ಅಕ್ಷರ ವಂಚಿತರಿಂದ ಬಂದ ಜನಪದ ಮರೆ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌

| Published : Sep 30 2024, 01:27 AM IST

ಅಕ್ಷರ ವಂಚಿತರಿಂದ ಬಂದ ಜನಪದ ಮರೆ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ವಂಚಿತರಿಂದ ಬಂದ ವಿವೇಕವನ್ನು ನಾವು ಕಳೆದುಕೊಂಡಿದ್ದೇವೆ. ಜನಪದವನ್ನೂ ಮರೆಯುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಸಂಪೂರ್ಣವಾಗಿ ಮರೆಯಾಗುತ್ತಿವೆ. ಇದನ್ನು ನೆನೆದುಕೊಳ್ಳುವುದಕ್ಕೂ ಸಾಧ್ಯವಾಗದ ಸಂದರ್ಭದಲ್ಲಿ ಬದುಕುತ್ತಿದ್ದೇವೆ, ಜನಪದ ಹಾಡುಗಳೇ ಸೊಗಸಾಗಿದ್ದವು, ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದ ಜನಪದ ಹಾಡುಗಳು ಮರೆಯಗಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಕ್ಷರ ವಂಚಿತರಿಂದ ಬಂದಂತಹ ವಿವೇಕ ಇರುವ ಜನಪದವನ್ನು ಮರೆಯುತ್ತಿರುವುದು ಬೇಸರ ತರಿಸಿದೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮಹಿಳಾ ಘಟಕದ ಸಹಯೋಘದಲ್ಲಿ ನಡೆದ ಕಾವ್ಯಾನು ಸಂಧಾನ ಕವಿತೆಯ ಓದು-ವ್ಯಾಖ್ಯಾನ- ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಕ್ಷರ ವಂಚಿತರಿಂದ ಬಂದ ವಿವೇಕವನ್ನು ನಾವು ಕಳೆದುಕೊಂಡಿದ್ದೇವೆ. ಜನಪದವನ್ನೂ ಮರೆಯುತ್ತಿದ್ದೇವೆ. ಪ್ರಸ್ತುತ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಸಂಪೂರ್ಣವಾಗಿ ಮರೆಯಾಗುತ್ತಿವೆ. ಇದನ್ನು ನೆನೆದುಕೊಳ್ಳುವುದಕ್ಕೂ ಸಾಧ್ಯವಾಗದ ಸಂದರ್ಭದಲ್ಲಿ ಬದುಕುತ್ತಿದ್ದೇವೆ, ಜನಪದ ಹಾಡುಗಳೇ ಸೊಗಸಾಗಿದ್ದವು, ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದ ಜನಪದ ಹಾಡುಗಳು ಮರೆಯಗಾಗಿವೆ ಎಂದರು.

ಮನುಷ್ಯನ ಮನಸ್ಸನ್ನು ಸಾಹಿತ್ಯದಿಂದ ತನ್ನೆಡೆಗೆ ಸೆಳೆಯುವ ಶಕ್ತಿ ಇರುವುದು ಭಾರತೀಯ ಸಂಗೀತಕ್ಕೆ ಮಾತ್ರ. ಬೇರೆ ದೇಶಗಳಲ್ಲಿ ಹಾಡು ಹೇಳುತ್ತಲೇ ಹುಚ್ಚರಾಗಿದ್ದಾರೆ, ಆದರೆ, ಭಾರತ ದೇಶದ ಸಂಗೀತ, ಕಲೆ ಹಾಗೂ ಸಾಹಿತ್ಯ ಎಲ್ಲರನ್ನೂ ಆಕರ್ಷಿಸುವಂತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯ, ಅನ್ನ, ಅಕ್ಷರ ಇವೆಲ್ಲವನ್ನೂ ಕೊಟ್ಟಂತಹ ಭೂಪ, ಇವರು ಭಾರತ ದೇಶದ ಯಾವ ರಾಜರು ಮಾಡದ ಕೆಲಸ ಮಾಡಿ ಹೋಗಿದ್ದಾರೆ, ಇವರ ಋಣ ನಮ್ಮ ಮೇಲಿದೆ ಎಂದು ನೆನಪಿಸಿದರು.

ಜನಪದ ಕಾವ್ಯದಲ್ಲಿ ‘ಜನಪದ ತ್ರಿಪದಿಗಳು’ ಎಂಬ ವಿಷಯ ವ್ಯಾಖ್ಯಾನಿಸಿ ಮಾತನಾಡಿದ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಸವೆದು ಹೋಗುವ ಜೀವನವನ್ನ ಸರಳವಾಗಿ ತೆಗೆದುಕೊಂಡು ಸವಿಯುವ ಮಹತ್ವ ಹಾಳು ಮಾಡಿಕೊಂಡಿದ್ದೇವೆ ಎಂದು ವಿಷಾದಿಸಿದರು.

ನಮ್ಮ ಜೀವನದ ಬೇರುಗಳನ್ನು ಹುಡುಕಬೇಕಿದೆ, ಅದು ಯಾವ ಬೇರೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಜ್ಞಾನವನ್ನು ಅರಿತು ಬಾಳುವುದು ಒಂದು ಘಟ್ಟವಾಗಿದೆ. ಮಹಿಳಾ ವೇದಿಕೆಯಿಂದ ಕಾವ್ಯಾನುಸಂಧಾನ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.

ನಮ್ಮೊಳಗಿರುವ ಅನುಭಾವಿ ರಾಜಕಾರಣಿಗಳು, ತತ್ವ ಪದಗಾರರನ್ನು ಅನುಭವಿ ರಾಜಕಾರಣಿಗಳು ಎನ್ನುತ್ತೇವೆ. ಈ ಪದವನ್ನು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರಿಗೆ ಹೇಳುತ್ತೇನೆ. ಅವರಿಗೆ ನೈತಿಕತೆ ಹೆಚ್ಚಿದೆ. ಅದು ಅವರ ಮಾತುಗಳಲ್ಲಿಯೇ ಕಾಣುತ್ತದೆ. ಅವರು ಸೌಮ್ಯವಾಗಿ ಮಾತನಾಡುತ್ತಾರೆ. ರಾಜಕಾರಣದಲ್ಲಿ ವಿಸ್ತರಿಸುವ ಮೂಲಕ ಅದರಲ್ಲಿನ ಒಳ ಸಂಚುಗಳನ್ನು ಎಳೆಎಳೆಯಾಗಿ ಹೇಳುತ್ತಾ ಹೋಗುತ್ತಾರೆ ಎಂದು ಸ್ಮರಿಸಿದರು.

ಸಾಹಿತಿ ಮಂಜುಳಾ ಜಯಪ್ರಕಾಶಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಗುರು ದೀಕ್ಷ ಗೀತೆಗಳನ್ನು ಸುಸ್ವರ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ಕಾರ್ಯದರ್ಶಿ ಅನಿತಾ ಮಂಗಲ ಭಾಗವಹಿಸಿದ್ದರು.