ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇರಳದಲ್ಲಿ ಸೆ.೫ ಕ್ಕೆ ಓಣಂ ಹಬ್ಬದ ಹಿನ್ನೆಲೆ ಮೈಸೂರು ಕಡೆಗೆ ಬಂದ ಕೇರಳಿಗರು ವಾಪಸ್ ತೆರಳುವಾಗ ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯಲ್ಲಿ ವಿವಿಧ ಬಗೆಯ ಹೂ ಖರೀದಿಸಿದರು.ಹೂವಿಗೆ ಭಾರೀ ಬೇಡಿಕೆ ಇರುವ ಸುಳಿವರಿತ ಕೇರಳ ರಸ್ತೆಯಲ್ಲಿರುವ ರೈತರು ಹಾಗೂ ಮಾರಾಟಗಾರರು ರಸ್ತೆ ಬದಿಯಲ್ಲೇ ವ್ಯಾಪಾರಕ್ಕೆ ಇಳಿದಿದ್ದಾರೆ. ಓಣಂ ಹಬ್ಬದ ಪರಿಣಾಮ ಚೆಂಡು ಮಲ್ಲಿಗೆ ಕೆಂಪು, ಹಳದಿ, ಕಾಶಿಗೊಂಡ, ಗುಲಾಬಿಯ ೭ ವಿವಿಧ ಬಣ್ಣ ಹಾಗೂ ಸೇವಂತಿಗೆ ಬಿಳಿ, ಕೆಂಪು ಬಣ್ಣದ ಹೂವಿನ ರಾಶಿ ರಸ್ತೆಯಲ್ಲಿ ಖರೀದಿಗೆ ಪ್ರವಾಸಿಗರು ಮುಂದಾಗಿದ್ದರು.
ಹೂವು ಖರೀದಿಗೆ ಬರುವ ಪ್ರವಾಸಿಗರು ಹಾಗೂ ಕೇರಳದ ಮಂದಿಗೆ ಇಲ್ಲಿನ ಹೂ ವ್ಯಾಪಾರಿಗಳು ಮುಖ ನೋಡಿ ಹಣ ಪಡೆಯುತ್ತಿದ್ದಾರೆ. ಒಂದು ಕೆಜಿ ಹಳದಿ ಚೆಂಡು ಹೂಗೆ ೭೫ ರು.ಗೆ ಮಾರಾಟ ಮಾಡುತ್ತಿದ್ದಾರೆ. ಕೆಂಪು ಬಣ್ಣದ ಚೆಂಡುಮಲ್ಲಿಗೆ ೨೦ ರಿಂದ ೨೫ ರು, ಕಾಶಿಗೊಂಡಕ್ಕೆ ೧೦೦ ರಿಂದ ೧೫೦ ರು, ಬಿಳಿ ಸಾವಂತಿಗೆ ೬೦ ರು, ಬಿಳಿ ಗುಲಾಬಿ ಬಣ್ಣದ ಎಲ್ಲಾ ಹೂವಿಗಳಿಗೆ ೧೦೦ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.ಹೂವಿಗೆ ಕೇರಳದಲ್ಲಿ ಭಾರೀ ಬೇಡಿಕೆ ಇರುವ ಕಾರಣ ರೈತರಿಂದ ಕಡಿಮೆ ಬೆಲೆಗೆ ಹೂ ಖರೀದಿಸಿ, ಕೇರಳಕ್ಕೆ ತೆರಳಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ರೈತರು ಮಾತ್ರ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಹೂವಿನ ಮಾರಾಟಕ್ಕೆ ಮಾಡುತ್ತಿದ್ದಾರೆ.
ಗುಂಡ್ಲುಪೇಟೆಯಿಂದ ೪ ಕೀ.ಮೀ ಹಿಡಿದು ಮದ್ದೂರು ಅರಣ್ಯ ಇಲಾಖೆಯ ಕಚೇರಿಯ ತನಕ ರಸ್ತೆಯ ಇಕ್ಕೆಲಗಳಲ್ಲಿ ಹೂವಿನಂಗಡಿಗಳಲ್ಲಿ ಹೂವಿನ ರಾಶಿ ಇರುವ ಕಾರಣ ರಸ್ತೆಯ ಬದಿ ಕಲರ್‌ಫುಲ್ ಆಗಿದೆ. ಅಲ್ಲದೆ ಬೆಂಡಗಳ್ಳಿ ಗೇಟ್‌ಗಳ ಬಳಿಯೂ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹಳದಿ ಬಣ್ಣದ ಚೆಂಡು ಹೂವು ಇಟ್ಟುಕೊಂಡು ಬಿಸಿಲಿನ ಬೇಗೆಯ ನಡುವೆ ಮಾರಾಟ ಮಾಡಲು ಕಾದು ಕುಳಿತಿದ್ದರು.ಓಣಂ ಹಬ್ಬದಲ್ಲಿ ರಂಗೋಲಿಗೆ ಹೂ ಬಳಕೆ:
ಕೇರಳಿಗರ ಬಹುದೊಡ್ಡ ಹಬ್ಬವಾದ ಓಣಂ ರಾಜ್ಯದಲ್ಲಿ ೧೦ ದಿನಗಳ ಕಾಲ ಹಬ್ಬವಾಗಿದೆ. ಈ ಓಣಂ ಹಬ್ಬದಲ್ಲಿ ಕೇರಳಿಗರು ತಮ್ಮ ಮನೆಯ ಮುಂದೆ ಹೂವಿನ ರಂಗೋಲಿಗೆ ಹೂ ಬಳಸುತ್ತಾರೆ. ಹಬ್ಬದ ಮೊದಲ ದಿನ ಹೂವಿನಿಂದ ಆಲಂಕಾರ ಮಾಡಿದರೆ ನಂತರದ ದಿನಗಳಲ್ಲಿ ವಿವಿಧ ಬಣ್ಣದ ಹೂನಿಂದ ರಂಗೋಲಿ ಬಿಡಿಸುವುದು ಅಲ್ಲಿನ ಸಂಪ್ರಾದಾಯ ಎಂದು ಗುಂಡ್ಲುಪೇಟೆ ನಿವಾಸಿ ಬೈಜು ತಿಳಿಸಿದರು.ರಸ್ತೆಯ ಬದಿಯಲ್ಲಿ ರೈತರೇ ವ್ಯಾಪಾರ ಮಾಡುವ ಕಾರಣ ರೈತರಿಗೆ ಹೂವಿನ ಬೆಳೆ ಲಾಭದಾಯಕವಾಗಿದೆ. ಈ ಭಾರಿ ಇಳುವರಿ ಬಂದಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ವ್ಯಾಪಾರ ಕಡಿಮೆಯಾದಂತಿದೆ.ಪರಶಿವ ಚನ್ನಮಲ್ಲೀಪುರ ಗ್ರಾಮರಸ್ತೆ ಬದಿಯಲ್ಲಿ ವಿವಿಧ ಬಗೆ ಬಣ್ಣದ ಹೂವು ನೋಡುವುದೇ ಒಂದು ಸೊಬಗಾಗಿದೆ. ಇಂಥ ದೃಶ್ಯ ಓಣಂ ಸಮಯದಲ್ಲಿ ಮಾತ್ರ ಕಾಣಲಿದೆ. ಹಲವಾರು ಬಗೆಯ ಬಣ್ಣದ ಹೂ ಖರೀದಿ ಮಾಡಿದ್ದೇನೆ.-ಬಿಜು, ಪ್ರವಾಸಿಗ, ಸುಲ್ತಾನ್ ಬತ್ತೇರಿ,
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))