಮೂಲಕ ಹಾದು ಭದ್ರಾನದಿ ಸೇರುತ್ತದೆ.ಈ ಕಿರು ಹಳ್ಳಗಳು ಹರಿಯುವ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಧಾರಾಕಾರ ಮಳೆ ಯಿಂದ ಭಾರೀ ಪ್ರಮಾಣದ ನೀರು ಒಮ್ಮೆಲೆ ಹೊನ್ನವಳ್ಳಿ-ಮಹಲ್ಗೋಡು ಸೇತುವೆ ಪ್ರವೇಶಿಸಿದ್ದು, ಮುಖ್ಯರಸ್ತೆ ಮೇಲೆ ಸಂಪೂರ್ಣ ನೀರು ಬಂದು ಸಂಪರ್ಕ ಕಡಿತವಾಗಿತ್ತು. ಎರಡೂ ಬದಿಗಳಲ್ಲಿ ಬಸ್ , ಪ್ರವಾಸಿ ವಾಹನಗಳು ಸೇತುವೆ ಮೇಲೆ ಸಂಚರಿಸಲಾಗದೇ ಸಾಲುಗಟ್ಟಿ ನಿಂತಿದ್ದವು. ನೀರಿನ ರಭಸಕ್ಕೆ 3 ಹಸುಗಳು ಸಿಲುಕಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಕಡಿಮೆಯಾದ ಬಳಿಕ ವಾಹನ ಸಂಚಾರ ಪುನಾರಂಭಗೊಂಡಿತು. ಹೊನ್ನವಳ್ಳಿ-ಮಹಲ್ಗೋಡು ಸೇತುವೆ ನೆಲಮಟ್ಟದಿಂದ ಬಹಳ ಎತ್ತರವಿಲ್ಲ. ಭಾರೀ ಮಳೆ ಬಂದಾಗ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೇತುವೆ ಎತ್ತರಿಸುವ ಕೆಲಸ ವಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.೧೭ಬಿಹೆಚ್‌ಆರ್ ೧-೨: ಬಾಳೆಹೊನ್ನೂರಿನಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೊನ್ನವಳ್ಳಿ-ಮಹಲ್ಗೋಡು ಸೇತುವೆಯ ಮೇಲೆ ದಿಢೀರ್ ಪ್ರವಾಹ ಉಂಟಾಗಿ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.