ಶಂಭುನಾಥ ಶ್ರೀ ಹುಟ್ಟುಹಬ್ಬ ಹಿನ್ನೆಲೆ ಗೋಶಾಲೆಗೆ ಮೇವು

| Published : Mar 12 2025, 12:50 AM IST

ಶಂಭುನಾಥ ಶ್ರೀ ಹುಟ್ಟುಹಬ್ಬ ಹಿನ್ನೆಲೆ ಗೋಶಾಲೆಗೆ ಮೇವು
Share this Article
  • FB
  • TW
  • Linkdin
  • Email

ಸಾರಾಂಶ

ಶಂಭುನಾಥ ಸ್ವಾಮೀಜಿಯವರ 46ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆ ವತಿಯಿಂದ ಜಾಜೂರು ಸಮೀಪ ಇರುವ ಶ್ರೀ ಸಂಕಟ ಮೋಚನ ಪಾಶ್ವಭೈರವ ಗೋ ಶಾಲೆಗೆ ಒಂದು ವಾಹನ ಹಸಿ ಮೇವನ್ನು ಕಾಲೇಜಿನ ಪ್ರಾಂಶುಪಾಲ ಲಿಂಗರಾಜು ಮತ್ತು ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ನೀಡಿದರು. ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಗೋ ಸೇವೆ ಬಹಳ ಮಹತ್ತರವಾದಂತಹ ಒಂದು ಸೇವೆ, ಇದರಲ್ಲಿ ನಾವು ಸಹ ಇಂದು ಪಾಲ್ಗೊಳ್ಳುವ ಅವಕಾಶವನ್ನ ಕಲ್ಪಿಸಿಕೊಂಡೆವು ಗೋಶಾಲೆ ಆಡಳಿತಾಧಿಕಾರಿ ಮೋಹನ್ ಕುಮಾರ್ ಸಹಕರಿಸಿದ್ದಾರೆ, ಧನ್ಯವಾದಗಳು ಎಂದರು.

ಅರಸೀಕೆರೆ: ಶಂಭುನಾಥ ಸ್ವಾಮೀಜಿಯವರ 46ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆ ವತಿಯಿಂದ ಜಾಜೂರು ಸಮೀಪ ಇರುವ ಶ್ರೀ ಸಂಕಟ ಮೋಚನ ಪಾಶ್ವಭೈರವ ಗೋ ಶಾಲೆಗೆ ಒಂದು ವಾಹನ ಹಸಿ ಮೇವನ್ನು ಕಾಲೇಜಿನ ಪ್ರಾಂಶುಪಾಲ ಲಿಂಗರಾಜು ಮತ್ತು ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ನೀಡಿದರು.

ನಂತರ ಮಾತನಾಡಿದ ಪ್ರಾಂಶುಪಾಲರು ನಮ್ಮ ಗುರುಗಳು ಸಮಾಜಮುಖಿಯಾಗಿ ಅನೇಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ನಾವು ಈ ಗೋಶಾಲೆಯ ಗೋವುಗಳಿಗೆ ಮೇವನ್ನ ನೀಡಲು ಬಂದಿದ್ದೇವೆ, ಸಮಾಜ ಸೇವೆಗೆ ಶ್ರೀಗಳಿಗೆ ಭಗವಂತನು ಇನ್ನೂ ಹೆಚ್ಚಿನ ಚೈತನ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಗೋ ಸೇವೆ ಬಹಳ ಮಹತ್ತರವಾದಂತಹ ಒಂದು ಸೇವೆ, ಇದರಲ್ಲಿ ನಾವು ಸಹ ಇಂದು ಪಾಲ್ಗೊಳ್ಳುವ ಅವಕಾಶವನ್ನ ಕಲ್ಪಿಸಿಕೊಂಡೆವು ಗೋಶಾಲೆ ಆಡಳಿತಾಧಿಕಾರಿ ಮೋಹನ್ ಕುಮಾರ್ ಸಹಕರಿಸಿದ್ದಾರೆ, ಧನ್ಯವಾದಗಳು ಎಂದರು.

ಮೋಹನ್ ಕುಮಾರ್ ಮಾತಾಡಿ, ರೈತರು ತಮಗೆ ಸಾಕಲು ಆಗದಂತಹ ಗೋವುಗಳನ್ನು ಇಲ್ಲಿಗೆ ತಂದುಬಿಡುತ್ತಾರೆ. ಅವುಗಳ ಪೋಷಣೆಯಲ್ಲಿ ನಾವು ನಿರತರಾಗಿದ್ದೇವೆ ಈ ನಮ್ಮ ಕಾರ್ಯದಲ್ಲಿ ಇಂದು ಆದಿಚುಂಚನಗಿರಿ ವಿದ್ಯಾಸಂಸ್ಥೆ ಸಮೂಹ ಕೈಜೋಡಿಸಿರುವುದು ನಮಗೂ ಸಂತೋಷವನ್ನು ನೀಡಿದೆ. ಭಗವಂತನು ಶ್ರೀಗಳಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಲು ಉತ್ಸಾಹವನ್ನು ಕರುಣಿಸಲಿ ಎಂದು ಶುಭಾಶಯಗಳೊಂದಿಗೆ ನಾವು ಪ್ರಾರ್ಥಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಲಾ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.