ಸಾರಾಂಶ
ಇಂದಿನ ಆಧುನಿಕತೆಯ ದಿನಗಳಲ್ಲಿ ಜಾನಪದ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ. ಆದ್ದರಿಂದ ಜಾನಪದ ಕಲೆ ಉಳಿಸಿ ಬೆಳೆಸಬೇಕಾದರೆ ಯುವಕರಿಗೆ ಜಾನಪದ ಕಲೆಗಳ ಮಹತ್ವ ತಿಳಿ ಹೇಳಬೇಕು. ಜಾನಪದ ಕಲೆಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಎಸ್‌ಟಿಸಿ ಕಲಾ, ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇಂದಿನ ಆಧುನಿಕತೆಯ ದಿನಗಳಲ್ಲಿ ಜಾನಪದ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ. ಆದ್ದರಿಂದ ಜಾನಪದ ಕಲೆ ಉಳಿಸಿ ಬೆಳೆಸಬೇಕಾದರೆ ಯುವಕರಿಗೆ ಜಾನಪದ ಕಲೆಗಳ ಮಹತ್ವ ತಿಳಿ ಹೇಳಬೇಕು. ಜಾನಪದ ಕಲೆಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಎಸ್‌ಟಿಸಿ ಕಲಾ, ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್ ಹೇಳಿದರು.ಶನಿವಾರ ಇಲ್ಲಿನ ಗೆಳೆಯರ ಬಳಗ ಮತ್ತು ಎಸ್ ಟಿಸಿ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡ ಜಾನಪದ ಕಲಾ ಮಹೋತ್ಸವದ ಕಾರ್ಯಕ್ರಮದಲ್ಲಿ ನಾವಲಗಿಯ ಹೆಸರಾಂತ ಯುವ ಕಲಾವಿದ ವಿಶ್ವನಾಥ ದೇವದಾಸರಿಗೆ ಸಂಬಾಳ ವಾದಕ ದಿ. ಸದಾಶಿವ ಹೂಗಾರ ಸ್ಮರಣಾರ್ಥ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಕೀಲ, ಉದ್ಯಮಿ ವೆಂಕಟೇಶ ನಿಂಗಸಾಣಿ ಮಾತನಾಡಿ, ಭಾರತದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾದುದು. ಜಾನಪದ ಕಲೆಗಳನ್ನು ನಮ್ಮ ಯುವಕರಿಗೆ ಪಾತ್ಯಕ್ಷಿಕೆ ನೀಡುವ ಮೂಲಕ ಅವರಿಗೆ ತಿಳಿಸಬೇಕು. ಆಧುನಿಕತೆಯ ಜೊತೆಗೆ ನಾವು ನಮ್ಮತನ ಉಳಿಸಿ ಬೆಳೆಸಬೇಕು ಎಂದು ಹೇಳಿದರು.ಉಪನ್ಯಾಸಕರಾದ ಡಾ.ಮಂಜುನಾಥ ಬೆನ್ನೂರ, ಮನೋಹರ ಶಿರಹಟ್ಟಿ, ವಿ.ವೈ. ಪಾಟೀಲ ಮಾತನಾಡಿದರು. ಸಂಬಾಳ ವಾದಕ ದಿ.ಸದಾಶಿವ ಹೂಗಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನಾವಲಗಿ ಗ್ರಾಮದ ಜೈ ಹನುಮಾನ ಸಂಬಾಳ, ಕರಡಿ ಹಾಗೂ ಶಹನಾಯಿ ವಾದನದ ಕಲಾವಿದರು ಸಂಬಾಳ ಕಲೆಯನ್ನು ಪ್ರದರ್ಶನ ಮಾಡಿದರು. ಪ್ರಕಾಶ ಕೆಂಗನಾಳ, ಗೆಳೆಯರ ಬಳಗದ ಸಂಚಾಲಕ ಕಿರಣ ಆಳಗಿ, ಗೀತಾ ಸಜ್ಜನ, ರೇಶ್ಮಾ ಗಜಾಕೋಶ, ರಮೇಶ ಮಾಗುರಿ, ಎಸ್.ಬಿ.ಉಕ್ಕಲಿ, ಗೀತಾ ಗೊಂದಕರ್, ಬಸವರಾಜ ಹೂಗಾರ, ಅವಿನಾಶ ಹಟ್ಟಿ, ಮಹಾವೀರ ಸಂಕಾರ, ಎನ್.ಎಚ್. ಭಜಂತ್ರಿ ಸೇರಿದಂತೆ ಅನೇಕರು ಇದ್ದರು.