ಅಗ್ನಿ ಅವಘಡಕ್ಕೆ ಫ್ಲೆಕ್ಸ್, ಪ್ರಿಂಟಿಂಗ್ ಮಳಿಗೆ ಭಸ್ಮ

| Published : Apr 09 2024, 12:46 AM IST

ಅಗ್ನಿ ಅವಘಡಕ್ಕೆ ಫ್ಲೆಕ್ಸ್, ಪ್ರಿಂಟಿಂಗ್ ಮಳಿಗೆ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಸೀತಾರಾಮ ಎಂಬವರಿಗೆ ಸೇರಿದ್ದ ಕನ್ನಿಕಾ ಪ್ರಿಂಟ್ಸ್ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಶಿರಸಿ: ಆಕಸ್ಮಿಕ ಅಗ್ನಿ ದುರಂತದಿಂದಾಗಿ ನಗರದ ನಟರಾಜ ರಸ್ತೆಯಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಮಳಿಗೆ ಸುಟ್ಟು ಕರಕಾಲದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಸೀತಾರಾಮ ಎಂಬವರಿಗೆ ಸೇರಿದ್ದ ಕನ್ನಿಕಾ ಪ್ರಿಂಟ್ಸ್ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮೂರು ಪ್ರಿಂಟಿಂಗ್ ಮಷಿನ್, ಉಪಕರಣಗಳು, ಸಿದ್ಧಗೊಂಡಿದ್ದ ಫ್ಲೆಕ್ಸ್ ಸೇರಿದಂತೆ ₹೨೦ ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ಆರಿಸಿದೆ.ಮನೆ ಬಾಗಿಲು ಮುರಿದು ಕಳ್ಳತನ

ಗೋಕರ್ಣ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಇಲ್ಲಿನ ಬಿಜ್ಜೂರಿನಲ್ಲಿ ನಡೆದಿದೆ.ಉದಯ ಗೌಡ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, 34 ಗ್ರಾಂ ಚಿನ್ನ ಹಾಗೂ ಇತರೆ ವಸ್ತುಗಳನ್ನು ದೋಚಿದ್ದಾರೆ. ಭಾನುವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಹೊಂಚು ಹಾಕಿದ್ದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಕಾರವಾರದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದೆ. ಪಿಐ ಯೋಗೇಶ ಕೆಂ.ಎಂ. ಮಾರ್ಗದರ್ಶನದಲ್ಲಿ ಕ್ರೈಂ ಪಿಎಸ್ಐ ಶಶಿಧರ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.