ಜನಸಾಮಾನ್ಯರ ಜೀವನಾನುಭವ ಹೆಪ್ಪುಗಟ್ಟಿ ಜನಪದ ಸಾಹಿತ್ಯ ನಿರ್ಮಾಣಗೊಂಡಿದೆ. ನಂಬಿಕೆ, ಆಚರಣೆ, ಭಾವನೆ ಮತ್ತು ಸಂಸ್ಕೃತಿ ಹರಡಿಕೊಂಡು ಮೌಖಿಕವಾಗಿ ತಲೆತಲಾಂತರದಿಂದ ಹರಿದು ಬಂದಿದೆ.
ಕು.ಶಿ. ಹರಿದಾಸಭಟ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿಕೆ
ಕನ್ನಡಪ್ರಭ ವಾರ್ತೆ ಗದಗಜನಸಾಮಾನ್ಯರ ಜೀವನಾನುಭವ ಹೆಪ್ಪುಗಟ್ಟಿ ಜನಪದ ಸಾಹಿತ್ಯ ನಿರ್ಮಾಣಗೊಂಡಿದೆ. ನಂಬಿಕೆ, ಆಚರಣೆ, ಭಾವನೆ ಮತ್ತು ಸಂಸ್ಕೃತಿ ಹರಡಿಕೊಂಡು ಮೌಖಿಕವಾಗಿ ತಲೆತಲಾಂತರದಿಂದ ಹರಿದು ಬಂದಿದೆ. ಸರಳ, ಸಹಜ ಮತ್ತು ಪ್ರಾದೇಶಿಕ ಭಾಷಾ ಸೊಗಡಿನ ಮೂಲಕ ಗಮನ ಸೆಳೆಯುತ್ತದೆ ಜನಪದ ಸಾಹಿತ್ಯವು ಎಲ್ಲಾ ಸಾಹಿತ್ಯದ ಮೂಲಬೇರಾಗಿದೆ ಎಂದು ಸಾಹಿತಿ ಎನ್.ಎಂ. ಅಂಬಲಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಪ್ರೊ. ಕು.ಶಿ. ಹರಿದಾಸಭಟ್ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಡು, ಕಥೆ, ಒಗಟು, ಒಡಪು ಮುಂತಾದ ಪ್ರಕಾರಗಳಲ್ಲಿ ಸಂಸ್ಕೃತಿ ವಿಸ್ತಾರಗೊಂಡು ಮೌಲ್ಯಯುತ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.ಕು.ಶಿ. ಹರಿದಾಸಭಟ್‌ರ ಕುರಿತು ಮಾತನಾಡಿದ ಡಾ. ದತ್ತಪ್ರಸನ್ನ ಪಾಟೀಲರು, ಉಡುಪಿಯ ಸಾಂಸ್ಕೃತಿಕ ಬೆಳವಣಿಗೆಗೆ ಇವರ ಕೊಡುಗೆ ಅಪಾರವಾದುದು. ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಸಂಶೋಧನೆ ಕೈಗೊಳ್ಳಲು ಪ್ರೇರಣೆಯನ್ನು ಒದಗಿಸಿದರು. ಸುಮಾರು 35 ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಜನಪದ ಸಾಹಿತ್ಯ ಇಂದಿನ ಎಲ್ಲ ಪ್ರಕಾರದ ಸಾಹಿತ್ಯಕ್ಕೆ ಮೂಲ ಕಾರಣವಾಗಿದೆ ಎಂದರು. ದತ್ತಿದಾನಿಗಳಾದ ಅನಂತ ಮೋಹನ ಭಟ್ ಹಾಗೂ ಜಯದೇವಭಟ್ ಉಪಸ್ಥಿತರಿದ್ದರು. ರಾಹುಲ್ ಗಿಡನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಭಾರತಿ ಕೋಟಿ, ಮೋಹನ ಕೋಟಿ, ಜಯಶ್ರೀ ಅಂಗಡಿ, ಮಂಜುಳಾ ವೆಂಕಟೇಶಯ್ಯ, ಶಕುಂತಲಾ ಗಿಡನಂದಿ, ಶಾರದಾ ಬಾಣದ, ಸಿ.ಎಂ. ಮಾರನಬಸರಿ, ವಿ.ಎಸ್. ದಲಾಲೀ, ಸತೀಶಕುಮಾರ ಚನ್ನಪ್ಪಗೌಡರ, ಅಮರೇಶ ರಾಂಪೂರ, ಬಿ.ಎಲ್. ಚವ್ಹಾಣ, ಸುರೇಶ ಕುಂಬಾರ, ರಾಜೇಶ್ವರಿ ಬಡ್ನಿ, ಪ್ರ.ತೋ. ನಾರಾಯಣಪೂರ, ಸಂಜಯ ಬಾಗಮಾರ, ಎಸ್.ಯು. ಸಜ್ಜನಶೆಟ್ಟರ, ಉಮಾದೇವಿ ಕಣವಿ, ಶಶಿಕಾಂತ ಕೊರ್ಲಹಳ್ಳಿ, ರಾಜಶೇಖರ ಕರಡಿ, ಸೈಯದ್‌ಉಸ್ಮಾನ ಕೊಪ್ಪಳ, ಅಕ್ಕಮ್ಮ ಪಾರ್ವತಿಮಠ, ಜ್ಯೋತಿ ಪಾಟೀಲ, ನಿರ್ಮಲಾ ಪಾಟೀಲ, ಐ.ಎಚ್. ಹಲ್ಯಾಳ, ಸುಧಾ ಬಳ್ಳಿ, ಶಿವಯೋಗಿ ಪಾಟೀಲ, ರತ್ನಾ ಪುರಂತರ, ಪ್ರಸನ್ನಕುಮಾರ ಇನಾಮದಾರ, ಬಸನಗೌಡ ಪಾಟೀಲ, ದಿಲೀಪಕುಮಾರ ಮುಗಳಿ, ರಾಜೇಂದ್ರ ಗಡಾದ, ಎಂ.ಡಿ. ಸಂಗಸಿ, ಪಾರ್ವತಿ ಮುಗಳಿ, ಮಲ್ಲಿಕಾರ್ಜುನ ನಿಂಗೋಜಿ, ಶಂಕರಪ್ಪ ಗಾಂಜಿ, ಕಿರಣ ಗುಗ್ಗರಿ, ಸತೀಶ ಕುಲಕರ್ಣಿ, ಟಿ.ಎಂ. ದಂಡಗಿ, ಅಶೋಕ ಕಡಗಲಿ, ಎಂ.ಸಿ. ವಗ್ಗಿ, ಎಂ.ಎನ್. ಕಾಮನಹಳ್ಳಿ, ಎಂ.ಬಿ. ಚನ್ನಪ್ಪಗೌಡರ ಮೊದಲಾದವರು ಉಪಸ್ಥಿತರಿದ್ದರು.