ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಮತ್ತು ಕಾರ್ಮಿಕರ ಸುರಕ್ಷತೆಯತ್ತ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಹೆಚ್ಚಿನ ಚಿತ್ತ ಹರಿಸಿ, ಅವರ ಸುರಕ್ಷತೆ ಹಾಗೂ ಕೌಟುಂಬಿಕ ವಿಶ್ವಾಸ ಬೆಳೆಸುವತ್ತ ಕಾರ್ಯ ನಿರ್ವಹಿಸಬೇಕೆಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಮತ್ತು ಕಾರ್ಮಿಕರ ಸುರಕ್ಷತೆಯತ್ತ ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಹೆಚ್ಚಿನ ಚಿತ್ತ ಹರಿಸಿ, ಅವರ ಸುರಕ್ಷತೆ ಹಾಗೂ ಕೌಟುಂಬಿಕ ವಿಶ್ವಾಸ ಬೆಳೆಸುವತ್ತ ಕಾರ್ಯ ನಿರ್ವಹಿಸಬೇಕೆಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿಯ ಶಾಸಕರ ಕಾರ್ಯಾಲಯದಲ್ಲಿ ಮಂಗಳವಾರ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ರಬಕವಿ-ಬನಹಟ್ಟಿ ತಾಲೂಕಿನ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಒಟ್ಟು ೨೭೨ ಸುರಕ್ಷತಾ ಕಿಟ್ ವಿತರಿಸಲಾಗುತ್ತಿದೆ. ಸರಕಾರಗಳು ಕಟ್ಟಡ ಕಾರ್ಮಿಕರಿಗೆ ವಿಶೇಷ ಯೋಜನೆ ನೀಡುತ್ತಿದೆ. ಪ್ರತಿಯೊಬ್ಬರು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಸುರಕ್ಷತೆಯ ದೃಷ್ಟಿಯಿಂದ ತಮಗೆ ನೀಡಿರುವ ಕಿಟ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸವದಿ ತಿಳಿಸಿದರು.

ಈರಣ್ಣ ಚಿಂಚಖಂಡಿ, ಆನಂದ ಕಂಪು, ಸಚಿನ ಕೊಡತೆ, ರಬಕವಿ-ಬನಹಟ್ಟಿ ತಾಲೂಕು ಕಾರ್ಮಿಕ ನಿರೀಕ್ಷಕ ರಮೇಶ ವಂಗಿ, ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಪ್ರಕಾಶ ಚನ್ನಾಳ, ಮಹಾಲಿಂಗೇಶ ಕರೆನ್ನವರ ಸೇರಿದಂತೆ ಅನೇಕರು ಇದ್ದರು.