ಇಂದು ಜಾನಪದ ನಶಿಸಿ ಹೋಗುತ್ತಿವೆ. ಈ ನೆಲದ ಸಾಹಿತ್ಯ, ಕಲೆಗಳು ಕಳೆದು ಹೋಗುತ್ತಿದ್ದು ಮಕ್ಕಳು ನಮ್ಮ ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳುಬೇಕು. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಎಂದ ಮಾತ್ರಕ್ಕೆ ಅಶ್ಲೀಲ ಹಾಡುಗಳು ಎನ್ನುವ ಮಟ್ಟಕ್ಕೆ ಅವುಗಳನ್ನು ಹಾಳು ಮಾಡುತ್ತಿದ್ದಾರೆ.
ಅಳ್ನಾವರ:
ಮನುಷ್ಯನ ದೈನಂದಿನ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಜಾನಪದ ಹಾಸುಹೊಕ್ಕಾಗಿದೆ ಎಂದು ಕವಿವ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಹುಲಿಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಜಾನಪದ ನಶಿಸಿ ಹೋಗುತ್ತಿವೆ. ಈ ನೆಲದ ಸಾಹಿತ್ಯ, ಕಲೆಗಳು ಕಳೆದು ಹೋಗುತ್ತಿದ್ದು ಮಕ್ಕಳು ನಮ್ಮ ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳುಬೇಕು. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಎಂದ ಮಾತ್ರಕ್ಕೆ ಅಶ್ಲೀಲ ಹಾಡುಗಳು ಎನ್ನುವ ಮಟ್ಟಕ್ಕೆ ಅವುಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಉಪನ್ಯಾಸಕ ಪ್ರೊ. ಪಿ.ಕೆ. ನಾಗರಾಳ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕೆ ಸಿಲುಕಿ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಗಾಳಿಯನ್ನು ಖರೀದಿಸಿ ಸೇವಿಸುವ ಕಾಲ ಬರುತ್ತದೆ. ಈಗಲೇ ಎಚ್ಚೆತ್ತುಕೊಂಡು ಅರಣ್ಯ ಬೆಳೆಸುವ ಪ್ರವೃತ್ತಿ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.ಕವಿವ ಸಂಘದ ಸಹ ಕಾರ್ಯದರ್ಶಿ, ಪರಿಸರ ಶಂಕರ ಕುಂಬಿ ಮಾತನಾಡಿ, ಮನುಷ್ಯ ಪ್ಲಾಸ್ಟಿಕ್‌ನ್ನು ಬದುಕಿನ ಭಾಗವಾಗಿ ಬಳಸುತ್ತಿದ್ದಾನೆ. ಗಿಡಗಳನ್ನು ನೆಡುವ ನೆಪದಲ್ಲಿ ನಿರುಪಯುಕ್ತವಾದ, ಆಕರ್ಷಣಿಯ ಗಿಡಗಳನ್ನು ಬೆಳೆಸುತ್ತಿದ್ದು ಅವುಗಳ ಬದಲಿಗೆ ಪ್ರಾಣ-ಪಕ್ಷಿಗಳಿಗೆ ಅನುಕೂಲವಾಗುವ ಹಣ್ಣಿನ ಗಿಡಗಳನ್ನು ನೆಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಈರಪ್ಪ ಪತ್ತಾರ, ಆನಂದ ಸಬನೀಸ, ಡಾ. ಬಸವರಾಜ ಕುಬಸದ, ಶಿವನಪ್ಪ ಅಗಸರ, ಬಸವರಾಜ ಕಿತ್ತೂರ, ನಾಗಪ್ಪ ರಾಧಣ್ಣವರ, ಈರಪ್ಪ ತಾರೋಳ್ಳಿ, ಸಂತೋಷ ಕಂಬಾರ, ಶಂಕರ ಕೋಮಾರ, ನಿಂಗಪ್ಪ ಹೂಗಾರ, ಉಪನ್ಯಾಸಕಾರದ ದೇವೇಂದ್ರ ತಳವಾರ, ವ್ಹಿ.ಬಿ. ಪಾಟೀಲ ಇದ್ದರು.ಇಮಾಮಸಾಬ್ ವಲ್ಲೆಪ್ಪನವರ ತಂಡದವರು ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು.