ಸಾರಾಂಶ
ಜಿಲ್ಲೆಯಲ್ಲಿ ಮಾನವೀಯ ಸಂಬಂಧ ಗಟ್ಟಿಗೊಳಿಸುವ ಶಕ್ತಿ ಜಾನಪದ ಕಲೆಗೆ ಇದೆ. ಜಾನಪದ ಕಲೆ ತನ್ನದೇ ಆದ ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು ಎಂದು ಪ್ರಾ. ಎಂ.ಯು. ಹಿರೇಮಠ ಹೇಳಿದರು.
ಗದಗ: ಜಿಲ್ಲೆಯಲ್ಲಿ ಮಾನವೀಯ ಸಂಬಂಧ ಗಟ್ಟಿಗೊಳಿಸುವ ಶಕ್ತಿ ಜಾನಪದ ಕಲೆಗೆ ಇದೆ. ಜಾನಪದ ಕಲೆ ತನ್ನದೇ ಆದ ಇತಿಹಾಸವಿದ್ದು ಅದನ್ನು ಉಳಿಸಿ ಬೆಳೆಸುವುದು ಮುಖ್ಯವಾಗಬೇಕು ಎಂದು ಪ್ರಾ. ಎಂ.ಯು. ಹಿರೇಮಠ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾ ಭವನದಲ್ಲಿ ಜಾನಪದ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಎಂದರೆ ಬದುಕನ್ನು ಬಿಂಬಿಸುವುದು ಆಗಿದೆ ಎಂದರು.ಖ್ಯಾತ ಜಾನಪದ ಕಲಾವಿದ ನಿಂಗಪ್ಪ ಗುಡ್ಡದ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಜಾನಪದ ಕಲೆಗಳು ಹಳ್ಳಿಯಲ್ಲಿ ಜೀವಂತವಾಗಿವೆ. ಅದಕ್ಕೆ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದರು.
ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ಮಾತನಾಡಿ, ನಿರಂತರವಾಗಿ ಬಾಯಿಂದ ಬಾಯಿಗೆ ಹರಿದಾಡುವ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳಿಸುವ ದೊಡ್ಡಶಕ್ತಿ ಎಂದರೆ ಜಾನಪದ ಸಾಹಿತ್ಯವಾಗಿದೆ ಎಂದರು.ಈ ವೇಳೆ ವಿದ್ಯಾರ್ಥಿನಿಯರು ವಿವಿಧ ಜಾನಪದ ಹಾಡುಗಳನ್ನು ಹಾಡಿ, ಜಾನಪದ ಉತ್ಸವಕ್ಕೆ ಮೆರಗು ತಂದರು.ಈ ವೇಳೆ ಪ್ರೊ.ಪ್ರಕಾಶ ಕರಿಗಾರ, ಡಾ. ಎಸ್.ಕೆ. ಪೂಜಾರ, ಐಕ್ಯೂಎಸಿ ಪ್ರೊ.ಮಹಬೂಬಆರೀಫ ಸದರಸೋಪವಾಲೆ, ಪ್ರೊ.ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ.ರಿಯಾಜಅಹ್ಮದ ದೊಡ್ಡಮನಿ. ಪ್ರೊ.ಪ್ರತಿಭಾ ಚವಾಣ, ಪ್ರೊ.ಸುಮಿತ್ರಾ ಮೇದಾರ, ಪ್ರೊ.ವಹಿದಾ ಕಿಲ್ಲೇದಾರ, ಲಕ್ಷ್ಮೀ ನಾಗರಾಳ, ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.