ಆರೋಗ್ಯವಂತರಾಗಿ ಬಾಳುವತ್ತ ಗಮನ ಕೊಡಿ

| Published : Jan 15 2025, 12:50 AM IST

ಆರೋಗ್ಯವಂತರಾಗಿ ಬಾಳುವತ್ತ ಗಮನ ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಮನುಷ್ಯನಿಗೆ ಎಷ್ಟೋ ಕೋಟಿ ಹಣ, ಆಸ್ತಿ, ಎಲ್ಲ ಸಂಪತ್ತು ಇರಬಹುದು, ಆದರೆ ಆರೋಗ್ಯ ಸಂಪತ್ತು ಕೆಟ್ಟು ಹೋದರೆ ಎಲ್ಲ ಸಂಪತ್ತು ಇದ್ದರೂ ವ್ಯರ್ಥವಾಗುತ್ತದೆ. ಹೀಗಾಗಿ ಮೊದಲು ಆರೋಗ್ಯವಂತರಾಗಿ ಬಾಳುವ ಕಡೆಗೆ ಎಲ್ಲರೂ ಗಮನ ನೀಡಬೇಕಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮನುಷ್ಯನಿಗೆ ಎಷ್ಟೋ ಕೋಟಿ ಹಣ, ಆಸ್ತಿ, ಎಲ್ಲ ಸಂಪತ್ತು ಇರಬಹುದು, ಆದರೆ ಆರೋಗ್ಯ ಸಂಪತ್ತು ಕೆಟ್ಟು ಹೋದರೆ ಎಲ್ಲ ಸಂಪತ್ತು ಇದ್ದರೂ ವ್ಯರ್ಥವಾಗುತ್ತದೆ. ಹೀಗಾಗಿ ಮೊದಲು ಆರೋಗ್ಯವಂತರಾಗಿ ಬಾಳುವ ಕಡೆಗೆ ಎಲ್ಲರೂ ಗಮನ ನೀಡಬೇಕಯ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನೀಲಗಂಗಾಂಬಿಕಾ ದೇವಿ ಜಾತ್ರೋತ್ಸವ ಅಂಗವಾಗಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ತಾಲೂಕಾ ಘಟಕ ಆಯೋಜಿಸಿದ್ದ ಸಂಕ್ರಾಂತಿ ಜಾನಪದ ಸಂಭ್ರಮದಲ್ಲಿ ಅವರು ಮಾತನಾಡಿದರ. ಹಿಂದೆ ರೊಟ್ಟಿ ಪಲ್ಲೆ, ಮುಟಗಿ ತಿಂದು ಗಟ್ಟಿ ಮುಟ್ಟಾದ ದೇಹದ ಜೊತೆಗೆ ಆರೋಗ್ಯವಂತರಾಗಿ ನೂರಾರು ವರ್ಷ ಬದುಕುತ್ತಿದ್ದರು. ಇಂದು ಚೈನೀಸ್ ಫುಡ್ ವ್ಯಾಮೋಹಕ್ಕೆ ಬಲಿಯಾಗಿ ಸಂಜೆಯಾದರೆ ದಾಬಾ, ಬಾರು ಇನ್ನಿತರ ಕಡೆಗೆ ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ದುರಂತ. ಈ ಜಾನಪದ ಸಂಭ್ರಮದಲ್ಲಿ ಜೋಳದ ಗಿಡ, ಗೋದಿ, ಗಿಡಗಳ ಜೊತೆಗೆ ದೇಹಕ್ಕೆ ಪುಷ್ಠಿ ನೀಡುವ ಆರೋಗ್ಯಯುತ ಆಹಾರವನ್ನು ಪ್ರದರ್ಶಿಸಿ ಸಂಕ್ರಾಂತಿಯ ಸೊಬಗಿನೊಂದಿಗೆ ನಮ್ಮ ಮೂಲ ಬೇರು ಜನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತಿ ಅರವಿಂದ ಕೊಪ್ಪ ಮಾತನಾಡಿ, ಹಬ್ಬಗಳಲ್ಲಿ ಜಾನಪದ ಸಾಹಿತ್ಯ ಮೆರಗು ತರುವಲ್ಲಿ ಗ್ರಾಮಾಂತರ ಮಟ್ಟದಲ್ಲಿ ತನ್ನ ಕಾರ್ಯವನ್ನು ಮುಂದುವರೆಸಿದೆ. ಪ್ರಥಮವಾಗಿ ಮಣ್ಣನ್ನು ಪೂಜಿಸುವ ಮೂಲಕ ಜನಪದಕ್ಕೆ ಹೆಜ್ಜೆ ಹಾಕುತ್ತೇವೆ, ಕೃಷಿ ಕಾಯಕವೆಂಬುದು ಅತ್ಯಂತ ಶ್ರೇಷ್ಠವಾಗಿದ್ದು, ಅದರಿಂದ ಯಾರೂ ಹಿಂದೆ ಸರಿಯಬಾರದು. ಕೃಷಿಯಲ್ಲಿ ನಿರತರಾಗುವದರ ಜೊತೆಗೆ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಿ ಕೃಷಿಯಲ್ಲಿ ಆಸಕ್ತಿ ತುಂಬುವ ಕಾರ್ಯ ಮಾಡಿದ್ದೇವೆಂದರು.ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಸ್ವಾಮಿಗಳು ಮಾತನಾಡಿ, ಜನಪದ ಸಂಸ್ಕೃತಿ ಇಂದು ಅಗತ್ಯವಾಗಿದೆ. ಹಿಂದೆ ಕೃಷಿ ಕಾಯಕದಲ್ಲಿ ಹಂತಿ ಪದ, ಮನೆಯಲ್ಲಿ ಜೋಗುಳ ಪದ ಕೇಳುತ್ತಿದ್ದೇವು. ರೈತರು ಒಂದೇ ಬೆಳೆ ನಂಬಿಕೊಳ್ಳದೇ ಬೇರೆ ಬೇರೆ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು.ಜಾನಪದ ಸಾಹಿತಿ ಶಿವಲೀಲಾ ಮುರಾಳ, ಶಿವಶರಣೆ ಮಂಜುಳಾ ತಾಯಿ ಅಮ್ಮ, ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ತಾಲೂಕಾಧ್ಯಕ್ಷ ಸಿದ್ದನಗೌಡ ಕಾಶಿನಕುಂಟಿ ಮಾತನಾಡಿದರು. ಈ ವೇಳೆ ಜನಪದ ಗೀತೆ, ಭಜನಾ ಪದ, ಕೋಲಾಟ, ರಿವಾಯತ್ ಪದ, ಹಂತಿ ಮೇಳ, ಡೊಳ್ಳಿನ ವಾಲಗ, ಹೆಜ್ಜೆ ಮೇಳ ನಡೆದವು. ವಿವಿಧ ಸಾಧಕರಾದ ಡಾ.ಐ.ಬಿ.ತಳ್ಳೊಳ್ಳಿ, ವೀರುಪಾಕ್ಷ ಕದಲಿ, ಮುತ್ತು ಮನಹಳ್ಳಿ, ಶಿವರಾಜ ಮದರಿಮಠ ಸನ್ಮಾನಿಸಲಾಯಿತು.ಸಾಹಿತಿ ಮಲ್ಲಿಕಾರ್ಜುನ ಧರಿ, ಶಿವನಗೌಡ ಬಿರಾದಾರ, ಡಾ.ಸೋಮಶೇಖರಯ್ಯ ಹಿರೇಮಠ, ಮಲ್ಲಣ್ಣ ದೋರನಹಳ್ಳಿ, ಚನ್ನಣ್ಣ ಅಲದಿ, ಎಂ.ಬಿ.ಅಲದಿ, ಸಂಗನಗೌಡ ಬಿರಾದಾರ, ಅಮರಣ್ಣ ಬಿರಾದಾರ, ಪ್ರಭುಗೌಡ ಪಾಟೀಲ, ಮೌಲಾಸಾಹ ಜಾಹಗೀರದಾರ, ಪತ್ರಕರ್ತರಾದ ಅಂಬಾಜಿ ಘೋರ್ಪಡೆ, ಶ್ವೇತಾ ಯರಗಲ್ಲ, ಆರ್.ಎಸ್.ವಾಲಿಕಾರ, ಸಿದ್ದು ಕರಡಿ ಇದ್ದರು. ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿದರು.