ಪ್ರವಾಹ: ರಕ್ಷಣಾ ಕಾರ್ಯಕ್ಕೆ ನೋಡಲ್ ಅಧಿಕಾರಿಗಳ ನೇಮಕ

| Published : Aug 07 2024, 01:05 AM IST

ಸಾರಾಂಶ

ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳನ್ನು ರಕ್ಷಿಸಲು ನದಿ ದಂಡೆಯ ವಿವಿಧ ಗ್ರಾಮಗಳಿಗೆ 27 ಜನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ರಕ್ಷಣಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷೆ ಬಿ. ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಹಾರಾಷ್ಟ್ರ ರಾಜ್ಯದ ಉಜ್ಜನಿ ಮತ್ತು ವೀರ್ ಭಟ್ಕರ್‌ ಜಲಾಶಯದಿಂದ ಭೀಮಾ ನದಿಗೆ 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್‌ ನೀರು ಹರಿಬಿಟ್ಟಿರುವುದರಿಂದ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸುವ ಹಿನ್ನೆಲೆಯಲ್ಲಿ ಜನ-ಜಾನುವಾರುಗಳನ್ನು ರಕ್ಷಿಸಲು ನದಿ ದಂಡೆಯ ವಿವಿಧ ಗ್ರಾಮಗಳಿಗೆ 27 ಜನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ರಕ್ಷಣಾ ಕಾರ್ಯಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷೆ ಬಿ. ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.

ಉಜ್ಜನಿ ಮತ್ತು ವೀರ್ ಜಲಾಶಯದಿಂದ ಬಿಡಲಾಗಿರುವ ಅಪಾರ ಪ್ರಮಾಣದ ನೀರು ಜಿಲ್ಲೆಯ ಅಫಜಲ್ಪುರ ತಾಲೂಕಿನ ಭೀಮಾ ಸೊನ್ನ ಬ್ಯಾರೇಜಿಗೆ ಬಂದು ತಲುಪಲು 24 ಗಂಟೆ ಸಮಯ ಹಿಡಿಯಲಿದೆ. ಇದರಿಂದ ಭೀಮಾ ಮತ್ತು ಕಾಗಿಣಾ ನದಿ ದಂಡೆಯ ಪ್ರವಾಹ ಸಂದರ್ಭದಲ್ಲಿ ತುರ್ತು ರಕ್ಷಣೆ ಹಾಗೂ ಪರಿಹಾರಕ್ಕಾಗಿ ವಿವಿಧ ತಾಲೂಕಿನ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಕೂಡಲೇ ಅಧಿಕಾರಿಗಳು ತಮಗೆ ನೇಮಿಸಿದ ಗ್ರಾಮಗಳಿಗೆ ಭೇಟಿ ನೀಡಿ ಜನ-ಜಾನುವಾರುಗಳ ರಕ್ಷಣೆ ಹಾಗೂ ಕಾಳಜಿ ಕೇಂದ್ರದ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ರಕ್ಷಣಾ ಕಾರ್ಯಕ್ಕೆ ತಾಲೂಕುವಾರು ವಿವಿಧ ಗ್ರಾಮಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳ ವಿವರ ಇಂತಿದೆ.

ಅಫಜಲ್ಪುರ ತಾಲೂಕು: ಹೊಸೂರ, ಶೇಷಗಿರಿವಾಡಿ, ಮಣ್ಣೂರ, ದೇವಪ್ಪನಗರ, ಕೂಡಗನೂರ, ಶಿವೂರ ಗ್ರಾಮಗಳಿಗೆ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಸತೀಶ ಕುಮಾರ (9483618808), ಉಡಚಾಣ, ಹಿರಿಯಾಳ, ಭೋಸಗಾ, ದುದ್ದಣಗಿ, ಮಂಗಳೂರು ಗ್ರಾಮಕ್ಕೆ ಡಿಡಿಪಿಐ ಸೂರ್ಯಕಾಂತ ಮದಾನೆ (9448999341), ಸೊನ್ನ (ಬ್ರೀಜ್ ಬ್ಯಾಕ ವಾಟರ್), ಬಳ್ಳೂಂಡಗಿ, ಅಳ್ಳಗಿ (ಕೆ), ಅಳ್ಳಗಿ (ಬಿ), ಶಿರವಾಳ ಗ್ರಾಮಗಳಿಗೆ ಪಶುಸಂಗೊಪನಾ ಇಲಾಖೆಯ ಉಪನಿರ್ದೇಶಕ ಡಾ. ಸಿರಾಜ್ ಅವಟೆ (9972469954), ಭಂಕಲಗಾ, ಗೌರ (ಕೆ), ಗೌರ (ಬಿ), ದಿಕ್ಸಂಗಾ (ಕೆ), ತೆಲೋಣಿ ಗ್ರಾಮಗಳಿಗೆ ಆಹಾರ ಇಲಾಖೆಯ ಉಪನಿರ್ದೇಶಕ ಭೀಮರಾಯ (9686250017), ನಂದರಗಾ, ಜೇವರ್ಗಿ (ಕೆ), ಜೇವರ್ಗಿ (ಬಿ), ಬನ್ನೇಟ್ಟಿ, ಶಿವಪೂರ ಗ್ರಾಮಗಳಿಗೆ ಜಿಲ್ಲಾ ಬಿಸಿಎಂ ಅಧಿಕಾರಿ ಪ್ರಭು ದೂರೆ (9901444631), ಕೇಶಾಪೂರ, ಇಂಚಗೇರಾ, ಇಂಗಳಗಿ(ಕೆ), ಹವಳಗಾ, ಘತ್ತರಗಾ ಗ್ರಾಮಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ (7204451771), ಕಲ್ಲೂರ, ಕೋಳನೂರ, ಗುಡ್ಡೇವಾಡಿ, ಘೋಳನೂರ, ಬಟಗೇರಾ, ಆನೂರ, ಬಿಳವಾಡ (ಬಿ), ಕೆಕ್ಕರಸಾವಳಗಿ ಗ್ರಾಮಗಳಿಗೆ ಜಿಲ್ಲಾ ವಿಕ¯ಚೇತನ ಅಧಿಕಾರಿ ಸಾಧಿಕ್ ಖಾನ್ (8867198972), ದೇವಲ ಗಾಣಗಾಪೂರ, ಬಂದರವಾಡ, ತೆಗ್ಗೆಳ್ಳಿ, ಸಿರಸಗಿ, ಟಾಕಳಿ, ತೆಲ್ಲೂರ, ಅವರಾದ ಗ್ರಾಮಗಳಿಗೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ನಾಗರಾಜ (9341347440), ಉಮರ್ಗಾ, ಸಾಗನೂರ, ಕಿರಸಾವಳಗಿ, ಚಿನ್ಮಳ್ಳಿ, ಕೆರಕನಹಳ್ಳಿ ಗ್ರಾಮಗಳಿಗೆ ಕಲಬುರಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ (9620685778).

ಜೇವರ್ಗಿ ತಾಲೂಕು: ಅಂಕಲಗಾ, ಹುಲ್ಲೂರ, ಸಿದ್ನಾಳ, ಮೊಗನ ಇಟಗಾ, ಭೋಸಗಾ (ಕೆ), ಭೋಸಗಾ (ಬಿ), ಜಾಲಿಹಾಳ, ಹರನಾಳ-ಕೆ, ಹಂಚನಾಳ-ಎಸ್.ಎನ್. ಗ್ರಾಮಗಳಿಗೆ ಕರ್ನಾಟಕ ಗೃಹ ಮಂಡಳಿ ಇಇ ಮುರಳೀಧರನ್ ದೇಶಪಾಂಡೆ (9483521444), ಬ್ಯಾಡರಹಾಳ, ಬೇಲೂರ, ಕೂಡಲಗಿ, ಯಂಕಂಚಿ, ಮಾಹೂರ, ಕಲ್ಲೂರ(ಬಿ), ಗುಲ್ಲಿಹಾಳ(ಡಿ) ಗ್ರಾಮಗಳಿಗೆ ಶಾಲಾ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪಾ ಮೂಳೇಗಾಂವ (9632361885), ನೆಲೋಗಿ, ಕೂಟನೂರ, ಹರವಾಳ, ರಾಸಣಗಿ, ಹಂದನೂರ ಗ್ರಾಮಗಳಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಜಾವೀದ್ ಕಾರಂಗಿ (9449161217), ಬಣಮಿ, ಕೊಬಾಳ, ಕೂಡಿ, ಕೋಳಕೂರ, ರದ್ದೆವಾಡಗಿ, ಮಂದರವಾಡ, ಹಿಪ್ಪರಗಾ ಕೋನ, ಪಕ್ರುದ್ದಿನ ದರ್ಗಾ ಗ್ರಾಮಗಳಿಗೆ ಜಿಲ್ಲಾ ವಕ್ಫ್ ಅಧಿಕಾರಿ-(8073098219), ಕಟ್ಟಿಸಂಗಾವಿ, ಬಂಟನಾಳ, ಚನ್ನೂರ, ಗುಡೂರ (ಎಸ್.ಎ), ಮದರಿ, ಯನಗುಂಟಿ, ಬಳವಡಗಿ ತಾಂಡಾ, ರಾಜವಾಳ, ನರಿಬೋಳ, ಮಲ್ಲಾ (ಕೆ) ಗ್ರಾಮಗಳಿಗೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಪ್ರಕಾಶ ಬಾಬು (9986779314), ಹೊನ್ನಾಳ, ಹೊತ್ತಿನಮಡು, ಹಂಚನಾಳ(ಬಿ), ರಾಂಪೂರ, ನಾರಾಯಣಪೂರ, ಬಿರಾಳ(ಕೆ), ಬಿರಾಳ(ಬಿ) ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ ಧನಂಜಯ (7676804049).

ಕಲಬುರಗಿ ತಾಲೂಕು: ಮೈನಾಳ, ಹೆರೂರು-ಬಿ, ಬೆಳಗುಂಪಾ–ಕೆ, ಬಸವಪಟ್ಟಣ, ಔರಾದ-ಕೆ ಗ್ರಾಮಗಳಿಗೆ ಕಲಬುರಗಿ ಎಸ್.ಎಲ್.ಎ.ಓ (ಎನ್.ಎಚ್.ಎ.ಐ.) ಅಧಿಕಾರಿ ರಾಮಚಂದ್ರ ಗಡಾದೆ (9743334596), ಹಾಗರಗುಂಡಗಿ, ಸರಡಗಿ-ಬಿ, ನದಿಸಿನ್ನೂರ, ಫಿರೋಜಾಬಾದ, ಹಸನಾಪೂರ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಜಗದೇವಪ್ಪಾ-(9986887077), ಸೋಮನಾಥಹಳ್ಳಿ, ನಡುವಿನಹಳ್ಳಿ, ಫರಹತಾಬಾದ ಗ್ರಾಮಗಳಿಗೆ ಕಲಬುರಗಿ ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ ದೌಲಾ (9986108000), ತಾಡತೆಗನೂರ, ಕವಲಗಾ (ಕೆ), ಕವಲಗಾ (ಬಿ), ಗರೂರ (ಕೆ), ತೀಳಗೊಳ, ಬಳವಾಡ ಗ್ರಾಮಗಳಿಗೆ ಕಲಬುರಗಿ ತಾಲೂಕು ಪಂಚಾಯ್ತಿ ಇ.ಓ. ಸೈಯದ್ ಪಟೇಲ್ (9900290355).

ಚಿತ್ತಾಪುರ ತಾಲೂಕು: ಕಡಳ್ಳಿ, ಹೊನ್ನಗುಂಟಾ, ಕೂಂದನೂರ, ಚಾಮನೂರ, ಬಳವಡಗಿ ಗ್ರಾಮಗಳಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ (9741695388), ಕಡಬೂರ, ಕೊಳ್ಕುಂದಾ, ತುರನೂರ, ಸೂಗೂರ-ಎನ್, ಮಾರಡಗಿ ಗ್ರಾಮಗಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ-(9880475035), ಕೊಳ್ಳೂರ, ಸನ್ನತಿ, ಕನಗನಹಳ್ಳಿ, ಹುಳಂಡಗೇರಾ, ಬನ್ನೇಟ್ಟಿ ಗ್ರಾಮಗಳಿಗೆ ಸೇಡಂ ಪಿಡಬ್ಲ್ಯೂಡಿ ಇಲಾಖೆಯ ಇ.ಇ. ಗಾಜರೆ (9591461212), ತರಕಸಪೇಟ, ರಾಪೂರ, ಮಳಗಿ (ಎನ್), ಇಂಗಳಗಿ/ಇಂಗಳಗಿ ತಾಂಡಾ, ಹೊನಗುಂಟಾ ಗ್ರಾಮಗಳಿಗೆ ಸಣ್ಣ ನೀರಾವರಿ ಇಲಾಖೆಯ ಇ.ಇ. ಗಗನ್‍ಗೌಡ (9449160554). ಜೀವಣಗಿ, ಕಾಟಮದೇವರಹಳ್ಳಿ, ಭಾಗೋಡಿ, ಇವಣಿ, ಬೇಳಗುಂಪಾ, ದಂಡೋತಿ ಗ್ರಾಮಗಳಿಗೆ ಚಿತ್ತಾಪೂರ ತಾಲೂಕು ಪಂಚಾಯ್ತಿ ಇ.ಓ. ನೀಲಗಂಗಾ ಬಬಲಾದ (9986564605).

ಶಾಹಾಬಾದ ತಾಲೂಕು: ಶಂಕರವಾಡಿ, ಗೋಳಾ (ಕೆ), ಭಂಕೂರ, ಮಾಲಗತ್ತಿ, ಶಹಾಬಾದ, ಕದ್ದರಗಿ, ಮುತ್ತಗಾ ಗ್ರಾಮಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಲೋಗಮಾನ್ನ (9986144455).

ಕಾಳಗಿ ತಾಲೂಕು: ಟೇಂಗಳಿ, ತೊನಸನಳ್ಳಿ, ಮಲಘಾಣ, ಡೊಣ್ಣೂರ, ಗೊಟೂರ ಗ್ರಾಮಗಳಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ (9449985479). ಕಣಸೂರ, ಕಲಗುರ್ತಿ, ಹೆಬ್ಬಾಳ, ಕಲ್ಲಹಿಪ್ಪರಗಾ ಗ್ರಾಮಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಂತೋಷ (9886435185).