ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರು

| Published : Dec 10 2024, 12:31 AM IST

ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಸಂಸ್ಕೃತಿಯ ಮೂಲ ಬೇರಾಗಿದ್ದು, ಅವುಗಳನ್ನು ಕಲಿಯುವುದು ಜ್ಞಾನ, ಗೌರವ, ಹಣಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

ಶಿವಮೊಗ್ಗ: ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಸಂಸ್ಕೃತಿಯ ಮೂಲ ಬೇರಾಗಿದ್ದು, ಅವುಗಳನ್ನು ಕಲಿಯುವುದು ಜ್ಞಾನ, ಗೌರವ, ಹಣಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.ಇಲ್ಲಿನ ಕುವೆಂಪು ವಿಶ್ವವಿದ್ಯಾಲಯ ಪಠ್ಯೇತರ ಚಟುವಟಿಕೆ ವಿಭಾಗದಿಂದ ಆಯೋಜಿಸಿರುವ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ''''''''ಸಹ್ಯಾದ್ರಿ ಉತ್ಸವ- 2024'''''''' ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪದ ಸಾಹಿತ್ಯ, ಹಾಡನ್ನು ಸಿನಿಮಾದವರು ಬಳಸಿದ್ದಾರೆ, ಆದರೆ ಸಿನಿಮಾದಿಂದ ಜನಪದ ಏನನ್ನೂ ಪಡೆದಿಲ್ಲ. ಜನಪದ ಸಶಕ್ತ ಮಾಧ್ಯಮ ಅದನ್ನು ಕಲಿಯಿರಿ ಎಂದರು.

ನಟಿ ಅದಿತಿ ಶೆಟ್ಟಿ ಮಾತನಾಡಿ, ಕಾಲೇಜು ದಿನಗಳಲ್ಲಿ ಕಲಿಯುವ ಕಲೆ, ಗಳಿಸಿದ ಜ್ಞಾನ, ರೂಪಿಸಿಕೊಂಡ ಮೌಲ್ಯಗಳು ಇಂದಿಗೂ ಸಿನಿಮಾರಂಗದಲ್ಲಿ ನಮಗೆ ಸಹಾಯಕವಾಗಿವೆ. ಹೀಗಾಗಿ ಶಿಕ್ಷಣ ಮತ್ತು ಶಿಕ್ಷಣದ ಸಂದರ್ಭದ ಹಲವು ಬಗೆಯ ಕಲಿಕೆ ಮುಖ್ಯ ಎಂದು ಹೇಳಿದರು.

ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ಕುವೆಂಪು ವಿವಿಯೊಂದು ಹೆಸರು ಮಾತ್ರವಲ್ಲ, ಕುವೆಂಪು ಪ್ರಜ್ಞೆ ನಮ್ಮೊಂದಿಗೆ ಇದೆ. ಅದು ಜ್ಞಾನ, ವೈಚಾರಿಕತೆ, ಕಲೆಯನ್ನು ಮೈಗೂಡಿಸಿಕೊಳ್ಳಲು ಸದಾ ಪ್ರೇರೇಪಿಸುತ್ತದೆ ಎಂದರು.

ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್.ಗೋಪಿನಾಥ್, ಸಂಚಾಲಕ ಡಾ.ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು, ವಿವಿ ವ್ಯಾಪ್ತಿಯ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸ್ಪರ್ಧಾಳುಗಳು ಹಾಜರಿದ್ದರು.ಸಹ್ಯಾದ್ರಿ ಉತ್ಸವ ಹಬ್ಬದ ವಾತಾವರಣ ನಿರ್ಮಾಣವಾಗಿದೆ: ಪ್ರೊ.ಶರತ್ ಅನಂತಮೂರ್ತಿಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹ್ಯಾದ್ರಿ ಉತ್ಸವ ರಾಜ್ಯದ ವಿವಿಧ ಬಗೆಯ ಸಾಂಸ್ಕೃತಿಕ ವೈವಿದ್ಯತೆಯನ್ನು ಪ್ರತಿನಿಧಿಸುವ ಉತ್ಸವವಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಸೊಬಗನ್ನು ಪರಿಚಯಿಸಲು ಇದು ಸಹಕಾರಿಯಾಗಿದೆ ಎಂದರು.ಅಂತರ್ ಕಾಲೇಜು ವಿದ್ಯಾರ್ಥಿಗಳಲ್ಲಿ ಭಾಂದವ್ಯವನ್ನು ಮೂಡಿಸುವ ವೇದಿಕೆಯಾಗಿದ್ದು, ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಈ ಉತ್ಸವದಿಂದ ವಿವಿಯ ಹೆಸರು ಇನ್ನೂ ಹೆಚ್ಚು ಪ್ರಜ್ವಲಿಸಲಿದ್ದು, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳು ಮಾತ್ರವಲ್ಲದೇ ಜಿಲ್ಲೆಯ 80ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಮೆರಗು ನೀಡಿದ ಸಂಭ್ರಮದ ಜಾಥಾ

ಶಿವಮೊಗ್ಗ: ಸಹ್ಯಾದ್ರಿ ಉತ್ಸವ 2024ರ ಆರಂಭಕ್ಕೂ ಮೊದಲು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾಂಸ್ಕೃತಿಕ ಜಾಥಾ ನಡೆಸಲಾಯಿತು.

ಜಾಥಾದಲ್ಲಿ 25ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳ ತಂಡ ವಿವಿಧ ವಿಷಯವಸ್ತುವಿನ ಪ್ರಸ್ತುತಿಯೊಂದಿಗೆ ಪಾಲ್ಗೊಂಡಿತ್ತು. ಕಮಲಾ ನೆಹರೂ ಕಾಲೇಜಿನ ವಿದ್ಯಾರ್ಥಿಗಳ ತಂಡವು ಹುಲಿಕುಣತ, ಮೈಸೂರು ದಸರಾದ ವೈವಿಧ್ಯ ವಿಷಯ ಒಳಗೊಂಡ ಮೆರವಣಗೆ ಕುರಿತ ವಿಷಯೊಂದಿಗೆ ಗಮನಸೆಳೆದರೆ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಡೊಳ್ಳು ಪ್ರದರ್ಶನ ನೀಡಿದರು. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯ ಹಾಗೂ ತೀರ್ಥಹಳ್ಳಿಯ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಪೂಜಾ ಕುಣಿತ, ಶಿಕಾರಿಪುರ ಪದವಿ ವಿದ್ಯಾರ್ಥಿಗಳು ಲಂಬಾಣ ನೃತ್ಯದ ವೇಷಭೂಷಣದೊಂದಿಗೆ ಗಮನ ಸೆಳೆದರು.